ದೇವಪ್ರಭೆಯೊಳಗಿಹರಲ್ಲದೆ ದೇವಗಹನವ ಮಾಡಬಾರದಾರಿಗೆಯೂ. ದೇವಸಕೀಲದೊಳಗೆ ಬೆಳೆಯಬಹುದಲ್ಲದೆ
ದೇವನಷ್ಟದೊಳಗೆ ಉತ್ಪತ್ಯವಾಗಬಾರದಾರಿಗೆಯೂ. ಉತ್ಪತ್ತಿಯ ಗಣತಿ(ಗತಿ?)ಯನಾರೋಗಣೆಯ ಮಾಡಬಾರದಾರಿಗೆಯೂ. ಸಚರಾಚರವೆಲ್ಲವೂ ಈ ಪರಿಯಲ್ಲಿ ಸಂಭ್ರಮಿಸುತ್ತಿರ್ದುದಲ್ಲಾ
ಇದು ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ ಇದ್ದ ಭಾವವಳಿದಡೆ ಲಿಂಗೈಕ್ಯವು.