ಪುರಂದರದಾಸರು
ಪುರಂದರದಾಸರು
ಅಂಜಬೇಡ ಬೇಡವೆಲೆ ಜೀವ -ಭವ - |
ಭಂಜನ ಹರಿಶರಣರ ತಾವ ಪ.ಬಂದಷ್ಟರಿಂದಲಿ ಬಾಳಿಕೊ - ಬಲು - |
ಸಂದೇಹಬಂದಲ್ಲಿ ಕೇಳಿಕೊ |
ನಿಂದಾ - ಸ್ತುತಿಗಳನು ತಾಳಿಕೊ - ಗೋ - |
ವಿಂದ ನಿನ್ನವನೆಂದು ಹೇಳಿಕೊ 1ಮಾಧವನಿಗೆ ತನುಮನ ಮೆಚ್ಚು - ಕಾಮ - |
ಕ್ರೋಧಾದಿಗಳಕಲಿಮಲ ಕೊಚ್ಚು |
ಮೋದತೀರ್ಥವಚನವೆ ಹೆಚ್ಚು -ಮಾಯಾವಾದಿಮತೆಕೆ ಬೆಂಕಿಯ ಹಚ್ಚು 2ಪರವನಿತೆಯ ರಾಶಿಯ ಬಿಡು - ನೀಹರಿಸರ್ವೋತ್ತಮನೆಂದು ಕೊಂಡಾಡು |
ಪರಮಾತ್ಮನ ಧ್ಯಾನವಮಾಡು - ನಮ್ಮ - |
ಸಿರಿಪುರಂದರವಿಠಲನ ನೀನೋಡು3
ಅಂಜರು ಹರಿಭಟರು ದುರಿತಾರಿಗಂಜರು ಹರಿಭಟರುಮಂಜಿನ ದಂಡೋಡಿಪ ಮೂಡಣವರಕಂಜಸಖನ ಪೋಲ್ವವರು ಪ.ಅಗ್ಗಳಿಕೆಯೈಗಣೆಯನ ಬಲದಲಿಮುಗ್ಗದೆ ಕುಲಿಶೆದೆಯಲ್ಲಿ ವೈರಾಗ್ಯಾಸ್ತ್ರದಿ ಈರೈದಾಳಾಣ್ಮನಕುಗ್ಗಿಸಿ ಸೆರೆ ತರುವವರು 1ಮೂರರಾಯುಧ ಹತಿಭಯಜರಿದುವಾರಣನಾಕೆರಡಿರಿದು ಶೃಂಗಾರದ ರಾಹುತರೆಂಟರ ಸದೆವರುವೀರಹರಿಧ್ವನಿಯವರು2ಎರಡೊಂಬತ್ತು ನಾದಿಕಾಭೇರಿಎರಡು ಕಹಳೆಯ ಚೀರಿಸರಕುಮಾಡಿ ನವಕಲಿ ಸಂಜಿತರುಹರಿಮಂಡಿತ ನವರಥರು3ಒಂದೆ ನಿಷ್ಠೆಯ ರಣಧ್ವಜ ಮೇರೆಗೆಹಿಂದಾಗದೆ ಮುಂದಾಗಿಒಂದಿಪ್ಪತ್ತರಿ ವ್ಯೂಹ ಕೆಡಹುವರುಕುಂದದ ಧೃತಿ ಮತಿಯವರು 4ಹಂಗಿನ ಸ್ವರ್ಗವ ಸೂರ್ಯಾಡುವರುಡಂಗುರ ಹೊಯ್ಯುವ ಮಹಿಮರುರಂಗ ಪ್ರಸನ್ವೆಂಕಟಪತಿ ಭಟರುಮಂಗಳಪದ ಲಂಪಟರು 5ಪುರಂದರದಾಸರು
ಪುರಂದರದಾಸರು
ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕುತಿ ಕೈಕೊಂಡ ಬಳಿಕ ಪನಾರಾಯಣನೆಂಬ ನಾಲ್ಕು ಅಕ್ಷರದಿಂದಘೋರಪಾಪವನೆಲ್ಲ ಕಳೆಯಬಹುದು |
ಶ್ರೀ ರಾಮನಾಮವೆಂಬ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು 1ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದಕಾಕುಕರ್ಮಗಳನ್ನು ಕಳೆಯಬಹುದು |
ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡುನೂಕಿ ಯಮಬಂಟರನು ನುಗ್ಗು ಮಾಡಲುಬಹುದು 2ಹರಿವಾಸುದೇವನೆಂಬ ಅಮೃತಪಾನಗಳಿಂದಮರಣ ಜನನಗಳೆರಡ ಜಯಿಸಬಹುದು |
ಅರಿತರೆ ಮನದೊಳಗೆ ಪುರಂದರವಿಠಲನಸರಸ ಸದ್ಗತಿಯನ್ನು ಸವಿಗಾಣಬಹುದು 3
ಅಂಜಾನೆತನಯಧ |
ನಂಜಾಯನಗ್ರಜ |
ಕಂಜಾಕ್ಷ ಶ್ರೀ ಮಧ್ವ |
ಸಂಜಯವಂತಾ 1ಮಾರುತಿ ನಿನ್ನಯ |
ಕೀರುತಿ ಜಗದೊಳು |
ಬೀರುತಿದ ಕೊ ನಾ |
ಸಾರುತೀ ನೀಗಾ 2ರಾವಣಾನುಜ ಸು |
ಗ್ರೀವಾ ವಿಪ್ರಜಾನಂತೆ |
ಭೂವರನಂತೆ ಕಾಯೋ |
ದೇವೇಂದ್ರ ಪಾಲಾ3ಪ್ರಸ್ತುತಬಿನ್ನಪ|
ವಿಸ್ತರಿಪಕೃತಿಸ |
ಮಸ್ತರೂ ಕೇಳಲಿ |
ಆಸ್ಥೀಯಲಿಂದಾ4ಪ್ರಾಣೇಶ ವಿಠ್ಠಲಾ ಪ್ರೀ |
ತಾನಾಗಬೇಕೀದಕೆ |
ಹೀನ ವಿಷಯಗಳಾ |
ನಾನೊಲ್ಲೆ ದೇವ 5ಪುರಂದರದಾಸರು
ಪುರಂದರದಾಸರು
ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡ ಜಗಳವೇ ಲೇಸು ಪ.ಡಂಭಕರ ಮನೆಯಪಮಾನದೂಟಕ್ಕಿಂತತುಂಬಿದ ಪಟ್ಟಣದಿ ತಿರಿದುಂಬುವುದೆ ಲೇಸು |
ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತನಂಬಿ ಹರಿದಾಸರೊಳಾಡುವುದೆ ಲೇಸು 1ಒಡಲ ಹಂಗಿಸುವರ ಮನೆಯ ಓಗರಕಿಂತಕುಡಿನೀರ ಕುಡಿದುಕೊಂಡಿಹುದೆ ಲೇಸು |
ಬಿಡದೆ ಕಡಿದಾಡುವರ ನೆರೆಯಲಿಹುದಕಿಂತಅಡವಿಯೊಳಜ್ಞಾತವಾಸವೇ ಲೇಸು 2ಮಸೆದು ಮತ್ಸರಿಸುವನ ಬಳಿಯಲಿಹುದಕಿಂತಹಸನಾದ ಹಾಳುಗುಡಿಗಳೆ ಲೇಸು |
ಬಿಸಜಾಕ್ಷ ಪುರಂದರವಿಠಲನ ನೆನೆನೆನೆದುವಸುಧೆಯೊಳು ಚಿರಕಾಲವಿರುವುದೆ ಲೇಸು 3
ಅಡಗುವದುಘನಅಡಗುವದುತೋರದಡಗದು ದೃಷ್ಟಿಯಲ್ಲಿಪxmಟ veಡಿsioಟಿ=1.0 eಟಿಛಿoಜiಟಿg=%SಔUP-ಇಓಅಔಆIಓಉ%ಮಡದಿ ಮಕ್ಕಳು ಮನೆಯ ಬಲ್ಲಿತೊಡಕಿದೆ ಮನ್ಮಥನ ಬಲೆಯಲ್ಲಿ1ನಾನೀನೆಂಬಭಿಮಾನದಲಿಸ್ವಾನುಭವದ ಸುಖ ವ್ಯರ್ಥವೇ ಅಲ್ಲಿ2ದೀಪಕ ಶಂಕರನ ಪ್ರಭೆಯಲ್ಲಿದೀಪ ಕೀಟಕ.................3ಪುರಂದರದಾಸರು
ಪುರಂದರದಾಸರು
ಅಂತಕನ ದೂತರಿಗೆ ಕೃಪೆಯಿಲ್ಲವದರಿಂದ |
ಚಿಂತೆಯನು ಬಿಟ್ಟು ಶ್ರೀ ಹರಿಯೆ ನೆನೆ ಮನವೆ ಪ.ದಿವರಾತ್ರಿಯೆನ್ನದೇ ತಿರುಗಿ ಲಂಪಟನಾಗಿ |
ಸವಿಗಂಡ ಊಟಗಳ ಉಣಲರಿಯದೆ |
ಅವನ ಕೊಂದು ಇವನ ಕೊಂದು ಅರ್ಥವನು ಗಳಿಸಿಕೊಂಡು |
ಜವನ ದೂತರು ಬಂದು ಎಳೆವ ಹೊತ್ತರಿಯೆ 1ಮೊನ್ನೆ ಮದುವೆಯಾದೆ ಕರೆವುವು ಒಂದೆರಡಮ್ಮೆ |
ನಿನ್ನೆ ಕೊಂಡೆನು ಕ್ಷೇತ್ರ ಫಲಬಾಹೊದು |
ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲಾ |
ತನ್ನ ದೂತರು ಬಂದು ಎಳೆವ ಹೊತ್ತರಿಯೆ 2ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ |
ಬಸಿರೆ ಹೆಂಡತಿ ಮಗನ ಮದುವೆಯು ನಾಳೆ |
ಹಸನವಾಗಿದೆ ಬದುಕು ಸಾಯಲಾರೆನು ಎನಲು |
ವಿಷಮ ದೂತರು ಬಂದು ಎಳೆವ ಹೊತ್ತರಿಯೆ 3ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬಮತ್ತೊಬ್ಬ ಮಗನ ಉಪನಯನ ನಾಳೆ |
ಅರ್ಥಿಯಾಗದೆ ಬದುಕು ಸಾಯಲಾರೆನು ಎನಲು |
ಮೃತ್ಯು ಹೆಡತಲೆಯಲಿ ನಗುತಿಹುದರಿಯೆ 4ಅಟ್ಟಡಿಗೆ ಉಣಲಿಲ್ಲ ಇಟ್ಟ ನೀರ್ಮೀಯಲಿಲ್ಲ |
ಕೊಟ್ಟ ಸಾಲವ ಕೇಳ್ವ ಹೊತ್ತ ಕಾಣೆ |
ಕಟ್ಟಕಡೆಯ ದಿವಸ ತಂಬಿದ ಬಳಿಕಿರಲಿಲ್ಲ |
ಇಷ್ಟರೊಳು ಪುರಂದರವಿಠಲನ ನೆನೆಮನೆವೆ 5
ಅಂತರಂಗದಲಿ ಹರಿಯ ಕಾಣದವ ತಾ ಹುಟ್ಟುಗುರುಡನೊಸಂತತ ಶ್ರೀ ಕೃಷ್ಣಚರಿತೆ ಕೇಳದವ ಜಡಮತಿಯೆ ಕಿವುಡನೊ ಎಂದೆಂದಿಗೂ ಪ.ಹರುಷದಿಂದಲಿ ಮುರಹರನ ಪೂಜೆಯ ಮಾಡದವನೆ ಕೈ ಮುರಿದವನೊಕುರುವೀರ ಸೂತನ ಮುಂದೆ ಕೃಷ್ಣ ಎಂದುಕುಣಿಯದವನೆ ಕುಂಟನೊ |
ನರಹರಿ ಪಾದೋದಕ ಧರಿಸದ ಶಿರ ನಾಯುಂಡ ಹಂಚು ಕಾಣೊಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರಭೋಜನವೋ1ಅಮರೇಶ ಕೃಷ್ಣಗರ್ಪಿತವಲ್ಲದಕರ್ಮ ಅಸತಿಯ ವ್ರತನೇಮವೊರಮೆಯರಸಗೆ ಪ್ರೀತಿಯಿಲ್ಲದ ವಿತ್ತವು ರಂಡೆ ಕೊರಳಸೂತ್ರಕಮಲನಾಭನ ಪೊಗಳದಸಾರ ಸಂಗೀತ ಗಾರ್ದಭರೋದನವೊಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ 2ಜರೆ ಹುಟ್ಟು ಮರಣವ ತಡೆವ ಸುದ್ದಿಯ ಬಿಟ್ಟುಸುರೆಯ ಸುರಿಯ ಬೇಡವೊಸುರಧೇನು ಇರಲಾಗಿ ಶ್ವಾನನ ಮೊಲೆಹಾಲಕರೆದು ಕುಡಿಯಬೇಡವೊಕರಿ ರಥ ತುರಗವೇರಲು ಇದ್ದು ಕೆಡಹುವ ಕತ್ತೆ ಏರಲಿಬೇಡವೊಪರಮ ಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ 3ಪುರಂದರದಾಸರು
ಪುರಂದರದಾಸರು
ಅಂತರಂಗದಲಿ ಹರಿಯ ಕಾಣದವ ತಾ ಹುಟ್ಟುಗುರುಡನೊಸಂತತ ಶ್ರೀ ಕೃಷ್ಣಚರಿತೆ ಕೇಳದವ ಜಡಮತಿಯೆ ಕಿವುಡನೊ ಎಂದೆಂದಿಗೂ ಪ.ಹರುಷದಿಂದಲಿ ಮುರಹರನ ಪೂಜೆಯ ಮಾಡದವನೆ ಕೈ ಮುರಿದವನೊಕುರುವೀರ ಸೂತನ ಮುಂದೆ ಕೃಷ್ಣ ಎಂದುಕುಣಿಯದವನೆ ಕುಂಟನೊ |
ನರಹರಿ ಪಾದೋದಕ ಧರಿಸದ ಶಿರ ನಾಯುಂಡ ಹಂಚು ಕಾಣೊಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರಭೋಜನವೋ1ಅಮರೇಶ ಕೃಷ್ಣಗರ್ಪಿತವಲ್ಲದಕರ್ಮ ಅಸತಿಯ ವ್ರತನೇಮವೊರಮೆಯರಸಗೆ ಪ್ರೀತಿಯಿಲ್ಲದ ವಿತ್ತವು ರಂಡೆ ಕೊರಳಸೂತ್ರಕಮಲನಾಭನ ಪೊಗಳದಸಾರ ಸಂಗೀತ ಗಾರ್ದಭರೋದನವೊಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ 2ಜರೆ ಹುಟ್ಟು ಮರಣವ ತಡೆವ ಸುದ್ದಿಯ ಬಿಟ್ಟುಸುರೆಯ ಸುರಿಯ ಬೇಡವೊಸುರಧೇನು ಇರಲಾಗಿ ಶ್ವಾನನ ಮೊಲೆಹಾಲಕರೆದು ಕುಡಿಯಬೇಡವೊಕರಿ ರಥ ತುರಗವೇರಲು ಇದ್ದು ಕೆಡಹುವ ಕತ್ತೆ ಏರಲಿಬೇಡವೊಪರಮ ಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ 3