ಆದ್ಯ ವಚನಕಾರ ವಚನ ಬ್ರಹ್ಮ ದೇವರ ದಾಸಿಮಯ್ಯನವರು.
ನಮ್ಮದು ಭರತ ಭೂಮಿ. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ರಾಷ್ಟ್ರ! ಪ್ರಪಂಚದಲ್ಲಿ ಮಿಕ್ಕ ದೇಶಗಳು ಭೌತಿಕವಾಗಿ ಸಮೃದ್ಧವಾಗಿರಬಹುದು, ಆದರೆ ಭೌತಿಕವಾಗಿ ಮಾತ್ರವಲ್ಲದೆ ಆಧ್ಯಾತ್ಮಕವಾಗಿಯೂ ಅತ್ಯಂತ ಸಮುದ್ಧವಾದ ದೇಶ 'ಭಾರತ'. ಆದಿ ಕಾಲದಿಂದಲೂ ಅನೇಕ ಋಷಿ-ಮುನಿಗಳು ತಮ್ಮ ಅಮೋಘ ತಪಸ್ಸಿ ನಿಂದ ಸಿದ್ಧಿಯನ್ನು ಪಡೆದು ಆಧ್ಯಾತ್ಮಿಕತೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಪುಣ್ಯ ಭೂಮಿಯಿದು.ಅಂತಹ ಸಾಧುಗಳಲ್ಲೊಬ್ಬರು 'ಶ್ರೀ ದೇವರ ದಾಸಿಮಯ್ಯ'. ಈ ಪುಣ್ಯ ಪುರುಷನ ಬಗ್ಗೆ ಹಲವರಿಗೆ ಪರಿಚಯವಿಲ್ಲ. ಇವರು ಕೇವಲ ಒಬ್ಬ ಮುನಿ ಮಾತ್ರವಲ್ಲದೆ, 10 /11 ನೇ ಶತಮಾನದಲ್ಲಿದ್ದ ಮೊಟ್ಟಮೊದಲ ವಚನಕಾರರೂ ಹೌದು. ಹಾಗಾಗಿ ಈ ಮಹರ್ಷಿಯ ಒಂದು ಕಿರುಪರಿಚಯ.
ದೇವರ ದಾಸಿಮಯ್ಯ (ದೇವಲ ಮಹರ್ಷಿ) ಸರಿ ಸುಮಾರು 10ನೇ ಶತಮಾನದವರು. ಸುರಪುರ ಜಿಲ್ಲೆಯ ಮುದನೂರು ಎಂಬ ಹಳ್ಳಿಯಲ್ಲಿ ಜನನ. ಮುದನೂರು ಹಲವಾರು ದೇವಾಲಯಗಳಿಂದ ಕೂಡಿದ್ದು, ಅಲ್ಲಿನ ರಾಮನಾಥ ದೇವಸ್ಥಾನ ದೇವಲ ಮಹರ್ಷಿಯರ ಅಚ್ಚುಮೆಚ್ಚು. ರಾಮನಾಥ ಸ್ವಾಮಿಯ ಆರಾಧಕರು. ರಾಮನಾಥ ಎಂದರೆ ಶಿವ (ರಾಮನು ಪೂಜಿಸುತ್ತಿದ್ದಂತಹ ದೇವರು). ದೇವಲ ಮಹರ್ಷಿಯು ಶಿವನ ಅಪಾರ ಭಕ್ತರಾಗಿದ್ದು 'ರಾಮನಾಥ' ಇವರ ಅಂಕಿತನಾಮವಾಗಿತ್ತು.
ದೇವರ ದಾಸಿಮಯ್ಯ ತಮ್ಮ ಯೌವನಾವಸ್ಥೆಯಲ್ಲಿ ಹೆತ್ತವರ ಇಚ್ಛೆಯಂತೆ, ಶಿವಪುರದ ದುಗ್ಗಳೆಯನ್ನು ವರಿಸತ್ತಾರೆ, ಆಕೆ ಮಹಾನ್ ಸಾಧ್ವಿಮಣಿ. ದಂಪತಿಗಳಿಬ್ಬರೂ ಸಜ್ಜನರು, ದೈವಭಕ್ತರು, ಧಾರಾಳತನವುಳ್ಳವರೂ ಆಗಿದ್ದು, ಯಾರೇ ಕಷ್ಟದಲ್ಲಿದ್ದರೂ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಸುವರ್ಚಲೆ ಇವರ ಸುಪುತ್ರಿ, ಮಹಾನ್ ಜ್ಞಾನಿ. ಹೀಗಿದ್ದರೂ ದಾಸಿಮಯ್ಯರಿಗೆ ಬದುಕಿನಲ್ಲಿ ಎನೋ ಶೂನ್ಯತೆ ಕಾಡುತ್ತಿತ್ತು. ಹೀಗೊಂದು ದಿನ ಆಲೋಚಿಸುತ್ತಿರುವಾಗ ದೇವರನ್ನು ಒಲಿಸಿಕೊಳ್ಳಲು ಸಂನ್ಯಾಸತ್ವವೇ ಸರಿಯಾದ ಮಾರ್ಗವೆಂದು ಅರಿತು, ಅದನ್ನು ಸಿದ್ಧಿಸಿಕೊಳ್ಳುವ ಸಲುವಾಗಿ ದಟ್ಟ ಕಾಡಿನೆಡೆಗೆ ಹೊರಟುಹೋಗುತ್ತಾರೆ.
ಹಲವಾರು ವರ್ಷ ಸುಧೀರ್ಘ ತಪಸ್ಸನ್ನಾಚರಿಸಿ ಕಡೆಗೂ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗುತ್ತಾನೆ. ಸದಾಶಿವನು ದಾಸಿಮಯ್ಯರನ್ನು ಕುರಿತು ಹೀಗೆ ಸಂಬೋಧಿಸುತ್ತಾನೆ 'ದಾಸಿಮಯ್ಯ! ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ... ನಿನ್ನ ಕೋರಿಕೆಯನ್ನು ತಿಳಿಸು..'ಮಹದಾನಂದದಿಂದ ಋಷಿ ವರ್ಯರು ಹೀಗೆ ತಮ್ಮ ಕೋರಿಕೆ ಸಲ್ಲಿಸುತ್ತಾರೆ: 'ಭಗವನ್! ನಿನ್ನ ದರ್ಶನದಿಂದ ನನ್ನ ಜನ್ಮ ಇಂದಿಗೆ ಸಾರ್ಥಕವಾಯಿತು.. ಕೃಪೆತೋರಿ ನನಗೆ ಮೋಕ್ಷವನ್ನು ದಯಪಾಲಿಸು ಮಹದೇವ...'
ಶಿವನು: 'ದಾಸಿಮಯ್ಯ .. ಋಷಿಯಾಗಿ ಮೋಕ್ಷವನ್ನು ಪಡೆಯುವುದಷ್ಟೇ ಅಲ್ಲಾ... ನೀನು ಮಾಡಬೇಕಾದ ಮಹತ್ಕಾರ್ಯ ಬಹಳಷ್ಟಿದೆ! ದೇವ-ದೇವತೆಯರು ಹಾಗೂ ಮಾನವರಿಗೆ, ತಮ್ಮ ಮಾನ-ಶರೀರ ಸಂರಕ್ಷಣೆಯನ್ನು ಕಾಪಾಡಲು ವಸ್ತ್ರವನ್ನು ತಯಾರಿಸುವ ಕಾರ್ಯ ನಿನ್ನಿಂದ ಆಗಬೇಕಿದೆ. ಪರಮಾತ್ಮನನ್ನು ಕಾಣಲು ಸಂನ್ಯಾಸಿಯಾಗಿ ತಪಸನ್ನಾಚರಿಸುವ ಅಗತ್ಯವಿಲ್ಲ... ಸಂಸಾರಿಯಾಗಿದ್ದೂ ಆಧ್ಯಾತ್ಮಿಕತೆಯನ್ನು ಆಚರಿಸುವವನು ಅದಕ್ಕಿಂತ ಶ್ರೇಷ್ಠನು. ಜನರು ತಮ್ಮ ಕಾಯಕದಲ್ಲಿ ದೇವರನ್ನು ಕಾಣಬೇಕು. ಶ್ರದ್ಧಾಭಕ್ತಿಯಿಂದ ತಮ್ಮ ದೈನಂದಿನ ಕಾರ್ಯಾಚರಣೆಯಲ್ಲಿ ತೊಡಗಬೇಕು. ಆದೇ ನಿಜವಾದ ಮನುಕುಲದ ಉದ್ದೇಶ. ಈ ಸಂದೇಶವನ್ನು ಮಾನವರಿಗೆ ಅರ್ಥವಾಗುವ ರೀತಿಯಲ್ಲಿ ಮನದಟ್ಟು ಮಾಡು. ಇದೇ ನಿನ್ನ ಜನ್ಮದುದ್ದೇಶ..'
ಶಿವನ ಕೃಪೆಗೆ ಪಾತ್ರನಾದ ಅಸಿತ ದೇವಲನು (ದಾಸಿಮಯ್ಯ), ರಾಮನಾಥನ ಇಚ್ಚೆಯಂತೆ ತನ್ನ ಹುಟ್ಟೂರಿಗೆ ಹಿಂದಿರುಗುತ್ತಾನೆ. ವಸ್ತ್ರವು ಜನರ ಮಾನವನ್ನು ಕಾಪಾಡುವ ಮತ್ತು ದೇಹಕ್ಕೆ ರಕ್ಷಣೆಕೊಡುವ ಭಗವಂತನ ಒಂದು ವರಪ್ರದಾನವೆಂದು ತಿಳಿದ ದಾಸಿಮಯ್ಯ ವಸ್ತ್ರ ನಿರ್ಮಸುವ ಕಲೆಯನ್ನು ಪಾರಂಗತಗೊಳಿಸಿಕೊಂಡು ಲೋಕಕ್ಕೆ ಬಟ್ಟೆಯನ್ನು ಅರ್ಪಿಸಿದರು. ದಂಪತಿಗಳಿಬ್ಬರೂ, ಸೀರೆ ನೇಯ್ಗೆ ಉದ್ಯೋಗದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು, ನೇಯ್ಗೆಯನ್ನು ದೇವರ ಕಾರ‍್ಯದಂತೆ ಆಚರಿಸುತ್ತಾ ಇತರರಿಗೆ ಮಾದರಿಯಾಗಿ ಇನ್ನೂ ಅನೇಕ ಮಂದಿಗೆ ಉದ್ಯೋಗ ಕಲಿಸಿ ಜೀವನೋಪಾಯಕ್ಕೆ ದಾರಿತೋರಿಸುತ್ತಾರೆ. ಹೀಗಾಗಿ ಇವರು 'ಜೇಡರ ದಾಸಿಮಯ್ಯ'ರೆಂದೂ ಪ್ರಸಿದ್ಧರಾದರು.
ದಾಸಿಮಯ್ಯರ ಚಿತ್ರಗಳನ್ನು ಗಮನಿಸಿ , ಜನಿವಾರ ತೊಟ್ಟ ಮುನಿವರ್ಯರ ಎಡಗೈಯಲ್ಲಿ ಕಮಂಡಲ ಹಾಗೂ ಬಲಗೈಯಲ್ಲಿ ಬಟ್ಟೆ ಕಾಣಬಹುದು. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ. ಇಂದಿನ ದೇವಾಂಗ ಜನಾಂಗದ ಕುಲ ಗುರುವಾದರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯ ಪ್ರಪಂಚಕ್ಕೆ ತಿಳಿಸಿ ಹೇಳಿದರು.
ಇನ್ನು ದೇವಾಂಗ ದಾಸಿಮಯ್ಯರ ಕೃತಿ ಪರಿಚಯಕ್ಕೆ ಬಂದರೆ, ರಾಮನಾಥ ಎಂಬ ನಾಮಾಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ. ದೇವಲರು, ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಶರಣರಿಗಿಂತಲೂ (ಬಸವಣ್ಣ ಮತ್ತು ಅಕ್ಕಮಹಾದೇವಿಯವರಿಗೂ) ಮುಂಚಿತವಾಗಿ ದ್ದಂತಹ ಮೊಟ್ಟ ಮೊದಲ ವಚನಕಾರರು. ದಾಸಿಮಯ್ಯನವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಆದರೆ ವಿಷಾದದ ಸಂಗತಿಯೆಂದರೆ ಇವರ ಬಗ್ಗೆ ಹೆಚ್ಚಿಗೆ ಪ್ರಚಾರಗಳಾಗಲಿಲ್ಲ. ತಡವಾಗಿಯಾದರೂ ಈಗೀಗ ಕೆಲವು ಬುದ್ಧಿಜೀವಿಗಳು ದೇವಲರ ವಚನಗಳನ್ನು ಹೊರತರುತ್ತಿದ್ದಾರೆ.
ದೇವರ ದಾಸಿಮಯ್ಯನವರ ಪತ್ನಿ ದುಗ್ಗಳೆಯೂ ಸಹ ಸತಿ ಶಿರೋಮಣಿಯಾಗಿ ಮಹಾ ಪ್ರತಿವ್ರತೆಯಾಗಿದ್ದು ತಮ್ಮ ಗಂಡನ ಜೊತೆಯಲ್ಲಿ ಆಕೆ ಕೂಡ ಭಕ್ತಿಯಲ್ಲಿ,ಸಂಸಾರದಲ್ಲಿ ಹೆಸರು ಮಾಡಿದವರು. ಇವರುಗಳ ಬಗ್ಗೆ ಹೆಚ್ಚಿಗೆ ಎಲ್ಲೂ ಪ್ರಚಾರಗಳಾಗಲಿ, ಪುಸ್ತಕಗಳಾಗಲಿ ಜಾಸ್ತಿ ಪ್ರಚಲಿತದಲ್ಲಿ ಇಲ್ಲದಿರುವುದೇ ನಮ್ಮ ದುರಾದೃಷ್ಠ. ಆಗಾಗಿ ಹೆಚ್ಚು ಬೆಳಕೆಗೆ ಬರಲಿಲ್ಲ, ಇವರ ಬಗ್ಗೆ ತಿಳಿದುಕೊಳ್ಳಲು. ಮುಂದಾದರು ಇಂತಹ ಮಹಾಸಾಧ್ವಿಗಳು ನಮ್ಮ ನಾಡಲ್ಲಿ ಇದ್ದರು ಎನ್ನುವುದಕ್ಕೆ ಕುರುಹುಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಇತಿಹಾಸದಲ್ಲಿ, ಪುರಾಣದಲ್ಲಿ ಇವರ ಬಗ್ಗೆ ತಿಳಿಯಲು ಎಲ್ಲರು ಶ್ರಮಿಸಬೇಕು. ದೇವರ ದಾಸಿಮಯ್ಯನವರು ಶತ-ಶತ ಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಪ್ರಸಿದ್ಧ ಶರಣರಿಗಿಂತಲೂ, ಮೊದಲು ಬಂದಂತಹ ಮೊಟ್ಟ ಮೊದಲ ಆದ್ಯ ವಚನಕಾರರಾಗಿದ್ದಾರೆ. ಇವರೇ ವಚನಗಳಿಗೆ ತಳಹದಿ ನೀಡಿದವರು. ವಚನಗಳನ್ನು ತಮ್ಮ ಸಾಮಾಜಿಕ ಜೀವನದಲ್ಲಿಯೇ ಕಂಡುಕೊಂಡು ರಚಿಸಿದರು.
ಸೀರೆ ನೇಯುತ್ತಾ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ, ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದವರು.ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು "ರಾಮನಾಥ "ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ.ದೇವರ ದಾಸಿಮಯ್ಯನವರ ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ, ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬ೦ದವು. ದಾಸಿಮಯ್ಯ, ದೇವರ ದಾಸಿಮಯ್ಯ, ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಮುದನೂರು ದಾಸಿಮಯ್ಯ, ತವನಿಧಿಯ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಅವರು ರಾಮನಾಥ ಎಂಬ ದೇವರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟು ಕೊಂಡಿದ್ದರು. "ರಾಮನಾಥ" ಎನ್ನುವ ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ.
ಕನ್ನಡ ನಾಡಿನ ಶಿವ ಶರಣರರಲ್ಲಿ ದೇವರ ದಾಸಿಮಯ್ಯನವರು 11 ನೇ ಶತಮಾನದಲ್ಲಿ ಆಗಿ ಹೋದ ಶರಣರು. ಮಹಾಶಿವಶರಣರಲ್ಲಿ ಇವರೊಬ್ಬರು ಮತ್ತು ಶರಣ ಸಂಪ್ರದಾಯ ದಲ್ಲಿ ಮೊದಲಿಗರು ಹಾಗು ಆದ್ಯ ವಚನಕಾರ ಪಿತಾಮಹ, ಜನಪದ ಜಗದ್ಗುರು ಎಂಬ ಬಿರುದು ಸಹ ಇವರಿಗೆ ಇದೆ. ದೇವರ ದಾಸಿಮಯ್ಯನು ಒಬ್ಬ ಐತಿಹಾಸಿಕ ಪುರುಷ ನೆಂಬುದಕ್ಕೆ ಶಿಲಾ ಶಾಸನ ಗಳು ಬಲವಾದ ಪ್ರಮಾಣ ಗಳಾಗಿವೆ. ಅವನ ನಂತರ ಸ್ವಲ್ಪ ಕಾಲದಲ್ಲಿಯೇ ಅವತರಿಸಿದ ಬಸವಣ್ಣನವರು ಈ ಶರಣ ದಂಪತಿಗಳ ಮಹಿಮೆಯನ್ನು ಅವರ ಚರಿತ್ರೆಯಲ್ಲಿ ಘಟನೆಗಳನ್ನು, ವಚನಗಳನ್ನು ತನ್ನ ವಚನ ವಾಜ್ಞ ಯದಲ್ಲಿ ನಿರರ್ಗಳವಾಗಿ ಉಲ್ಲೇಖಿಸಿದ್ದಾರೆ.
ದಾಸಿಮಯ್ಯನು ವೃತ್ತಿ, ನೇಯ್ಗೆಯ ವೃತ್ತಿ. ನೇಯ್ಗೆಯ ಕಾಯಕವನ್ನು ಮಾಡಿ ಅನೇಕ ಪವಾಡ ಗಳನ್ನು ಮಾಡಿದ್ದಾನೆ. ಅಲ್ಲದೆ ಸಾಕ್ಷತ್ ಪರಶಿವನಿಂದ ತವನಿಧಿಯನ್ನು ಪಡೆದ ಶರಣ. ಈ ಶರಣನು ಜ್ಞಾನಿಯೂ ಬೋಧೆಯಲ್ಲಿ ಬಲ್ಲಿದನೂ ಆದಂತೆ, ವಚನ ಸಾಹಿತ್ಯ ರಚನೆಯಲ್ಲಿಯೂ ಪ್ರಬಲನಾಗಿದ್ದನು. ಅಲಂಕಾರಿಕವಾದ ಸ್ವಲ್ಪ ಶಬ್ದಗಳ ನುಡಿಯಲ್ಲಿ ದಿವ್ಯವಾದ, ವಿಶಾಲವಾದ ಅರ್ಥ, ಯಾರೂ ತೆಗೆದು ಹಾಕದಂತಹ ಅಭಿಪ್ರಾಯ ಇಂತಹ ಅಮೃತ ಬಿಂದು ಮನೋಜ್ಞವಾಣಿ ಆತನ ವಚನಗಳಾಗಿವೆ.
'ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ? ಕಡೆಗೀಲು ಬಂಡಿಗಾಧಾರ. ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.'
ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ. ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ ನರಕದಲ್ಲಿಕ್ಕಯ್ಯಾ! ರಾಮನಾಥ.
ಈ ರೀತಿ ನೂರಾರು ವಚನಗಳನ್ನು ವಚನಕೋಶದಲ್ಲಿ ಕಾಣುತ್ತೇವೆ.ದೇವರ ದಾಸಿಮಯ್ಯನವರ ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ,ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬ೦ದವು. ದಾಸಿಮಯ್ಯನವರನ್ನು ದೇವರ ದಾಸಿಮಯ್ಯ, ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಅವರು ರಾಮನಾಥ ಎಂಬ ದೇವರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟು ಕೊಂಡಿದ್ದರು. ಕೊನೆಯಲ್ಲಿ ಇವರ ಆರಾಧ್ಯ ದೈವವಾದ "ರಾಮನಾಥ" ಎಂಬ ಅಂಕಿತವನ್ನು ಕಾಣಬಹುದು.
ದೇವರ ದಾಸಿಮಯ್ಯನವರ ಉಪಲಬ್ಧ ವಚನಗಳಲ್ಲಿ ಉತ್ಕಟವಾದ ವೀರಶೈವ ನಿಷ್ಠೆ, ನಿಷ್ಠುರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ, ಔಚಿತ್ಯಪೂರ್ಣವಾದ ದೃಷ್ಟಾಂತಗಳ ಸಂಪತ್ತಿಯ ಗುಣಗಳು ಎದ್ದು ಕಾಣುತ್ತವೆ. ದೇವರ ದಾಸಿಮಯ್ಯ ವಿಶ್ವದ ಪ್ರಥಮ ವಚನಕಾರ. ಅವರು ರಾಮನಾಥ ಎಂಬ ಹೆಸರಲ್ಲಿಯೇ 176 ವಚನಗಳನ್ನು ರಚಿಸಿದ್ದಾರೆ.
ಗುಲ್ಬರ್ಗಾ ಜಿಲ್ಲೆಯಲ್ಲಿರುವ ಸುರಪುರ ತಾಲ್ಲೂಕಿನ ಮುದನೂರು ಎಂಬ ಊರಿನಲ್ಲಿ ದೇವರ ದಾಸಿಮಯ್ಯನವರು ಜನಿಸಿದರು. ಈ ಊರಿನಲ್ಲಿ ಸುಮಾರು ದೇವರ ದೇವಾಲಯಗಳು ಇದೆ. ಎಲ್ಲಾ ಪಂಥಗಳ ದೇವ ಸ್ಥಾನಗಳನ್ನು ಹೊಂದಿದ ಕ್ಷೇತ್ರವಿದು. ಎಲ್ಲಕ್ಕಿಂತ ರಾಮನಾಥ ಎನ್ನುವ ದೇವರ ಮೇಲೆ ಹೆಚ್ಚಿನ ಪ್ರೀತಿ ದೇವರ ದಾಸಿಮಯ್ಯನವರಿಗೆ. ಈಗಾಗಿ ತಮ್ಮ ವಚನಗಳಿಗೆ "ರಾಮನಾಥ" ಎನ್ನುವ ನಾಮಾಂಕಿತ ವನ್ನು ನೀಡಿದ್ದಾರೆ. ಇವರು ನೇಯ್ಗೆ ವೃತ್ತಿಯಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. 10ನೇ ಶತಮಾನದಲ್ಲಿ ಬರುವ ಇವರು ಮೊಟ್ಟ ಮೊದಲ ವಚನಕಾರರಾಗಿದ್ದಾರೆ. ಇವರ ಪತ್ನಿ ದುಗ್ಗಳೆ. ಇಬ್ಬರದೂ ಅನ್ಯೋನ್ಯವಾದ ದಾಂಪತ್ಯ ಜೀವನ. ದೇವರನ್ನು ಒಲಿಸಲು ಮತ್ತು ಮುಕ್ತಿಯನ್ನು ಪಡೆಯಲು ಸನ್ಯಾಸಿಯ ಜೀವನ ಮಾಡಬೇಕಿಲ್ಲ, ವಿವಾಹ ಜೀವನದಲ್ಲಿಯೂ ಮೋಕ್ಷವನ್ನು ಪಡೆಯಬಹುದು ಮತ್ತು ಶಿವನ ಸಾಕ್ಷಾತ್ಕಾರವನ್ನು ಪಡೆಯಬಹುದೆಂದು ನಿರೂಪಿಸಿದವರು.
ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು ರಾಮನಾಥ ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ. ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ. ಇವರು ದೇವಾಂಗ/ ದೇವ ಬ್ರಾಹ್ಮಣ ದವರಿಗೆ ಕುಲಗುರುವಾಗಿರುತ್ತಾರೆ, ಇದನ್ನು ಈಗಿನ ಎಲ್ಲಾ ದೇವಾಂಗ ಜನಾಂಗದವರು ತಮ್ಮ ಪೀಳಿಗೆಗಳಿಗೆ ತಿಳಿಸಿ ಹೇಳಬೇಕು. ಅವರ ಬಗ್ಗೆ ತಿಳಿಸಕೊಡಬೇಕು.ಅನೇಕ ಪವಾಡಗಳನ್ನು ಮಾಡಿದ ಇವರು, ಪವಾಡವೊಂದೆ ಅಲ್ಲ, ಮನುಷ್ಯನ ಜೀವನದಲ್ಲಿ ದೇವರ ಸ್ಮರಣೆಯೂ ಹಾಗೂ ಜೀವನದಲ್ಲಿ ಸಾಧನೆಯೂ ಅಷ್ಟೇ ಪ್ರಮುಖವೆಂದು ನಂಬಿ ಭಕ್ತಿ ಸಾಧನೆಯಲ್ಲಿಯೇ ಬಹಳ ಹೆಸರನ್ನು ಪಡೆದವರು. ಒಂದು ರೀತಿಯಲ್ಲಿ ಎಲ್ಲರಿಗೂ ಶಿಕ್ಷಕರಾಗಿದ್ದರು. ಅನೇಕ ಮಹಾನ್ ವ್ಯಕ್ತಿಗಳನ್ನು ತಮ್ಮ ಭಕ್ತಿಯ ವಾದದಿಂದ ಸೋಲಿಸಿ, ಆಗಿನ ಕಾಲದಲ್ಲಿಯೇ ಪ್ರಸಿದ್ಧಿ ಪಡೆದು ಹೆಸರಾದವರು. ಶಿವನ ದರ್ಶನದಿಂದ ವರವನ್ನು ಪಡೆದ ಇವರು ಸರಳ, ಸಜ್ಜನಿಕೆಯ ಸ್ವಭಾವದವರಾಗಿದ್ದು, ಎಲ್ಲರಲ್ಲಿಯೂ ಭಕ್ತಿಯ ಸಿಂಚನವನ್ನು ಸಿಂಪಡಿಸಿದರು.
ಸಪ್ತ ತೀರ್ಥಗಳ ನಿಸರ್ಗ ಸೌಂದರ್ಯದ ನಡುವಿರುವ ಮುದನೂರು ಕಲಬುರ್ಗಿ ಜಿಲ್ಲೆಯ ಒಂದು ಹಳ್ಳಿ ಅದು ದಾಸಿಮಯ್ಯನ ಜನ್ಮಸ್ಥಳವು. ಆ ಊರಲ್ಲಿ ರಾಮನಾಥ ದೇವಾಲಯವಿದ್ದು ರಾಮನಾಥನೇ ದಾಸಿಮಯ್ಯನ ಆರಾಧ್ಯ ದೈವವು ಅವನ ವಚನಾಂಕಿತ ರಾಮನಾಥ ಎಂದಿದೆ. ಅವನ ತಂದೆಯ ಹೆಸರು ರಾಮಯ್ಯ ತಾಯಿ ಶಂಕರಿ ಅವರ ಮನೆತನದ ಉದ್ಯೋಗ ನೇಕಾರಿಕೆ ನೇಯ್ಕೆ ಕಾಯಕದಲ್ಲಿದ್ದರೂ ದಾಸಿಮಯ್ಯನಿಗೆ ಆತ್ಮಜ್ಞಾನದ ಹಸಿವು ಬಹಳವಾಗಿತ್ತು ಅದಕ್ಕಾಗಿ ಶ್ರೀಶೈಲಕ್ಕೆ ಹೋಗುತ್ತಾನೆ. ಪಂಡಿತಾರಾಧ್ಯ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಸಾಧನೆ ಮಾಡಿ ಶಿವಜ್ಞಾನ ಸಂಪನ್ನನಾಗುತ್ತಾನೆ.
ಶಿವಜ್ಞಾನ ಸಂಪನ್ನನಾದ ದಾಸಿಮಯ್ಯನು ಲೋಕ ಕಲ್ಯಾಣದ ಕೈಂಕರ್ಯ ತೊಟ್ಟು ಚಾಲುಕ್ಯ ರಾಜ್ಯದ ಪೊಟ್ಟಲ ಕೆರೆಯತ್ತ ಸಾಗುತ್ತಾನೆ ದಾರಿಯಲ್ಲಿ ಶಿವಾನುಭವ ಗೋಷ್ಠಿಗಳನ್ನು ಮಾಡುತ್ತ ಸಾವಿರಾರು ಜನರಿಗೆ ಶಿವದೀಕ್ಷೆ ನೀಡುತ್ತಾನೆ. ಹಿಂಸಾವೃತ್ತಿಯಲ್ಲಿ ತೊಡಗಿದ್ದ ಬೇಡ ಜನಾಂಗಕ್ಕೆ ಬುದ್ದಿ ಹೇಳಿ ಅವರ ಮನ ಪರಿವರ್ತಿಸಿ ದೀಕ್ಷೆ ನೀಡಿ ಸನ್ಮಾರ್ಗಕ್ಕೆ ಹಚ್ಚುತ್ತಾನೆ. ನಂದಿ ಗ್ರಾಮದಲ್ಲಿ ಎದುರಾದ ವೈದಿಕರೊಡನೇ ವಾದ ವಿವಾದ ಮಾಡಿ ಜಯಸುತ್ತಾನೆ ಗೌಡಗೆರೆಗೆ ಬಂದು ಅಲ್ಲಿ ಅಸಂಖ್ಯಾತ ರೈತ ಜನಕ್ಕೆ ಜ್ಞಾನ ಬೋಧೆ ಮಾಡುತ್ತಾನೆ.ಪೊಟ್ಟಲಕೆರೆಗೆ ಬಂದು ಅಲ್ಲಿಯ ಎಲ್ಲ ಜೈನ ಪಂಡಿತರನ್ನು ವಾದದಲ್ಲಿ ಸೋಲಿಸುತ್ತಾನೆ. ಅವರಿಗೆಲ್ಲ ಶಿವದೀಕ್ಷೆ ನೀಡುತ್ತಾನೆ. ಅಲ್ಲಿಯ ರಾಜ 2ನೇ ಜಯಸಿಂಹ ಮತ್ತು ರಾಣಿ ಸುಗ್ಗಲೆ ಇವನಿಂದ ಶಿವದೀಕ್ಷೆ ಪಡೆಯುತ್ತಾರೆ. ನಂತರ ದಾಸಿಮಯ್ಯನು ತನ್ನ ಊರಾದ ಮುದನೂರಿಗೆ ಬಂದು ನೇಯ್ಗೆ ಕಾಯಕ ಮಾಡಿಕೊಂಡು ಜನರಿಗೆ ಶಿವಾನುಭವ ನೀಡುತ್ತಾ ಜೀವನ ಸಾಗಿಸುತ್ತಾನೆ.
ದೇವರ ದಾಸಿಮಯ್ಯನವರು ಯವ್ವನಾವಸ್ಥೆಗೆ ಬಂದಾಗ ಇವರ ಮದುವೆ ಪ್ರಸ್ತಾಪ ಬರುತ್ತದೆ. ಆಗ ಅವರು ಮದುವೆ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ . ಕೊನೆಗೆ ತಂದೆ ತಾಯಿ , ಗುರು ಹಿರಿಯರ ಒತ್ತಾಯಕ್ಕೆ ಮಣಿದು ಒಂದು ಷರತ್ತಿನ ಮೇಲೆ ಮದುವೆಗೆ ಒಪ್ಪಿಗೆ ನೀಡುತ್ತಾರೆ. ದಾಸಿಮಯ್ಯನು ಕಬ್ಬಿನ ಜಲ್ಲೆ ಮರಳು ಮಿಶ್ರಿತ ಅಕ್ಕಿಯಿಂದ ನೀರು ಮತ್ತು ಸೌದೆ ಉಪಯೋಗಿಸದೆ ಪಾಯಸ ಮಾಡಿಕೊಡುವಂಥ ಜಾಣ ಕನ್ಯೆಯನ್ನು ವಿವಾಹವಾಗುವ ಶರತ್ತಿನ ಮೇಲೆ ದಾಸೀಮಯ್ಯನು ಮದುವೆಯಾಗುವ ಇಚ್ಛೆ ಉಳ್ಳವನಾಗಿ ಹೆಣ್ಣಿನ ಅನ್ವೇಷಣೆಯಲ್ಲಿ ತೊಡಗುತ್ತಾನೆ.
ಕೈಯಲ್ಲಿ ಕಬ್ಬಿನ ಜಲ್ಲೆ ಹಾಗೂ ಮರಳು ಮಿಶ್ರಿತ ಅಕ್ಕಿ ಗಂಟನ್ನು ಹಿಡಿದು ಕೊಂಡು ಕನ್ಯಾನ್ವೇಷಣೆಗೆ ಹೊರಡುತ್ತಾನೆ. ಹನ್ನೆರಡು ವರ್ಷ ಕಳೆದರೂ ಅಂಥ ಕನ್ಯೆ ಸಿಗುವುದಿಲ್ಲ. ಕಡೆಗೆ ಗುಲ್ಬರ್ಗ ಜಿಲ್ಲೆ ಗೊಬ್ಬೂರು ಗ್ರಾಮದ ಶಿವಶಕ್ತಿ ಸಂಪನ್ನರಾದ ಮಹಾದೇವಿ ಮತ್ತು ಮಲ್ಲಿಕಾರ್ಜುನರ ಶಿವಯೋಗಿ ದಂಪತಿಗಳಿಗೆ ತನ್ನ ಅಭಿಲಾಷೆಯನ್ನು ತಿಳಿಸುತ್ತಾನೆ. ಅವನ ಶರತ್ತು ಕೇಳಿ ಅಂಥ ಕನ್ಯೆ ನಿನಗೆ ಈ ಜನ್ಮದಲ್ಲಿ ಸಿಗಲಾರಳು ಎನ್ನುತ್ತಿರುವಾಗಲೇ ಅವರ ಮಾತನ್ನು ಆಲಿಸಿದ ಅವರ ಮಗಳು ದುಗ್ಗಳೆ ಅದೇಕೆ ಸಿಗಲಾರಳು? ಮಳಲಕ್ಕಿ ಪಾಯಸ ನಾನು ಮಾಡಿಕೊಡುವೆನೆಂದು ದಾಸಿಮಯ್ಯನ ಸವಾಲು ಸ್ವೀಕರಿಸುತ್ತಾಳೆ.
ದುಗ್ಗಳೆಯು ಕಬ್ಬುಗಳನ್ನು ತರಿಸಿ ಬುಡದ ಭಾಗ ಹಾಗೂ ತುದಿ ಭಾಗಗಳನ್ನು ಬೇರೆ ಬೇರೆ ಮಾಡಿ ಸಿಹಿರಸ ಹಾಗೂ ಸಪ್ಪೆರಸಗಳನ್ನು ಬೇರೆ ಬೇರೆ ಪಾತ್ರೆಗಳಲ್ಲಿ ಸಂಗ್ರಹಿಸುತ್ತಾಳೆ. ಕಬ್ಬಿನ ಸಿಪ್ಪೆ ಒಣಗಿಸಿ ಬೆಂಕಿ ಹೊತ್ತಿಸಿ ಸಪ್ಪೆ ಸರದ ಪಾತ್ರೆಯಲ್ಲಿ ಮರಳು ಮಿಶ್ರಿತ ಅಕ್ಕಿ ಹಾಕಿ ಕುದಿಸಲು ಪಾಕ ಸಿದ್ಧವಾಗುತ್ತದೆ. ಅದನ್ನು ಜಾಲಾಡಿ ತಳದಲ್ಲಿ ಮರಳು ಉಳಿಯುವಂತೆ ಮಾಡಿ ಮೇಲಿನ ಪಾಕನ್ನು ಸಿಹಿ ರಸದ ಪಾತ್ರೆಯಲ್ಲಿ ಕೂಡಿಸಿ ತಯಾರಾದ ಪಾಯಸವನ್ನು ದಾಸಿಮಯ್ಯನಿಗೆ ಕೊಡುತ್ತಾಳೆ. ಹೀಗೆ ನೀರು ಮುಟ್ಟದೆ ಸೌದೆ ಉಪಯೋಗಿಸದೆ ಮಳಲಕ್ಕಿ ಪಾಯಸ ತಯಾರಿಸಿಕೊಟ್ಟ ಚಿಕ್ಕ ಹುಡುಗಿ ದುಗ್ಗಳೆಯ ಜಾಣತನಕ್ಕೆೆ ಎಲ್ಲರೂ ಬೆರಳು ಕಚ್ಚುತ್ತಾರೆ. ಅವಳನ್ನು ಕೊಂಡಾಡುತ್ತಾರೆ. ದಾಸಿಮಯ್ಯನು ದುಗ್ಗಳೆಯನ್ನು ವಿವಾಹವಾಗುತ್ತಾನೆ. ಅವರಿಬ್ಬರ ನೇಯ್ಗೆ ಕಾಯಕ ಮಾಡಿಕೊಂಡು ಅನ್ಯೌನ್ಯತೆಯಿಂದ ಜೀವನ ಸಾಗಿಸುತ್ತಾರೆ.
ಸಂಸಾರ ಶ್ರೇಷ್ಠವೊ, ಸನ್ಯಾಸ ಶ್ರೇಷ್ಠವೊ: ಒಮ್ಮೆ ಇಬ್ಬರು ಸಾಧಕ ಯುವಕರಲ್ಲಿ ಸಂಸಾರ ಹಾಗೂ ಸನ್ಯಾಸ ಇವುಗಳಲ್ಲಿ ಯಾವುದು ಶ್ರೇಷ್ಠವೆಂಬ ವಿಷಯದಲ್ಲಿ ವಾದ ವಿವಾದ ನಡೆಯುತ್ತದೆ. ಇದರ ಪರಾಮರ್ಶೆಗೆ ಅವರಿಬ್ಬರು ಅನುಭಾವಿ ಶರಣ ದಾಸಿಮಯ್ಯನಲ್ಲಿಗೆ ಬರುತ್ತಾರೆ. ಅವರಿಗೆ ಆದಾರಾತಿಥ್ಯ ಮಾಡಿ ಕೂಡ್ರಿಸಿದ ದಾಸಯ್ಯನು ಎಳೆ ಬಿಸಿಲಿನಲ್ಲಿ ಕುಳಿತು ಕಾಯಕ ನಿರತನಾಗಿ ದುಗ್ಗಳೆಗೆ ದೀಪ ಹಚ್ಚಿ ತರಲು ಹೇಳುತ್ತಾನೆ. ದುಗ್ಗಳೆ ದೀಪ ಹಚ್ಚಿ ತಂದು ಬಿಸಿಲಲ್ಲಿ ಕುಳಿತ ದಾಸಿಮಯ್ಯನ ಮುಂದಿಡುತ್ತಾಳೆ ತಲೆಗೆ ಹೊದ್ದುಕೊಳ್ಳಲು ವಸ್ತ್ತ್ರ ತೆಗೆದುಕೊಡಲು ಹೇಳುತ್ತಾನೆ. ಅವನ ಹೆಗಲ ಮೇಲೆಯೇ ಇದ್ದ ವಸ್ತ್ತ್ರವನ್ನು ದುಗ್ಗಳೆ ತೆಗೆದು ಅವನ ತಲೆಯ ಮೇಲಿರಿಸುತ್ತಾಳೆ.ಕುಡಿಯಲು ತಂದಿಟ್ಟ ತಂಗಳು ಅಂಬಲಿ ಬಾಯಿ ಸುಟ್ಟಿತು ಆರಿಸಿಕೊಡು ಎಂದು ಹೇಳಲು ದುಗ್ಗಳೆ ಅಂಬಲಿಗೆ ಗಾಳಿ ಹಾಕುತ್ತಾಳೆ ಇದನ್ನೆಲ್ಲ ನೋಡುತ್ತ ಕುಳಿತಿದ್ದ ಆ ಸಾಧಕ ಯುವಕರು ಮುಸಿಮುಸಿ ನಗುತ್ತಿರುತ್ತಾರೆ. ಆಗ ದಾಸಿಮಯ್ಯನು ಸಾಧಕರೆ ಎದಿರು ನುಡಿಯದೆ ಸಂಸಾರದ ಒಳ ಅರಿವನ್ನು ಅರಿತು ಸೇವೆ ಮಾಡಿಕೊಂಡಿರಬಲ್ಲ ನಮ್ಮ ದುಗ್ಗಳೆಯಂಥ ಸತಿ ಇದ್ದರೆ ಸಂಸಾರ ಲೇಸು ಇಲ್ಲದಿದ್ದರೆ ಸನ್ಯಾಸ ಲೇಸು ಎಂದು ಹೇಳುತ್ತಾನೆ. ‘ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ದಾಸಿಮಯ್ಯನ ನುಡಿ.ಶರಣರು ದಾಂಪತ್ಯ ಜೀವನಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ.ಸ್ತ್ರೀಯರನ್ನು ಗೌರವಿಸಿದವರು ದಾಸಿಮಯ್ಯನವರೇ ಮೊದಲಿಗರಾಗಿದ್ದರೆ.
"ಬಂದುದನರಿದು ಬಳಸುವಳು ಬಂದುದ ಪರಿಣಮಿಸುವಳು ಬಂಧು ಬಳಗದ ಮರೆಸುವಳು ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ" ಎಂದು ನನ್ನ ಜೀವನ ಸಾಕ್ಷಾತ್ಕಾರವಾಯಿತು ಎಂದು ಹೇಳಿದ್ದಾರೆ.
ತವನಿಧಿ ಪಡೆದ ಪ್ರಸಂಗ:- ನೇಯ್ಗೆ ಕಾಯಕದಲ್ಲಿ ಪರಿಣಿತನಾದ ದಾಸಯ್ಯನು ಹನ್ನೆರಡು ವರ್ಷ ಕಷ್ಟಪಟ್ಟು ಒಂದು ಸುಂದರವಾದ ಬಹುಬೆಲೆಯುಳ್ಳ ಹೊದೆಯುವ ವಸ್ತುವನ್ನು ನೇಯ್ದಿರುತ್ತಾನೆ. ಅದನ್ನು ಮಾರಲು ಸಂತೆಗೆ ಒಯ್ಯುತ್ತಾನೆ. ಬಹು ಬೆಲೆಯುಳ್ಳ ಆ ವಸ್ತ್ತ್ರವನ್ನು ಕೊಳ್ಳಲು ಯಾರೂ ಬರಲಿಲ್ಲ. ದಾಸಿಮಯ್ಯ ಮನೆಗೆ ಮರಳಿ ಬರುವಾಗ ಒಬ್ಬ ಜಂಗಮನು ಆ ದಿವ್ಯಾಂಬರವನ್ನು ಬೇಡುತ್ತಾನೆ. ದಾಸಿಮಯ್ಯ ಒಂದೂ ವಿಚಾರಿಸದೆ ಅದನ್ನು ಜಂಗಮನಿಗೆ ಕೊಟ್ಟು ಬಿಡುತ್ತಾನೆ. ಜಂಗಮನು ಆ ದಿವ್ಯಾಂಬರವನ್ನು ದಾಸಿಮಯ್ಯನ ಎದುರಿಗೆ ಹರಿದು ಚೂರು ಮಾಡಿ ಗಾಳಿಯಲ್ಲಿ ತೂರುತ್ತಾನೆ. ದಾಸಿಮಯ್ಯ ಸ್ವಲ್ಪವೂ ವಿಚಲಿತನಾಗಲಿಲ್ಲ ಅವನ ಜಂಗಮನನ್ನು ಮನೆಗೆ ಕರೆದುಕೊಂಡು ಹೋಗಿ ಸತ್ಕರಿಸುತ್ತಾನೆ.
ದಂಪತಿಗಳ ಜಂಗಮ ನಿಷ್ಠೆಗೆ ಸಂಪ್ರೀತನಾಗಿ ಜಂಗಮನಾಗಿ ಬಂದ ಶಿವನು ತನ್ನ ನಿಜರೂಪ ತೋರಿ ಅವರಿಗೆ ತವನಿಧಿ (ಅಕ್ಷಯ ಪಾತ್ರೆ) ದಯಪಾಲಿಸಿ ಬಯಲಾಗುತ್ತಾನೆ . ತವನಿಧಿ ಪಡೆದುಕೊಂಡ ಆ ದಂಪತಿಗಳು ದೀನ ದಲಿತರಿಗೆ ಶರಣನಿಗೆ ದಾಸೋಹ ಮಾಡುತ್ತ ಕಾಲ ಕಳೆಯುತ್ತಿದ್ದರು.ಇದು ಇವರಿಗೆ ದೇವರು ಕೊಟ್ಟ "ತವನಿಧಿಯೇ" ಆಗಿದೆ. ಈ ಪ್ರತಿರೂಪ ಇಂದಿಗೂ ಸಪ್ತ ತೀರ್ಥಗಳ ಮೂಲಕ ಮುದನೂರಿನಲ್ಲಿ ಜೀವಂತ ವಾಗಿ ಕಾಣುತ್ತೇವೆ . ಸಪ್ತ ತೀರ್ಥಗಳು ಎಂದರೆ ೧. ರಾಮತೀರ್ಥ , ೨. ಲಕ್ಷ್ಮಣ ತೀರ್ಥ, ೩.ಸಕ್ಕರೆ ತೀರ್ಥ ೪. ಮರಳು ತೀರ್ಥ , ೫. ಪಾಂಡವ ತೀರ್ಥ, ೬. ಹಾಲು ತೀರ್ಥ ,೭. ಸಂಗಮ ತೀರ್ಥ ಗಳಾಗಿ ಕಾಣಬಹುದಾಗಿದೆ.
ದೇವರ ದಾಸಿಮಯ್ಯನವರು ಶತ - ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಶರಣರಿಗಿಂತಲೂ (ಬಸವಣ್ಣ ಮತ್ತು ಅಕ್ಕಮಹಾದೇವಿಯವರಿಗೂ ), ಮುಂಚಿತವಾಗಿದ್ದಂತಹ, ಮೊಟ್ಟ ಮೊದಲ ವಚನಕಾರರಾಗಿದ್ದರು .ದೇವರ ದಾಸಿಮಯ್ಯನವರ ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗ ರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ, ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬ೦ದವು. ದಾಸಿಮಯ್ಯನವರನ್ನುದೇವರ ದಾಸಿಮಯ್ಯ, ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ.
ಇವರ ಪತ್ನಿ ದುಗ್ಗಳೆ. ಇಬ್ಬರದೂ ಅನ್ಯೋನ್ಯವಾದ ದಾಂಪತ್ಯ ಜೀವನ. ಸೀರೆ ನೇಯುತ್ತಾ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ, ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದವರು. ಇವರು ರಾಮನಾಥ ಎಂಬ ದೇವರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟು ಕೊಂಡಿದ್ದು "ರಾಮನಾಥ" ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ. ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನಸೂರೆಗೊಳ್ಳುತ್ತವೆ.
ಮನುಷ್ಯ ಜನ್ಮ, ಮುಕ್ತಿ ಹೊಂದುವುದು ಮತ್ತು ಮಹಾಜನರ ಸತ್ಸಂಗ ಈ ಮೂರು ಸಿಗುವುದು ದೇವರ ಅನುಗ್ರಹ ಮಾತ್ರ ಸಾಧ್ಯ ಆದ್ದರಿಂದ ದಾಸವರೇಣ್ಯರು ಹಾಡಿರುವ "ಮಾನವ ಜನ್ಮ ದೊಡ್ಡದು, ಇದನ್ನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ" ಎಂದಿರುವಂತೆ ನಾವುಗಳು, ಯಾರು? ನಮ್ಮ ಕುಲಕಸುಬು ಏನು? ನಮ್ಮ ದೇವರು ಯಾರು? ನಮ್ಮಲ್ಲಿ ಆಗಿಹೋಗಿರುವ ಮಹಾತ್ಮರು ಯಾರು ? ಮೊದಲಾದ ವಿಷಯಗಳನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕ.
ದೇವರ ದಾಸಿಮಯ್ಯನವರು ತಮ್ಮ ಆದ್ಯಾತ್ಮ ಸಿರಿವಂತಿಕೆಯಿಂದ ಮೆರೆದು, ಶಿವನ ಹೆಜ್ಜೆಯಲ್ಲಿ ಹೆಜ್ಜೆಯನಿಟ್ಟು, ತಮ್ಮ ಹೆಜ್ಜೆ ಪಾಡುಗಳನ್ನು ನಮಗಾಗಿ ಉಳಿಸಿಹೋಗಿದ್ದಾರೆ. ಇವುಗಳನ್ನು ಅನುಸರಿಸಿ ನಡೆದರೆ ಸಾಕು ನಮ್ಮ ಬಾಳು ಬೆಳಕಾಗುವುದು ಇಂತಹ ಮಹಾಪುರುಷನನನ್ನು ಪಡೆದ ದೇವಾಂಗ ಸಮಾಜವೇ ದನ್ಯ...