ಧೃತಿಗೆಟ್ಟು ಅನ್ಯರ ಬೇಡದಂತೆ ಮತಿಗೆಟ್ಟು ಪರರುವ ಹೊಗಳದಂತೆ ಪರಸತಿಯರ ರತಿಗೆ ಮನ ಹಾರದಂತೆ ಶಿವಪಥವೊಲ್ಲದವರೊಡನಾಡದಂತೆ ಅನ್ಯಜಾತಿಯ ಸಂಗವ ಮಾಡದಂತೆ ಎನ್ನ ಪ್ರತಿಪಾಲಿಸು ಕೂಡಲಸಂಗಮದೇವಾ. 263