ಧರೆಯ ಮೇಲೊಂದು ಅರಿದಪ್ಪ ರತ್ನ ಹುಟ್ಟಿರಲು
ಅದನರಸಲರಸ ಹೋಯಿತ್ತಯ್ಯಾ. ನಡುನೀರೊಳಗೆ ಮುಳುಗಿ
ಆಳವರಿದು ನೋಡಿ
ಕಂಡೆಹೆನೆಂದಡೆ ಕಾಣಬಾರದು. ಧಾರೆವಟ್ಟಲ ಕಳೆದುಕೊಂಡು ನೀರ ಶೋಧಿಸಿ ನೋಡಿದಡೆ ದೂರದಲ್ಲಿ ಕಾಣಬರುತ್ತಿಹುದು ನೋಡಾ. ಸಾರಕ್ಕೆ ಹೋಗಿ ಹಿಡಿದುಕೊಂಡೆನೆಂಬ ಧೀರರೆಲ್ಲರ ಮತಿಯ ಬಗೆಯ ನುಂಗಿತ್ತು ಗುಹೇಶ್ವರಾ