Pages(key to [[Help:Page Status{{!}}Page Status]])
ನಾನು ಭಕ್ತನಾದಡೆ ನೀನು ದೇವನಾದಡೆ ನೋಡುವೆವೆ ಇಬ್ಬರ ಸಮರಸವನೊಂದು ಮಾಡಿ? ಭೂಮಿಯಾಕಾಶವನೊಂದು ಮಾಡಿ ಚಂದ್ರ_ಸೂರ್ಯರಿಬ್ಬರ ತಾಳವ ಮಾಡಿ ಆಡುವೆವೆ? ಜಡೆಯ ಮೇಲಣ ಗಂಗೆ ನೀನು ಕೇಳಾ ತೊಡೆಯ ಮೇಲಣ Uõ್ಞರಿ ನೀನು ಕೇಳಾ ಗುಹೇಶ್ವರನೆಂಬ ಲಿಂಗವು ಎನ್ನ ಕೈಯಲ್ಲಿ ಸತ್ತಡೆ ರಂಡೆಗೂಳನುಂಬುದು ನಿಮಗೆ ಲೇಸೆ?