ನಯನದಾಹಾರವ ಜಂಗಮವ ನೋಡಿಸುವೆನು ಶ್ರೋತ್ರದಾಹಾರವ ಜಂಗಮವ ಕೇಳಿಸುವೆನು ಘ್ರಾಣದಾಹಾರವ ಜಂಗಮವ ವಾಸಿಸುವೆನು ಜಿಹ್ವೆಯಾಹಾರವ ಜಂಗಮವನೂಡಿಸುವೆನು ಕವಚದಾಹಾರವ ಜಂಗಮಕ್ಕೆ ಹೊದ್ದಿಸುವೆನು ಅಧಿಕ ಪ್ರೇಮ ಪರಿಣಾ[ಮ]ವ ಮಾಡುವೆನು ಸಕಲಪದಾರ್ಥಂಗಳ ನೀಡುವೆನು ಕೂಡಲಸಂಗಾ ನಿಮ್ಮ ಶರಣರಿಗೆ. 430