ದೇವಾ
ನಿಮ್ಮ ಪೂಜಿಸಿ ಚೆನ್ನನ ಕುಲ ಚೆನ್ನಾಯಿತ್ತು
ದೇವಾ
ನಿಮ್ಮ ಪೂಜಿಸಿ ದಾಸನ ಕುಲ ದೇಸೆವಡೆಯಿತ್ತು
ದೇವಾ
ನಿಮ್ಮಡಿಗೆರಗಿದ ಮಡಿವಾಳ ಮಾಚಯ್ಯನಿಮ್ಮಡಿಯಾದ. ನೀನೊಲಿದ ಕುಲಕೆ
ನೀನೊಲ್ಲದ ಹೊಲೆಗೆ ಮೇರೆಯುಂಟೆ ದೇವಾ ಶ್ವಪಚೋಪಿ ಮುನಿಶ್ರೇಷೊ*ೀ ಯಸ್ತು ಲಿಂಗಾರ್ಚನೇ ರತಃ ±ಲಿಂಗಾರ್ಚನವಿಹೀನೋ[s]ಪಿ ಬ್ರಾಹ್ಮಣಃ ಶ್ವಪಚಾಧಮಃ± ಎಂದುದಾಗಿ
ಜಾತಿ-ವಿಜಾತಿಯಾದಡೇನು ಅಜಾತಂಗೆ ಶರಣೆಂದನ್ನದವನು ಆತನೇ ಹೊಲೆಯ
ಕೂಡಲಸಂಗಮದೇವಾ.