Pages   (key to Page Status)   


ನದಿ ನದಿಯ ಕೂಡಿದಂತೆ
ಬಯಲು ಬಯಲ ಬೆರೆದಂತೆ
ಮಾತು ಮಾತ ಕಲೆತಂತೆ
ಜ್ಯೋತಿ ಜ್ಯೋತಿ ಒಂದಾದಂತೆ ಅಖಂಡೇಶ್ವರಾ
ನಿಮ್ಮೊಳೊಡವೆರೆದ ನಿಜೈಕ್ಯನ ಕುರುಹು ಇಂತುಟಯ್ಯಾ.