ದೂರದ ತುದಿಗೊಂಬನಾರಯ್ಯ ಗೆಲುವರು ? ಮೀರಲಿಲ್ಲದ ನಿರಾಳದ ಘನವನು (ನಿಲವನು ?) ಮೀರಿ ಕಾಬ ಘನವನು ಬೇರೆ ತೋರಲಿಲ್ಲ. ತೋರಿ ಕಾಬಡೆ ತನ್ನ ಹಿಡಿಯಲಿಲ್ಲ. ಓರೆ ಆವಿನ ಹಾಲನಾರಯ್ಯ ಕರೆವರು ? ಮೂರು ಲೋಕದೊಳಗೆ ತಾನಿಲ್ಲ ಗುಹೇಶ್ವರಾ.