ನಂಬರು ನಚ್ಚರು ಬರಿದೆ ಕರೆವರು ನಂಬಲರಿಯರೀ ಲೋಕದ ಮನುಜರು ನಂಬಿ ಕರೆದಡೋ ಎನ್ನನೆ ಶಿವನು ನಂಬದೆ ನಚ್ಚದೆ ಬರಿದೆ ಕರೆವರ ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ 116