ಪ್ರಸನ್ನವೆಂಕಟದಾಸರು
ಪ್ರಸನ್ನವೆಂಕಟದಾಸರು
ಅಂಜರು ಹರಿಭಟರು ದುರಿತಾರಿಗಂಜರು ಹರಿಭಟರುಮಂಜಿನ ದಂಡೋಡಿಪ ಮೂಡಣವರಕಂಜಸಖನ ಪೋಲ್ವವರು ಪ.ಅಗ್ಗಳಿಕೆಯೈಗಣೆಯನ ಬಲದಲಿಮುಗ್ಗದೆ ಕುಲಿಶೆದೆಯಲ್ಲಿ ವೈರಾಗ್ಯಾಸ್ತ್ರದಿ ಈರೈದಾಳಾಣ್ಮನಕುಗ್ಗಿಸಿ ಸೆರೆ ತರುವವರು 1ಮೂರರಾಯುಧ ಹತಿಭಯಜರಿದುವಾರಣನಾಕೆರಡಿರಿದು ಶೃಂಗಾರದ ರಾಹುತರೆಂಟರ ಸದೆವರುವೀರಹರಿಧ್ವನಿಯವರು2ಎರಡೊಂಬತ್ತು ನಾದಿಕಾಭೇರಿಎರಡು ಕಹಳೆಯ ಚೀರಿಸರಕುಮಾಡಿ ನವಕಲಿ ಸಂಜಿತರುಹರಿಮಂಡಿತ ನವರಥರು3ಒಂದೆ ನಿಷ್ಠೆಯ ರಣಧ್ವಜ ಮೇರೆಗೆಹಿಂದಾಗದೆ ಮುಂದಾಗಿಒಂದಿಪ್ಪತ್ತರಿ ವ್ಯೂಹ ಕೆಡಹುವರುಕುಂದದ ಧೃತಿ ಮತಿಯವರು 4ಹಂಗಿನ ಸ್ವರ್ಗವ ಸೂರ್ಯಾಡುವರುಡಂಗುರ ಹೊಯ್ಯುವ ಮಹಿಮರುರಂಗ ಪ್ರಸನ್ವೆಂಕಟಪತಿ ಭಟರುಮಂಗಳಪದ ಲಂಪಟರು 5
ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕುತಿ ಕೈಕೊಂಡ ಬಳಿಕ ಪನಾರಾಯಣನೆಂಬ ನಾಲ್ಕು ಅಕ್ಷರದಿಂದಘೋರಪಾಪವನೆಲ್ಲ ಕಳೆಯಬಹುದು |
ಶ್ರೀ ರಾಮನಾಮವೆಂಬ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು 1ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದಕಾಕುಕರ್ಮಗಳನ್ನು ಕಳೆಯಬಹುದು |
ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡುನೂಕಿ ಯಮಬಂಟರನು ನುಗ್ಗು ಮಾಡಲುಬಹುದು 2ಹರಿವಾಸುದೇವನೆಂಬ ಅಮೃತಪಾನಗಳಿಂದಮರಣ ಜನನಗಳೆರಡ ಜಯಿಸಬಹುದು |
ಅರಿತರೆ ಮನದೊಳಗೆ ಪುರಂದರವಿಠಲನಸರಸ ಸದ್ಗತಿಯನ್ನು ಸವಿಗಾಣಬಹುದು 3ಪ್ರಸನ್ನವೆಂಕಟದಾಸರು
ಪ್ರಸನ್ನವೆಂಕಟದಾಸರು
ಅಂಜುವೆನದಕೆ ಕೃಷ್ಣ ಅಭಯವ ಕೋರಿದಕೆ ಪ.ನೀನಿತ್ತ ಮತಿಯಿಂದ ನಿನ್ನ ಹೊಗಳುತಿರೆಹೀನ ಮಾನವರೊಂದೊಂದೂಣೆಯ ನುಡಿವರು 1ಬಾಣವನೆಸೆದು ಬಿಲ್ಲನಡಗಿಸುವಂತೆಆ ನಿಂದಕರು ನಿಂದಿಶಾಣೆಗೆ ನಿಲುವರು 2ಮಾಧವನಾನೇನು ಓದಿದವನಲ್ಲ ಶ್ರೀಪಾದವೆ ಗತಿಯೆಂಬೆ ಬಾಧಿಸುತೈದಾರೆ 3ಅಪರಿಮಿತಪರಾಧಿ ಕಪಟಿ ನಾನಾಗಿಹೆಅಪರೋಕ್ಷಿಯೆಂದೆಂಬ ಕುಪಿತ ಖಳರ ನೋಡಿ 4ಹಿತಶತ್ರುಗಳ ಸಂಗತಿ ಸಾಕು ಪ್ರಸನ್ವೆಂಕಟಪತಿನಿನ್ನ ಭಕ್ತರ ಸಂಗ ಕೊಡು ಕಾಣೊ5
ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡ ಜಗಳವೇ ಲೇಸು ಪ.ಡಂಭಕರ ಮನೆಯಪಮಾನದೂಟಕ್ಕಿಂತತುಂಬಿದ ಪಟ್ಟಣದಿ ತಿರಿದುಂಬುವುದೆ ಲೇಸು |
ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತನಂಬಿ ಹರಿದಾಸರೊಳಾಡುವುದೆ ಲೇಸು 1ಒಡಲ ಹಂಗಿಸುವರ ಮನೆಯ ಓಗರಕಿಂತಕುಡಿನೀರ ಕುಡಿದುಕೊಂಡಿಹುದೆ ಲೇಸು |
ಬಿಡದೆ ಕಡಿದಾಡುವರ ನೆರೆಯಲಿಹುದಕಿಂತಅಡವಿಯೊಳಜ್ಞಾತವಾಸವೇ ಲೇಸು 2ಮಸೆದು ಮತ್ಸರಿಸುವನ ಬಳಿಯಲಿಹುದಕಿಂತಹಸನಾದ ಹಾಳುಗುಡಿಗಳೆ ಲೇಸು |
ಬಿಸಜಾಕ್ಷ ಪುರಂದರವಿಠಲನ ನೆನೆನೆನೆದುವಸುಧೆಯೊಳು ಚಿರಕಾಲವಿರುವುದೆ ಲೇಸು 3