ದೇಹದೊಳಗಣ ದೇಹಿಯೆನ್ನಬಹುದೆ ನಿಮ್ಮ ಶರಣನ? ಅನ್ನ ಪಾನಾದಿಗಳೊಗಣ ಅನ್ನಪಾನವೆಂದೆನ್ನಬಹುದೆ ಪ್ರಸಾದವ? ಎನಬಾರದಯ್ಯಾ ಎನ್ನ ತಂದೆ! ಸಾಧನದೊಳಗಣ ಸಂಯೋಗವೆಂತಿದ್ದುದು ಅಂತಿದ್ದುದಾಗಿ. ಇದು ಕಾರಣ ಶ್ರತಿ ಸ್ಮೈತಿಗಗೋಚರ ಕೂಡಲಚೆನ್ನಸಂಗಮದೇವಾ ನಿಮ್ಮ ಶರಣರು.