ದೂರದಲ್ಲಿರ್ದನೆಂದು ಆನು ಬಾಯಾರಿ


Title vachana saahitya
Author Akka Mahaadevi
Year 1130-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ದೂರದಲ್ಲಿರ್ದನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ. ಸಾರಿ ಬೆರಸಿ ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡಡೆ ಎನ್ನ ಆರತವೆಲ್ಲವೂ ಲಿಂಗಾ ನಿಮ್ಮಲ್ಲಿ ನಟ್ಟಿತು ನೋಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮನು ಕರಸ್ಥಲದಲ್ಲಿ ನೋಡಿ ಕಂಗಳೆ ಪ್ರಾಣವಾಗಿರ್ದೆನಯ್ಯಾ.