ದೇಹದೊಡನೆ ಪ್ರಾಣ ಹುಟ್ಟಿತ್ತಯ್ಯ.


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ದೇಹದೊಡನೆ ಪ್ರಾಣ ಹುಟ್ಟಿತ್ತಯ್ಯ. ಆ ದೇಹದೊಡನೆ ಮಿಶ್ರವಾದ ಪ್ರಾಣನು ಶ್ರೀಗುರುವಿನ ಕರಕಮಲದಲ್ಲಿ ಉತ್ಪತ್ತಿಯಾಗಿ
ಅಂಗದ ಮೇಲೆ ಲಿಂಗಸ್ವಾಯತವ ಮಾಡಿ ಉರುತರ ಲಿಂಗದಲ್ಲಿ ಭರಿತ ಚರಿತ ಚಾರಿತ್ರನ ಮಾಡಿದನಾಗಿ ಲಿಂಗದೇಹಿ ಲಿಂಗಪ್ರಾಣಿಯೆನಿಸಿಕೊಂಡು ಬದುಕಿದೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.