ನಾವೂ ಮನುಷ್ಯರು!
[ನಾಟಕ]
ನಿರಂಜನ
ಕನ್ನಡ ಸಂಘ
ಸಂತ ಫಿಲೋಮಿನಾ ಕಾಲೇಜು
ದರ್ಬೆ - 574 202, ಪುತ್ತೂರು, ದಇಣ ಕನ್ನಡ
First Impression : 1985 Pages : 4+xxiii + ೧೯ +5 Price : Rs. 6/-
(C) ಸೀಮಂತಿನೀ ನಿರಂಜನ
ಸಂಪಾದಕ ಮಂಡಳಿ : ವಿ.ಬಿ. ಮೊಳೆಯಾರ
ಪ್ರಧಾನ ಸಂಪಾದಕ
ಚೋಳಂತಕೋಡಿ ಈಶ್ವರ ಭಟ್ಟ
ವಿ. ಬಿ. ಅರ್ತಿಕಜೆ
ಹರಿನಾರಾಯಣ ಮಾಡಾವು
ಸಹಸಂಪಾದಕರು
ಬೆಲೆ: ರೂಪಾಯಿ ಆರು
ರಕ್ಷಾಪುಟದ ಕಲಾವಿದ:
ಮೋಹನ ಸೋನ
ಮುದ್ರಣ : ರಾಜೇಶ್ ಪವರ್ ಪ್ರೆಸ್
ದರ್ಬೆ -- 574 202
ಪುತ್ತೂರು, ದ. ಕನ್ನಡ, ಕರ್ನಾಟಕ ನಮ್ಮ ಮಾತು
'ಚೈತನ್ಯ' ಮಾಲೆಯ ಮೂಲಕ ಹನ್ನೊಂದು ವಿವಿಧ ಪ್ರಕಾರಗಳ ಕೃತಿಗಳನ್ನೂ, ವಿಶೇಷ ಪ್ರಕಟಣೆಗಳ ರೂಪದಲ್ಲಿ ಎಂಟು ಕೃತಿಗಳನ್ನೂ ವಾಚಕರಿಗೆ ನೀಡಿ, ಕನ್ನಡದ ಕಾಯಕವನ್ನು ಪುತ್ತೂರಿನಲ್ಲಿ ಮಾಡುತ್ತ ಬಂದಿದ್ದೇವೆ. ನವಂಬರ್ ೩೦, ೧೯೮೫ರಂದು - ಕರ್ನಾಟಕ ಸಾಹಿತ್ಯ ಅಕಾಡೆವಿು, ಬೆಂಗಳೂರು. ಈ ಸಂಸ್ಥೆಯ - ನೆರವಿನಿಂದ ನಮ್ಮ ಕನ್ನಡ ಸ೦ಘವು ನಿರ೦ಜನ ಸಾಹಿತ್ಯದ ಕುರಿತು ವಿಚಾರಸಂಕಿರಣವನ್ನು ಏರ್ಪಡಿಸಲಿದೆ. ಈ ಸುಸಂದರ್ಭದಲ್ಲಿ ಖ್ಯಾತ ಸಾಹಿತಿ ನಿರಂಜನರ “ ನಾವೂ ಮನುಷ್ಯರು!” ಎ೦ಬ ಈ ನಾಟಕವನ್ನು ಪ್ರಕಟಿಸಿ ನಿಮ್ಮ ಕೈಯಲ್ಲಿರಿಸುತ್ತಿದ್ದೇವೆ.
ನಿರಂಜನರ ಬರವಣಿಗೆಗೆ ಬದುಕೇ ಮೂಲ. ಸಮತಾವಾದ, ಜನತಾ ರಂಗ ಭೂಮಿಗಳ ಕಾರ್ಯಕರ್ತರಾಗಿ ದುಡಿದ ಅವರಿಗೆ ಅವುಗಳ ಒಳಗುಹೊರಗು ಕರತಲಾಮಲಕ. ಬಡತನ, ಹಸಿವು, ಅಜ್ಞಾನ, ರೋಗರುಜಿನಗಳಿಂದ ನೊ೦ದು, ಬೇಯುತ್ತಿರುವ ಕಾರ್ಮಿಕರ, ನೇಕಾರರ ಬದುಕನ್ನು - ಸಂಘಟನೆಯನ್ನು - ಒಡೆಯಲು ಯತ್ನಿಸುತ್ತಿರುವ ಸ್ಥಾಪಿತ ಹಿತಾಸಕ್ತರ ಸಾರ್ಥಲಾಲಸೆ, ದರ್ಪ, ವಿಚ್ಛಿದ್ರಕಾರಕ ಕುಹಕತನಗಳು ಈ ನಾಟಕದಲ್ಲಿ ಸ್ಫುಟವಾಗಿವೆ. ದೀನ ದಲಿತರ ಬದುಕು ಬವಣೆಯ ಕತ್ತಲೆಯಿಂದ ಭರವಸೆಯ ಬೆಳಕಿನತ್ತ ಸಾಗಬೇಕೆಂಬ ಸ್ವಾತಂತ್ರ್ಯದ ಕ್ರಾಂತಿಯನ್ನು ನಿರಂಜನರು ಈ ನಾಟಕದಲ್ಲಿ ಧ್ವನಿಸಿದ್ದಾರೆ. ನಾಟಕಕ್ಕೆ ಪೂರಕವಾಗಿ ನೀಡಿದ ಬಣ್ಣದ ಬಯಲು, ಭಾರತೀಯ ಜನತಾರಂಗ ಭೂಮಿ ಲೇಖನಗಳು ನಾಟಕಸಾಹಿತ್ಯ ಮತ್ತು ರಂಗಭೂಮಿಯ ಆಸಕ್ತರಿಗೆ ಅಮೂಲ್ಯ ಕೊಡುಗೆಗಳಾಗಿವೆ. ಈ ನಾಟಕವನ್ನು ಪ್ರಕಟಣೆಗೆ ನೀಡಿ,ಪ್ರೋತ್ಸಾಹಿಸಿದ ಶ್ರೀ ನಿರ೦ಜನರಿಗೆ ಮತ್ತು ಪ್ರಕಟಣೆಗೆ ಸಮ್ಮತಿ ನೀಡಿದ ಕು| ಸೀಮಂತಿನೀ ನಿರಂಜನರಿಗೆ ಕೃತಜ್ಞತೆಗಳು.
ನಮ್ಮ ಕನ್ನಡ ಸಂಘದ ಸಂಚಾಲಕರಾದ ರೆ| ಫಾ| ಜೆ. ಬಿ. ಡಿ'ಸೋಜ ಮತ್ತು ಪದಾಧಿಕಾರಿಗಳಿಗೆ, ಸಂಪಾದಕ ಮಂಡಳಿಯ ಸದಸ್ಯರಿಗೆ, ರಕ್ಷಾಪುಟದ ಕಲಾವಿದ ಶ್ರೀ ಮೋಹನ ಸೋನರಿಗೆ, ಮಂಗಳೂರಿನ ಯಜ್ಞ'ರಿಗೆ, ರಾಜೇಶ್ ಪವರ್ ಪ್ರೆಸ್ಸಿನ ಎ೦. ಎಸ್. ರಘುನಾಥ ರಾವ್ ಮತ್ತು ಬಳಾಗದವರಿಗೆ- ನಮ್ಮ ನಮನಗಳು. ಕನ್ನಡ ಸಂಘದ ಸದಸ್ಯರಿಗೂ, ಸಾಹಿತ್ಯ - ಕಲಾಸಕ್ತರಿಗೂ ನಾವು ಆಭಾರಿಗಳು.
ಕನ್ನಡ ಸಂಘ,
ಸಂತ ಫಿಲೋಮಿನಾ ಕಾಲೇಜು
ದರ್ಬೆ-574202, ಪುತ್ತೂರು, ದ. ಕ.
ವಿ. ಬಿ. ಮೊಳೆಯಾರ
ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕ
ಕೃತಜ್ಞತೆ
ನಿರಂಜನ ಸಾಹಿತ್ಯವನ್ನು ಕುರಿತು ವಿಚಾರಗೋಷ್ಠಿಯ ಪ್ರಸ್ತಾಪ ಮಾಡಲೆಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ವಿ.ಬಿ. ಮೊಳೆಯಾರರು ಕೆಲ ದಿನಗಳ ಹಿಂದೆ ನಮ್ಮಲ್ಲಿಗೆ ಬಂದರು. ಇಂತಹ ಸಂದರ್ಭಗಳಲ್ಲಿ ಬರಹಗಾರ ನಿರ್ಲಿಪ್ತನಾಗಿರಬೇಕೆಂಬ ಅಭಿಪ್ರಾಯ ನನ್ನದು. ಮೊಳೆಯಾರರು ಮೆಲುದನಿಯಲ್ಲಿ ಮಾತು ಮುಂದುವರಿಸಿದರು:
“ನಿಮ್ಮದು ಯಾವುದಾದರೂ ಸಣ್ಣ ಪುಸ್ತಕವನ್ನು ಆ ಸಂದರ್ಭದಲ್ಲಿ ಕಾಲೇಜಿನ ಕನ್ನಡ ಸಂಘದ ವತಿಯಿಂದ ಪ್ರಕಟಿಸಿದರೆ ಆದೀತು ಎಂಬ ಯೋಚನೆ ಇದೆ. ಗೆಳೆಯ ಬೋಳಂತಕೋಡಿ ಈಶ್ವರ ಭಟ್ಟರೂ 'ಕೇಳಿ ನೋಡಿ' ಎಂದಿದ್ದಾರೆ."
ಪುಸ್ತಕ ಪ್ರಕಟಣೆ ಎಂದೊಡನೆ ಲೇಖಕರ ಕಣ್ಣುಗಳು ಮಿನುಗುತ್ತವೆ. ನಾನು ಹಳಬ. ಹೊಳಪು ಅವರಿಗೆ ಕಾಣಿಸದಿರಲೆಂದು ಎದೆ ಮುಚ್ಚಿದೆ. ಬಹಳ ಹಿಂದೆ ಬರೆದ ಒಂದು ಏಕಾಂಕ ನಾಟಕದ ಹಸ್ತಪ್ರತಿ ನನ್ನಲ್ಲಿರುವುದು ನೆನಪಾಯಿತು.
ಅದರ ಬಗೆಗೆ ಹೇಳಿದೆ. "ಅದೇ ಆಗಬಹುದು," ಎಂದರು.
ಪ್ರಕಟಣೆ ಅರ್ಥಪೂರ್ಣವಾಗಲೆಂದು 'ಬಣ್ಣದ ಬಯಲು' ಪ್ರಸ್ತಾವನೆ ಈಗ ಬರೆದಿದ್ದೇನೆ. 'ನಾವೂ ಮನುಷ್ಯರು!' ನಾಟಕವನ್ನು ಮೊದಲಬಾರಿ ಆಡಿದ ಜನತಾ ರಂಗಭೂಮಿ'ಯನ್ನು ಕುರಿತು ೧೯೪೪ರಲ್ಲಿ ಬರೆದ ನನ್ನ ಲೇಖನವೂ ಇಲ್ಲಿ ಪುನರ್ಮುದ್ರಣ ಹೊಂದುತ್ತಿದೆ.
ಸಂತ ಫಿಲೋಮಿನಾ ಕಾಲೇಜಿನ ಕನ್ನಡ ಸಂಘ ತನ್ನ ಪ್ರಕಾಶನ ಚಟುವಟಿಕೆಯ ಮೂಲಕ ನಾಡಿನ ಗಮನವನ್ನು ತನ್ನೆಡೆಗೆ ಸೆಳೆದಿದೆ. ನನ್ನದೂ ಒಂದು ಪುಸ್ತಕವನ್ನು ಅದು ಹೊರತರುತ್ತಿರುವುದು ನನಗೆ ಅಭಿಮಾನದ ಸಂಗತಿಯಾಗಿದೆ. ಈ ತೀರ್ಮಾನಕ್ಕೆ ಕಾರಣರಾದ ಮಿತ್ರರಿಗೆ, ಅಂದವಾಗಿ ಮುದ್ರಿಸಿರುವ ರಾಜೇಶ್ ಪವರ್ ಪ್ರೆಸ್ಸಿನ ಒಡೆಯರಾದ ಗೆ. ಎಂ. ಎಸ್. ರಘುನಾಥರಾಯರಿಗೆ, ರಕ್ಷಾಕವಚವನ್ನು ರೂಪಿಸಿದ ಕಲಾವಿದ ಗೆ. ಮೋಹನ ಸೋನರಿಗೆ ನಾನು ಕೃತಜ್ಞನಾಗಿದ್ದೇನೆ.
೭-೧೦-೧೯೮೫
ಬೆಂಗಳೂರು
ಬಣ್ಣದ ಬಯಲು
ನಾಟಕದ ಅಂಟುಬಣ್ಣಕ್ಕೂ ನನಗೂ ನಂಟು ಹಳೆಯದು.ಐದನೆಯ ವಯಸ್ಸಿನ ಅನಂತರದ ಅನುಭವ ನೆನಪಿನ ಗವಿಯಲ್ಲಿ ಜ್ವಲಂತವಾಗಿರುತ್ತದೆಂದು ಮನೋವಿಜ್ಞಾನ ಮನವರಿಕೆಮಾಡಿಕೊಟ್ಟಿದೆ. ಐದಕ್ಕೂ ಮುಂಚಿನ ಘಟನೆಗಳು ನೆನಪಿವೆ ಅನಿಸಿದರೆ, ನಾವು ವಂಚನೆಗೆ ಒಳಗಾದಂತೆಯೇ: ಅವು ನಿಜನೆನಪಲ್ಲ; ಹಿರಿಯರು ಪದೇ ಪದೇ ಹೇಳಿ ಭೈರಿಗೆ ಕೊರೆದುದರ ಫಲವಾಗಿ ಮೆದುಳಿಗೆ ಅಂಟಿಕೊಂಡ ಜಿಗುಟು.ನಿಜ ಇರಬಹುದು. ಆದರೆ ಅವು ಯಾವುದೇ ವ್ಯಕ್ತಿಯ ಸ್ವಂತ ಅನುಭವವಲ್ಲ.
ಪ್ರತಿಯೊಂದು ಸಾಹಿತ್ಯಕೃತಿಗೂ ಒಂದಿಷ್ಟು ಹಿಂದು ಮುಂದು ಇದ್ದೇ ಇರುತ್ತದೆ. 1944ರಲ್ಲಿ ನಾನು ಬರೆದು ನಿರ್ದೇಶಿಸಿದ 'ನಾವೂ ಮನುಷ್ಯರು!'ನಾಟಕಕ್ಕೂ ಹಿಂದು ಮುಂದು ಇರಲೇಬೇಕಲ್ಲ? ಆ ಹಿಂದುಮುಂದು ಅರಿಯಲು ನೆನಪಿನ ಆಳವನ್ನು ಕಲಕಿದೆ. ಹಲವು ತುಣುಕುಗಳು ಮೇಲೆ ಬಂದುವು. ಐದನೆಯ ವಯಸ್ಸಿನ ಅನಂತರದ್ದೇ. ಆದರೂ ಕೆಲ ತುಣುಕುಗಳ ಬಗೆಗೆ ಶಂಕೆ, ಆ ಮಿತ್ರರಿಗೆ ಈ ಮಿತ್ರರಿಗೆ ಬರೆದು ಖಚಿತಪಡಿಸಿಕೊಂಡೆ. ಪರಿಣಾಮ ನೆನಪುಗಳ ಒಡ್ಡೋಲಗ- ಬಣ್ಣದ ಬಯಲು.
೧
ದಕ್ಷಿಣ ಕನ್ನಡದಲ್ಲಿ ಹುಟ್ಟಿ ಸ್ವಲ್ಪಕಾಲವಾದರೂ, ಅಲ್ಲಿ ಬೆಳೆದವನಿಗೆ ಭೂತದ ಕೋಲ,ಯಕ್ಷಗಾನ,ತಾಳವುದ್ಧಳೆ ತೀರಾ ಅಪರಿಚಿತವಾಗುವುದು ಸಾಧ್ಯವಿಲ್ಲ. ಅಂಥವರಲ್ಲಿ ಒಬ್ಬ ನಾನು.ಕುಮಾರ ಪರ್ವತ ಕುಮಾರಧಾರೆ; ಆವರಿಸಿದ ಕುಳುಕುಂದದ ಬಯಲಲ್ಲಿ ಹುಟ್ಟಿ ಆರು ತಿಂಗಳಾದ ಮೇಲೆ, ಮಡಿಕೇರಿ : ಮಂಗಳೂರು ಹೆದ್ದಾರಿಯಲ್ಲಿನ ಕಾವು ಎಂಬ ಪುಟ್ಟ ಊರಿಗೆ; (ದಕ್ಷಿಣಕ್ಕೆ ಪುತ್ತೂರು, ಉತ್ತರಕ್ಕೆ ಸುಳ್ಳ)ನನ್ನ ಸ್ಥಳಾಂತರವಾಯಿತು. ಕಾವು ಊರು ಎಂದರೂ ಒಂದೇ: ಕಾವು ಗ್ರಾಮ ಎಂದರೂ ಒಂದೇ.
ಸೂಕ್ತ ವಯಸ್ಸಿನಲ್ಲಿ ಪ್ರಾಥಮಿಕ ಶಾಲೆ ಸೇರಿದೆ. ಅಕ್ಷರಗಳನ್ನು ಜೋಡಿಸಿ, ಅಚ್ಚಾದುದನ್ನು ಓದಲು ಕಲಿತ ಮೇಲೆ, ಶಾಲೆ ಇಷ್ಟವಾಯಿತು. ನನಗೆ ಶಾಲೆಗಿಂತಲೂ ಹೆಚ್ಚಿನ ಲೋಹಚುಂಬಕ ಆ ಊರಿನ ಪಟೇಲ ಶ್ರೀನಿವಾಸರಾಯರು(ಅವರಿಗೆ ನನ್ನ ತಂದೆಯ ಹೆಸರೇ ಇದ್ದುದು ಬರಿಯ ಆಕಸ್ಮಿಕ, ಪಟೇಲರು ಯಕ್ಷಗಾನದಲ್ಲಿ, ಸಾಹಿತ್ಯದಲ್ಲಿ ಆಸಕ್ತರು.) ಒಂದು ನಮೂನೆಯು ಪುಟ್ಟ ಹುಡುಗನ ಮೇಲೆ, ಆತ ತಬ್ಬಲಿಯೆಂಬ ಕಾರಣವೂ ಸೇರಿ, ಅವರು ಕುತೂಹಲ ತಳೆದದ್ದು ಸ್ವಾಭಾವಿಕ. ಹತ್ತಿರದ ಹಳ್ಳಿಗಳಲ್ಲಿ ಯಕ್ಷಗಾನ ಎಲ್ಲಿಯೇ ಇರಲಿ ಪಟೇಲರ ಹಿಂಡಿನೊಂದಿಗೆ ಈ ಹುಡುಗ ಒಬ್ಬನಾಗುತ್ತಿದ್ದ. ಆರುವ ಉರಿಯುವ ತೆಂಗಿನ ಒಣಗರಿಗಳ 'ಸೂಟೆ' ಎದುರಲ್ಲಿ ಹೊಲಗಳ ಏರಿಯುದ್ದಕ್ಕೂ ಹುಡುಗನ ಓಟ. ಸ್ಥಳ ತಲಪಿದೊಡನೆ ಒಂದು ಮೂಲೆಯಲ್ಲಿ ನೆಲದ ಮೇಲೆ ನಿದ್ದೆ. ಬೆಳಗಿನ ಜಾವ ರಣಚಂಡೆಯ ಸದ್ದಿಗೆ ಎಚ್ಚರ!
ನನ್ನ ತಾಯಿಯ ಸೋದರ ಮಾವ ಪ್ರಖ್ಯಾತ ಯಕ್ಷಗಾನ ಕಲಾವಿದ ರಾಗಿದ್ದರಂತೆ (ಈ ಶತಮಾನದ ಎರಡು ಮೂರನೇ ದಶಕಗಳಲ್ಲಿ) ಹಾಸ್ಯಗಾರ ಲಕ್ಷ್ಮೀನಾರಾಯಣಯ್ಯ ಎಂದೇ ಜನ ಅವರನ್ನು ಕರೆಯುತ್ತಿದ್ದರಂತೆ. ಜೀವ ನದಿಯಲ್ಲಿ ನನ್ನ ಪುಟ್ಟ ತೆಪ್ಪ ಬೇರೆಲ್ಲಿಗೋ ಸಾಗಿದುದ್ದರಿಂದ, ಆ ಅಜ್ಜನನ್ನು ರಂಗಸ್ಥೆಲದಲ್ಲಿ ಕಂಡು, ಅವರ ಮಾತುಕೇಳಿ ನಗುವ ಅವಕಾಶ ನನಗೆ ಲಭಿಸಲಿಲ್ಲ.
ಒಂದು ಅಪರಾಹ್ನ ಶಿವರಾಮ 'ಕಾರಂತ ಮತ್ತು ಬಳಗ (ಸದಸ್ಯರು ಎಳೆಯುವಕರು), ಕಾವು ಊರಿಗೆ ಬಂದರು (೧೯೩೨), ಎರಡು ಪುಟ್ಟ'ನಾಟಕ ಆಡಿ ಪುತ್ತೂರಿಗೆ ಅವರು ಮರಳಬೇಕು. ಶಾಲೆಯು ಮೆಟ್ಟಲುಗಳು ಮತ್ತು ಜಗಲಿಯೇ ವೇದಿಕೆ. ಅಂಗಳ ಛಾವಣಿಯಿಲ್ಲದ ಪ್ರೇಕ್ಷಾಗೃಹ. ಕತ್ತಲು ಕವಿದಂತೆ ಪೆಟ್ರೋಮಾಕ್ಸ್ ನ (ಗ್ಯಾಸ್ ಲೈಟ್), ಮೊದಲ ನಾಟಕದ ಹೆಸರು 'ಡೊಮಿಂಗೊ', ನಾಟಕದ ಕತೆ ಏನು? ಪಾತ್ರಧಾರಿಗಳು ಯಾರು? ಎರಡನೇ ನಾಟಕ' ಯಾವುದು?' ಗೊತ್ತಿಲ್ಲ. ಆದರೆ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದ ಒಂದು ಸಂಗತಿ ನೆನಪಿದೆ. ಡೊಮಿಂಗೊ' ಮುಗಿದ ಮೇಲೆ ತುಸು ವಿರಾಮ. ಆ ನಾಟಕದಲ್ಲಿ ಬಣ್ಣ ಹಚ್ಚಿಕೊಂಡಿದ್ದ ಒಬ್ಬರು ಮುಖ ತೊಳೆದು 'ಡೊಮಿಂಗೊ' ಪುಸ್ತಕದ ಪ್ರತಿಗಳೊಡನೆ ಬಂದರು. ಮುಂದಿನ ಸಾಲಿನಲ್ಲೇ ನೆಲದ ಮೇಲೆ ಕುಳಿತಿದ್ದ ನಾನು ಕೈಚಾಚಿದೆ. ಓಂದು ಪ್ರತಿ ಕೊಟ್ಟರು. ಆಗ ಮೂರನೆಯ ತರಗತಿಯ ವಿದ್ವಾರ್ಥಿ ನಾನು.ಅವಸರ ಅವಸರವಾಗಿ ಪುಟತಿರುವುತ್ತ ಓದಿದೆ. ಚಿಕ್ಕ ಪುಸ್ತಕ ಮುಗಿದೇ ಹೋಯಿತು! ಅದನ್ನು ಕೊಟ್ಟವರ ಸ್ವರ ಕೇಳಿಸಿತು: 'ನಾಲ್ಕಾಣೆ ಕೊಡಬೇಕು, ಆಯ್ತಾ?” ನನ್ನದು ಚಿಕ್ಕಾಸೂ ಇಲ್ಲದ ಜೇಬು. ಪುಸ್ತಕ ಮರಳಿಕೊಟ್ಟೆ. ನಾಚಿಕೆಯಿಂದಲೋ ಏನೋ, ಓದಿಯಾಯ್ತು' ಎನ್ನಲಿಲ್ಲ. ಆದರೆ, 'ನಿಮ್ಮ ಹೆಸರೇನು?'ಎಂದು ಕೇಳಿದೆ. ಉತ್ತರ: 'ಪಿ.ಕೆ.ನಾರಾಯಣ', 1 ಪಟೇಲರು ನಾಟಕಗಳ ಒಂದೊಂದು ಪ್ರತಿಕೊಂಡು,ಊರಿನ ಮಾನ ಉಳಿಸಿ ದರು!
೨
'ಕಾವು ಊರಿನಿಂದ ಸುಳ್ಳಕ್ಕೆ ವಲಸೆ (1934,ಅಲ್ಲಿ ಶಿಕ್ಷಣದ ಮುಂದು ವರಿಕೆ, ಲೋವರ್ ಎಲಿಮೆಂಟರಿ ಕೊನೆಯ ಹಂತ ಮತು ಹಯರ್ ಎಲಿಮೆಂಟರಿ) ಈಗ ತಾಲೂಕು ಕೇಂದ್ರವಾಗಿರುವ ಸುಳ್ಯಕ್ಕೆ ಇರುವ ಮಹತ್ವ, ಆಗಿನ ಸುಳ್ಯಕ್ಕೆ ಇರಲಿಲ್ಲ. (ಬ್ರಿಟಿಷರಿಗೆ ಬಲಿಯಾಗುವುದಕ್ಕೆ ಮುಂಚೆ ಕೊಡಗಿನ ಒಂದು ಭಾಗವಾಗಿತ್ತು. ದಾಖಲೆಗಳಲ್ಲಿ ಆ ಕಾಲದಲ್ಲಿ ಅದರ ಹೆಸರು 'ಅಮರಸುಳ್ಳ') ಆ ದಾರಿಯಾಗಿ ಗಾಂಧೀಜಿ ಬಂದರು. ಜನಸಮುದಾಯ, ಜಯಕಾರ, ಬಡಕಲು ಜೀವದ ಭಾಷಣ, ಭ್ರಮೆಯ ಲೋಕ ಸೃಷ್ಟಿಯಾಗಿತು, ಕೆಲವೇ ಮಿನಿಟುಗಳಲ್ಲಿ, ಆಳುವ ವರ್ಗದ ಪಾಲಿಗೆ ಅರಿಭಯಂಕರನಾಗಿದ್ದ, ಆ ಅರ್ಧನಗ್ನ ಫಕೀರ.
'ಅದಕ್ಕೂ ಸುಮಾರು ಐದು ವರ್ಷ ಹಿಂದೆ ಅದೇ ದಾರಿಯಾಗಿ ಬಂದಿದ್ದ ಮದರಾಸು ಆಧಿಪತ್ಯದ (ಆಂಗ್ಲ) ಗವರ್ನರನಿಗೆ ಹಾರಹಾಕಲು ಕಾವು
1. ಮುಂದೆ ಪಿ.ಕೆ.ಯವರನ್ನು ನಾನು ಕಂಡದ್ದು 1941ರಲ್ಲಿ ಮಂಗಳೂರಲ್ಲಿ. ವಯಸ್ಸಿನಲ್ಲಿ ಹತ್ತು ವರ್ಷ ದೊಡ್ಡವರು.ಅಂದಿನಿಂದ ಬದುಕಿನುದ್ದಕ್ಕೂ ಗೆಳೆಯರಾಗಿ ದಿನಕಳೆದೆವು ಊರಿನ ಪ್ರತಿಷ್ಠಿತರು ಜುಟ್ಟಿನ ಪುಟ್ಟ ಬಾಲಕನಾದ ನನ್ನನ್ನು ಆರಿಸಿದ್ದರು. ಯಾರೋ ಕಂಟ್ರಾಕ್ಟುದಾರರ ಖಾಕಿ ಹ್ಯಾಟಿನಿಂದ ನನ್ನ ತಲೆಯನ್ನು ಅಲಂಕರಿ ಸಿದ್ದರು. ಹಾರ ಹಾಕಿಸುವ ಸಂಭ್ರಮದಲ್ಲಿ ಹ್ಯಾಟು ಕೆಳಗೆ ಬಿತ್ತು!ಏನೇ ಆಗಲಿ, ಗಾಂಧೀಜಿಯನ್ನು ಕಾಣುವುದಕ್ಕೆ ಮುನ್ನವೇ ನನಗೆ ತಿಳಿದಿತ್ತು ಆ ಮಾಲಾರ್ಪಣೆ ನಾನು ಎಸಗಿದ್ದ ದ್ರೋಹ ಎಂದು. ಅದಕ್ಕೆ ಪ್ರಾಯಶ್ಚಿತ್ರ ಅಪ್ಪಟ ಗಾಂಧೀವಾದಿಯಾಗುವದು! ಸುಲಭದ ಕೆಲಸ ಸುಳ್ಯ ಶಾಲೆಯ ವುುಖೆಸ್ಕೋಪಾಧಾಯರು ದೇಶಪ್ರೇಮಿಯಾಗಿದ್ದರು.ದೇಶಪ್ರೇಮ ಪುಲಕಕ್ಕಾದರೆ, ಮನೋರಂಜನೆಗೆ ಯಕ್ಷಗಾನ. ಆಗ ನನ್ನ ಮೇಲೆ ಪ್ರಭಾವ ಬೀರಿದ ಒಂದು ಪಾತ್ರ ಅಕ್ರೂರನದು. ಚಿಣ್ಣರು ಒಂದಾಗಿ ಅಣಕಪ್ರಸಂಗ ಏರ್ಪಡಿಸಿದೆವು. ಅದರಲ್ಲಿ ನಾನು ಅಕ್ರೂರನಾದೆ. ಭಾಗವತರಿರಲಿಲ್ಲ. ಎಲ್ಲ ಗದ್ಯಮಯ. ಮಾರನೆಯ ದಿನ, ಹಿರಿಯರ ಕಾರ್ಯ ಕ್ರಮದಲ್ಲಿ ಅಕ್ರೂರಪಾತ್ರ ವಹಿಸಿದ್ದವರ (ಶಗ್ರಿತ್ತಾಯರು?) ಮನೆಗೆ ಹೋದೆ. 'ಏನು ಹುಡುಗ? ಎಂದರು. ಚಿಣ್ಣರು ಮಾಡಿದ್ದನ್ನು ತಿಳಿಸಿದೆ.
ಹಾ! ಹಾ! ಎಂದು ನಕ್ಕರು. 'ನಾನು ಅಕ್ರೂರನಾಗಿದ್ದೆ ಎಂದೆ. ಮತ್ತೊಮ್ಮೆ ನಕ್ಕರು. ಹೆಮ್ಮೆಪಡುತ್ತ ಅಲ್ಲಿಂದ ಓಡಿದೆ.
1935ರಲ್ಲಿ ಸುದ್ದಿ ಹಬ್ಬಿತು: ಸುಳ್ಯದಲ್ಲಿ ಮಕ್ಕಳಕೂಟವಂತೆ! ಹತ್ತಾರು ಶಾಲೆಗಳ ಮಕ್ಕಳು ಬರುತ್ತಾರಂತೆ! ಆತಿಥ್ಯಕ್ಕೆ ಸಂಬಂಧಿಸಿದ ಸಕಲ ಏರ್ಪಾಟಿಗೆ ಮುಖ್ಯೋಪಾಧ್ಯಾಯ ರಾಮಪ್ಪಯ್ಯನವರ ಹಿರಿತನ. ಅವರ ಸಹೋದ್ಯೋಗಿಗಳೇ ಅತಿರಥ ಮಹಾರಥರು. ಶಾಲೆಯ ಬಾಲಕರು ವಾನರ ಸೇನೆ. ಊರ ಹತ್ತು ಸಮಸ್ತರ ಬೆಂಬಲ ಇದ್ದೇ ಇತ್ತು, ಐದನೆಯ ತರಗತಿ ಯಲ್ಲಿದ್ದ ನಾನು ಸ್ವಯಂಸೇವಕರಲ್ಲೊಬ್ಬ, ಅವರಿವರು ಹೇಳಿದ ಆ ಕೆಲಸ ಈ ಕೆಲಸಮಾಡಿದೆ. ಬಿಡುವಾದಾಗಲೆಲ್ಲ ಅದನ್ನು ಇದನ್ನು ನೋಡಿದೆ. ನನ್ನಲ್ಲಿ ಅಕ್ರೂರನ ಪಾತ್ರವಿರುವ ಪ್ರಸಂಗ ಬಾಲಲೀಲೆ ಕಂಸವಧೆ' ಎಂದು ಗೆ, ರಾಮಚಂದ್ರ ಉಚ್ಚಿలరు 3ళిసిದ್ದಾರೆ.
ಸುಪ್ತಪ್ರತಿಭೆ ಇದ್ದಿರಬಹುದು. ಆದರೆ ಆ ಕೂಟದಲ್ಲಿ ಅದು ಬಹಿರಂಗವಾಗಲಿಲ್ಲ.[೧] ನರ್ತಕರಂತೆ ಉದ್ದ ತಲೆಗೂದಲಿದ್ದ ಕೋ.ಶಿ.ಕಾರಂತರು ಅಲ್ಲಿ ಸೂತ್ರಧಾರರು. ನನ್ನ ಪಾಲಿಗೆ ಅವರು ಸೋಜಿಗದ ವ್ಯಕ್ತಿ, ಒಂದು 'ರಾತ್ರಿ 'ಕೂಲಿ' ಎಂಬ ನಾಟಕವಿತ್ತು. ಬೆಂಗಳೂರಿನ ಅ.ನ.ಸುಬ್ಬರಾಯರು. ಬರೆದದ್ದು, ಅವರ ತಂಡದ್ದೇ ಅಭಿನಯ. ತೆರೆ ಸರಿದಾಗ ಒಬ್ಬ ಸ್ಫುರದ್ರೂಪಿ ಯುವಕ ಬಣ್ಣದಿಂದ ಒಪ್ಪಗೊಂಡು ರಂಗದ ಬಲಮೂಲೆಯಲ್ಲಿ ಸ್ಟೂಲಿನ ಮೇಲೆ ಕುಳಿತಿದ್ದ. ಬಿಳಿ ಪಾಯಜಾಮ-ನಿಲುವಂಗಿ, ಅವರು ಅ.ನ.ಕೃ. 'ನಾಟಕದಲ್ಲಿ ಕಾರ್ಮಿಕ ಮುಖಂಡ. ಇನ್ನೊಂದು ರಾತ್ರೆ ನೋಡಲು ದೊರೆತದ್ದು ಕಾರಂತರೇ ನಿರ್ಮಿಸಿದ್ದ 'ಭೂತರಾಜ್ಯ'ಎಂಬ ಮೂಕಿ ಸಿನಿಮಾ.ಅದಕ್ಕೂ ಮುಂಚೆ ಅವರು ತಮ್ಮ 'ಡೊಮಿಂಗೊ' ನಾಟಕವನ್ನು ಮೂಕಿ ಚಲಚ್ಚಿತ್ರವಾಗಿ ಮಾಡಿದ್ದರಂತೆ. ಅದು ಆಕಸ್ಮಿಕದಲ್ಲಿ ಸುಟ್ಟುಹೋಗಿತ್ತಂತೆ. ಆಕಸ್ಮಿಕದ ವಿಷಯದಲ್ಲಿ ಸುಳ್ಳ ಹಿಂದೆ ಬೀಳಲಿಲ್ಲ. ಹಿಮಯುಗ ರಂಗಸ್ಥಳದಲ್ಲಿ ಹಾಸಿದ್ದ ಹತ್ತಿರಾಶಿಗೆ ಯಾವುದೋ ಕಡ್ಡಿಬೆಂಕಿ ತಗಲಿತು. ಸದ್ಯಃ ಕ್ಷಿಪ್ರ ಕಾರ್ಯಾಚರಣೆಯಿಂದ ಬೆಂಕಿ ಹತೋಟಿಗೆ ಬಂತು! ಸುಳ್ಯ ಗೆದ್ದಿತು. ಕಾರ್ಯಕ್ರಮಗಳಲ್ಲಿ ದೃಶಾವಳಿಯ ಜತೆಗೆ ಯಕ್ಷಗಾನಕ್ಕೂ ಸ್ಥಾನವಿತ್ತು.
ಭಾರತದ ದೇಶೀಯ ಭಾಷೆಗಳಲ್ಲಿ ಈ ಶತಮಾನದ ಎರಡು ಮೂರನೆಯ ದಶಕಗಳಲ್ಲಿ ನವೋದಯ ಉಂಟಾಗಲು ಕಾರಣ, ತಿಲಕ-ಗಾಂಧಿಯರ (ಬಳಿಕ ಗಾಂಧಿ-ಜವಾಹರರ) ನೇತೃತ್ವದ ಸ್ವಾತಂತ್ರ್ಯ ಸಂಗ್ರಾಮ, ಸಾಹಿತ್ಯ, ಸಂಸ್ಕೃತಿ ಹೊಸನೆಲೆಯನ್ನು ಅರ್ಥವನ್ನು ಸಾಧಿಸಲು ಯತ್ನಿಸಿದ ಕಾಲ ಅದು. ಆ ವಾತಾವರಣದಲ್ಲಿ ತಮ್ಮ ಅಭಿವ್ಯಕ್ತಿಯನ್ನು ಕಂಡು ಕೊಂಡವರು ಸಹಸ್ರಾರುಜನ. ಒಬ್ಬೊಬ್ಬರದು ಒಂದೊಂದು ಬಗೆ. ಅದರಲ್ಲೊಂದು ಕಾರಂತಶೈಲಿ. ಈ ಶೈಲಿಯಿಂದ ಪ್ರಭಾವಿತವಾದ ಕ್ಷೇತ್ರ ದಕ್ಷಿಣ ಕನ್ನಡ. 1930-40ರ ದಶಕದಲ್ಲಿ ಪುತ್ತೂರಿನ ದಸರೆ-ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಹೆಸರುವಾಸಿಯಾಗಿತ್ತು. ಕಾರಂತರೇ ಹೇಳಿರುವಂತೆ "ಪುತ್ತೂರಿನ ನನ್ನ ಆಶ್ರಯದಾತರಾದ ಮೊಳಹಳ್ಳಿ ಶಿವರಾಯರು ಆ ಊರನ್ನು ಬಿಡುವ ಸ್ವಲ್ಪ ಕಾಲದ ಮೊದಲೇ ಅಲ್ಲಿನ ದಸರಾ ಉತ್ಸವ ನಿಂತಿತು." ನನ್ನ ಹನ್ನೊಂದು ಹನ್ನೆರಡನೆಯ ವಯಸ್ಸಿನಲ್ಲಿ (1935 ಮತ್ತು 1936) ಪುತ್ತೂರಿನ ದಸರೆ ನೋಡಲು, ಸವಿಯಲು ಸುಳ್ಯದಿಂದ ನಾನು ಬಂದಿದ್ದೆ. 1936ರಲ್ಲಿ ಒಂದು ದೃಶ್ಯಾವಳಿಯಲ್ಲಿ ಗುಡುಗು ಮಿಂಚು ಆರ್ಭಟಕ್ಕೆ ಬೆದರುವ ಆದಿವಾಸಿಯ ಪಾತ್ರವಹಿಸಿದ್ದೆ. ಪ್ರೇಕ್ಷಕರ ಮುಂದೆ ನಾನು ಹೀಗೆ ಕಾಣಿಸಿಕೊಂಡದ್ದು ಒಂದೆರಡು ನಿಮಿಷ ಮಾತ್ರ.
ಶಾಲೆಯ ವಾರ್ಷಿಕೋತ್ಸವದಲ್ಲಿ ಯಾವಾಗಲೂ ವಿವಿಧ ವಿನೋದಾವಳಿ ಇರುತ್ತಿತ್ತು. ಒಂದು ಬಾರಿ ಇದ್ದಕ್ಕಿದ್ದಂತೆ ರಂಗಸ್ಥಲದ ಮೇಲೆ ಬುದ್ಧ ಪ್ರತ್ಯಕ್ಷನಾದ. ಬೋಳುತಲೆ, ಆಕರ್ಷಕ ದುಂಡುಮುಖ, ನೀಳವಸನ. 1 ಬುದ್ಧ ಕೈಗಳಲ್ಲಿ ఆ ದಿನವೋ ವಾರವೋ ಹುಟ್ಟಿರಬಹುದಾದ ಮುದ್ದಾದ ಆಡಿನಮರಿ. ಆ ಪಾತ್ರಧಾರಿ ನನ್ನ ಹಿರಿಯ ಕನ್ನಡ ಅಧ್ಯಾಪಕ ಬಿ. ಶಂಕರನಾರಾಯಣ ರಾವ್. ನಶ್ಯಪ್ರಿಯ-ಸದಾಮಿಡಿಯುವ ಭಾವಜೀವಿ!
1 ಕಿರಿಯ ಕನ್ನಡ ಅಧ್ಯಾಪಕರು ಕೆ. ಎಸ್. ವೆಂಕಪ್ಪ ಭಟ್. ನಾಲ್ಕನೆಯ ತರಗತಿಯಲ್ಲಿ ನಾನು ಬರೆದ ಒಂದು ಪ್ರಬಂಧದ ಮಾರ್ಜಿನ್ ನಲ್ಲಿ ಇಂಗ್ಲಿಷಿನಲ್ಲಿ ಕೆಂಪು ಮಸಿಯಲ್ಲಿ Good ಎಂದು ಬರೆದವರು. ಅದು ನನಗೆ ದೊರೆತ ಮೊದಲ ಮೆಚ್ಚುಗೆ. ಮುಂದೆ ಬೇರೆ ಬೇರೆ ಪಾಠಗಳಲ್ಲೂ ಗುಡ್-ವೆರಿಗುಡ್ ಗಳ ಪರಿಚಯ ಆಗಾಗ್ಗೆ ಆಯಿತೆನ್ನಿ.
ಸುಳ್ಯಕ್ಕೊಂದು ನಾಟಕ ಕಂಪನಿ ಬಂತು; 1937ರಲ್ಲಿ. ಆ ಜನ ಬಸ್ ನಿಲ್ದಾಣದ ಬಳಿ ತಟಿಕೆಯ, ಮುಳಿಯ ಮಾಡಿನ ರಂಗಮಂದಿರ ರಚಿಸಿದರು. ಕರಪತ್ರಗಳು ಪುತ್ತೂರಿನಲ್ಲಿ ಅಚ್ಚಾಗಿ ಬರುತ್ತಿದ್ಧುವು. ಕಂಪನಿ ಒಂದೆರಡು ತಿಂಗಳು ಅಲ್ಲಿತ್ತೆಂದು ತೋರುತ್ತದೆ. ಟಿಕೆಟು ಕೊಳ್ಳಲು ಕಾಸಿರದಿದ್ದ ದಿನಗಳು. ಆದರೂ ಒಂದೆರಡು ನಾಟಕ ನೋಡಿದೆ. ನೆನಪು ಗಾಢವಾಗಿರುವ ನಾಟಕ 'ಭಕ್ತ ಕಬೀರ'.
ಕಂಪನಿ ಬೇರೆ ಊರಿಗೆ ಹೋದಮೇಲೂ ರಂಗಮಂದಿರವನ್ನು ಕೆಡವಿರಲಿಲ್ಲ. ಸುಳ್ಯದಲ್ಲಿ ಆಗ ಆಫೀಸರರ ಕ್ಲಬ್ ಇತ್ತು. ಸದಸ್ಯವರ್ಗ, ಸಬ್ ರಿಜಿಸ್ಟ್ರಾರ್, ಪೊಲೀಸ್ ಸಬ್ಇನ್ಸ್ ಪೆಕ್ಟರ್ ಅಥವಾ ರೈಟರ್, ಸರಕಾರೀ ಆಸ್ಪತ್ರೆಯ ಡಾಕ್ಟರು, ಮಣೆಗಾರರು ಮತ್ತಿತರರು; ಜಮೀನ್ದಾರರೊಬ್ಬರು; ಅವರಿಗೆ ಸರಿಗಟ್ಟಬಲ್ಲ ನಮ್ಮ ಶಾಲೆಯ ಅಧ್ಯಾಪಕವರ್ಗ. ಇವರೆಲ್ಲ ಸುಳ್ಯದ ಶಿಷ್ಟಜನ. ಒಬ್ಬರಿಗೆ ಹಾರ್ಮೋನಿಯಂ ನುಡಿಸಲು ಬರುತ್ತಿತ್ತು. ಯಾರು ಬೀಜ ಬಿತ್ತಿದರೊ? ತೆರಳಿದ್ದ-ಕಂಪನಿಯ ಪರಾಗಸ್ಪರ್ಶವಾಗಿತ್ತೇನೊ! ಅಂತೂ ಈ ಶಿಷ್ಟರು ನಾಟಕ ಆಡಲು ಹೊರಟರು. ಸ್ವಲ್ಪ ಕಾಲ ಬ್ಯಾಡ್ಮಿಂಟನ್ ನ ವೇಳೆಯನ್ನು ನಾಟಕದ ರಂಗತಾಲೀಮು ಆಕ್ರಮಿಸಿತು.
ಆ ವರ್ಷದ ಆರಂಭದಲ್ಲಿ ನನಗೆ ಯು. ಎಸ್. ಪಣಿಯಾಡಿಯವರ 'ತುಳುನಾಡ್' ಮಾಸಪತ್ರಿಕೆಯ ಪರಿಚಯವಾಗಿತ್ತು. ಎಂ. ವಿ. ಹೆಗ್ಡೆಯವರ ಕವಿತೆಗಳು ಆ ಪತ್ರಿಕೆಯಲ್ಲಿ ನನಗೆ ಮುಖ್ಯ ಆಕರ್ಷಣೆ. ವ್ಯಾವಹಾರಿಕ ತುಳುವಿನಲ್ಲಿ ನಾನೂ ಕವಿತೆ ರಚಿಸಿದೆ. ಕತೆ, ಕಿರುನಾಟಕ ಬರೆದೆ. ಅವೆಲ್ಲ ಅಚ್ಚಾದುವು.
ಸುಳ್ಯದ ಶಿಷ್ಟರು ಆಡಿದ ನಾಟಕಗಳಲ್ಲಿ ಮುಖ್ಯವಾದುವು: 'ಒಂದೇ ಗುಟುಕು' ಮತ್ತು 'ಮೇವಾಡದ ಪತನ.' ಇವೆರಡನ್ನೂ ಒಂದನ್ನು ಮರಾಠಿಯಿಂದ, ಇನ್ನೊಂದನ್ನು ಹಿಂದಿಯಿಂದ ಕನ್ನಡಕ್ಕೆ ತಂದರು ಬಿ. ಕೆ. ರಾಮಕೃಷ್ಣ. ಒಂದು ದಿನ ರಂಗತಾಲೀಮು ನಡೆಯುತ್ತಿದ್ದಾಗ ಡ್ರಾಯಿಂಗ್ ಮಾಸ್ಟರು ಸುಬ್ಬಣ್ಣನವರು ನನ್ನನ್ನು ಕರೆದು, "ಇಲ್ಲಿ ನಡೆಯುತ್ತಿರುವ ರಿಹರ್ಸಲನ್ನು ಚಿತ್ರಿಸಿ ಒಂದು ನಾಟಕ ಬರಿ ನೋಡುವ,” ಎಂದರು. ನನ್ನ ತುಳುಸಾಹಸ ಆಗ ಅಲ್ಲಿ ಎಲ್ಲರಿಗೂ ಗೊತ್ತಿದ್ದ ಸಂಗತಿ. ಹೆಸರು ಅವರೇ ಹೇಳಿದರು. 'ನಾಟಕವೆಂಬ ನಾಟಕ' ನಾಲ್ವತ್ತು ಪುಟಗಳ ಒಂದು ನೋಟ್ ಬುಕ್ ಪುಡಿ ಮಾಡಿದೆ. ಸುಬ್ಬಣ್ಣ ಮಾಸ್ಟರು ನಾನು ಬರೆದದ್ದನ್ನು ಓದಿದರು. ಏನೂ ಹೇಳಲಿಲ್ಲ. ಆ ಹಸ್ತಪ್ರತಿ ನನ್ನಲ್ಲಿಲ್ಲ. ಅವರಲ್ಲೇ ಉಳಿಯಿತೊ? ಗೊತ್ತಿಲ್ಲ.
'ಮೇವಾಡ ಪತನ' ನಾಟಕಕ್ಕೆ ನನ್ನನ್ನು ಸೆಳೆದರು. ಹದಿನಾಲ್ಕರ ಶಿವ ಸುಳ್ಯದಲ್ಲಿ 'ಸುದ್ದಿ' ಯಾದ. ಮೊಘಲ್ ಸಮ್ರಾಜ್ಞೆ, ಉದಯಪುರಿಯ ಪಾರ್ಟು. ಧ್ವನಿ ಒಡೆದಿತ್ತು. ಆದರೆ ಬೆಳವಣಿಗೆಯಲ್ಲಿ ಎತ್ತರವನ್ನು ಸಾಧಿಸಿರಲಿಲ್ಲ, ಸಾಲುಗಳನ್ನು ಗಟ್ಟಿಮಾಡಿದೆ. ಅಭಿನಯ ಕೇಳಬೇಡಿ. ಅಕ್ಬರ್ ಪಾತ್ರಧಾರಿ ಸುಮಾರು ಆರಡಿ ಎತ್ತರದ ಎಂ. ಮಿರಾಸಾಹೇಬರು. ಊರಿನ ಜಮೀನ್ದಾರರು.1
ಅಕ್ಬರ್: "ಉದಯಪುರೀ...."
ಉದಯಪುರಿ: (ಪಲ್ಲಂಗದ ಮೇಲಿಂದ ತಲೆಎತ್ತಿ ಸಾಮ್ರಾಟನ ಎತ್ತರವನ್ನು ನೋಡುತ್ತ)
"ಜಹಾಪನಾ!"
ಕಂಪನಿ ಮಂದಿರವನ್ನು ಕೆಡಹುವುದಕ್ಕೆ ಮುಂಚೆ ನಡೆದ ಕಾರ್ಯಕ್ರಮದಲ್ಲಿ
1 ಅವರ ಹೆಸರು ಮರೆತಿದ್ದೆ. ಈ ಲೇಖನದ ರೂಪುರೇಷೆ ಸ್ಪಷ್ಟವಾದೊಡನೆ, ಸುಳ್ಯದ ಪ್ರಮುಖ ವರ್ತಕ- ಬಾಲ್ಯದಲ್ಲಿ ನನ್ನ ಸಹಪಾಠಿ- ಕೆ. ಮಹಮ್ಮದ್ ಹಾಜಿ ಅವರಿಗೆ ಬರೆದೆ. ಮರುಟಪಾಲಲ್ಲೆ ಅಕ್ಬರ್ ಪಾತ್ರ ವಹಿಸಿದ ಮಹಾನುಭಾವರ ಹೆಸರು ತಿಳಿಸಿದರು. ಮೀರಾ ಸಾಹೇಬರ ಬೇಗಂ ಒಂದು ದಿನ ಶಾಲೆಗೆ ಹೋಗುತ್ತಿದ್ದ ನನ್ನನು ಕರೆಸಿ ತಿಂಡಿ ಕೊಟ್ಟಿದ್ಧರು. ಅವರ ಮಗ ಶಬೀರ್ ಇನ್ನೊಂದು ದಿನ ಮರದಿಂದ ಮಾವಿನ ಹಣ್ಣು ಕಿತ್ತುಕೊಟ್ಟಿದ್ದ. ಈಗ ಶಬೀರ್ ಸಾಹೇಬರು ಮಂಗಳೂರಿನಲ್ಲಿರುವರಂತೆ. ಒಂದು ಕಿರುನಾಟಕವೂ ಇತ್ತು. “ನಾಲ್ಕನೆಯ ಪಿಶಾಚಿ."1 ಇಲ್ಲಿ ನಾನು ರಾಣಿಯಲ್ಲ, ನಾಲ್ಕು ಮಕ್ಕಳ ತಾಯಿ. ಫರಂಗಿರೋಗದ ತಂದೆಗೆ ಹುಟ್ಟುವ 'ಶನಿಸಂತಾನ' ಇವು. ನಾನು ಅಮ್ಮ. ಮುಖ್ಯೋಪಾಧ್ಯಾಯರು ಅಪ್ಪ. ನಾಟಕ ಈಟಿಯಂತೆ ತಿವಿಯಬೇಕು; ಜನ ಎಚ್ಚರಗೊಳ್ಳಬೇಕು ಎಂದು ರಾಮಪ್ಪಯ್ಯನವರು ಬಯಸಿದಂತೆ ತೋರುತ್ತದೆ. ಅಭಿನಯಿಸಿದ ವೇಳೆಯಲ್ಲಿ ನನಗೆ ಅದು ಪೂರ್ತಿಯಾಗಿ ಅರ್ಥವಾಗಿರಲಿಲ್ಲ.
೧೯೩೭ರ ಮೇ ಅಂತ್ಯದಲ್ಲೋ ಜೂನ್ ಆರಂಭದಲ್ಲೋ ಕನ್ನಡದಲ್ಲಿ ನನ್ನ ಮೊದಲ ಸಣ್ಣಕತೆ ಬರೆದೆ. ನಮ್ಮ ಶಾಲೆಗೆ ಮಂಗಳೂರಿನಿಂದ 'ರಾಷ್ಟ್ರಬಂಧು' ವಾರಪತ್ರಿಕೆ ಬರುತ್ತಿತ್ತು. ಎರಡನೆಯ ಪುಟದಲ್ಲಿ ವಾರದ ಕತೆ ಇರುತ್ತಿತ್ತು. ಅಲ್ಲಿಗೆ ನನ್ನದನ್ನು ಕಳಿಸಿದೆ. ಪ್ರಾಧ್ಯಾಪಕ-ಸಾಹಿತಿ ಸಂಪಾದಕ ಕಡೆಂಗೋಡ್ಲು ಶಂಕರ ಭಟ್ಟರು'ಕಿಶೋರ'ನ ಕತೆಗೆ ಪಾಸ್ ಮಾರ್ಕ್ ಕೊಟ್ಟರು. ಜುಲೈ ೫ರ ಸಂಚಿಕೆಯಲ್ಲಿ ಅದು ಪ್ರಕಟವಾಗಿಯೇ ಬಿಟ್ಟಿತು.... ನನಗೆ ಕತೆಗಾರನ ಪಾತ್ರ ಇನ್ನು.
ಊರಿನ ಕ್ಲಬ್ಬಿನಲ್ಲಿ ಒಂದು ವಿದಾಯಕೂಟ ಏರ್ಪಟ್ಟಿತು. ಸುಳ್ಯದ ಜನಪ್ರಿಯ ಡಾಕ್ಟರಿಗೆ ವರ್ಗವಾಗಿತ್ತು. ಆ ಸಮಾರಂಭದ ಒಂದು ಮೂಲೆಯಲ್ಲಿ ನಾನು ಕುಳಿತಿದ್ದೆ. ನಾಲ್ಕು ಸಾಲುಗಳ ಸುದ್ದಿಯನ್ನು 'ರಾಷ್ಟ್ರಬ೦ಧು'ವಿಗೆ ದಾಟಿಸಿದೆ. ಅಚ್ಚಾಯಿತು. ಸುಳ್ಯದ ಶಿಷ್ಟರಿಗೆ ಸಂತೋಷ. ಪತ್ರಿಕೆಗಳಿಗೆ ಸುಳ್ಳು ಸುದ್ದಿ ಕಳುಹಿಸಿ, ಪ್ರಕಟವಾದಾಗ ಸುದ್ದಿಗೆ ಗುರಿಯಾದವರು
1 ಬಣ್ಣದ ಬಯಲು ಪೀಠಿಕೆ ಬರೆಯುವ ಸಿಧ್ಧತೆಯಲ್ಲಿದ್ದಾಗ ಮಿತ್ರರಾದ ಎಸ್. ಎಸ್. ಶಿವಸ್ವಾಮಿ ಬಂದರು. ದೇಶದ ಸಮೂಹಮಾಧ್ಯಮ ಕ್ಷೇತ್ರದಲ್ಲಿ (ಆಕಾಶವಾಣಿ, ದೂರದರ್ಶನ) ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾದವರು. ಬರೆಹ, ಭಾಷಣಗಳಲ್ಲಿ ಈಗ ನಿರತರು. ಹಿರಿಯ ಲೇಖಕರೂ ಮಿತ್ರರೂ ಆಗಿದ್ದ ಪಡುಕೋಣೆ ರಮಾನಂದ ರಾಯರು ತಮ್ಮ ಗೆಳೆಯನ 'ನಾಲ್ಕನೆಯ ಪಿಶಾಚಿ' ನಾಟಕವನ್ನು The Fourth Spectre ಎಂದು ಇಂಗ್ಲಿಷಿಗೆ ಭಾಷಾಂತರಿಸಿ, ಶಿವಸ್ವಾಮಿಯವರಿಗೆ ಕೊಟ್ಟರಂತೆ. ಸ್ವಾತಂತ್ರ್ಯೋತ್ತರ ಕಾಲಾವಧಿ. ಅವರು ಮೂಲವನ್ನೂ ಅನುವಾದವನ್ನೂ ದಿಲ್ಲಿಗೆ ಕಳೆಸಿದರಂತೆ. ಪ್ರತಿಕ್ರಿಯೆ ಬರಲಿಲ್ಲ. ಪಡುವ ಕಷ್ಟ ಕಂಡು, ಖುಷಿಪಡುವವರೂ ಆಗ ಇದ್ದರು. ಅಂಥ ಕಪಟಿಯ ಪರಿಚಯವೂ ನನಗೆ ಬೇಗನೆ ಆಯಿತು. ಮುಖ್ಯೋಪಾಧ್ಯಾಯರ ಮನಸ್ಸನ್ನೇ ಆತ ನೋಯಿಸಿದ್ದ.... ಸುದ್ದಿಗಾರನ ಪಾತ್ರವನ್ನೂ ಎಚ್ಚರಿಕೆಯಿಂದ ಅಭಿನಯಿಸತೊಡಗಿದೆ.
ಆಗ ಶಾಲೆಯಲ್ಲಿ ತಿಂಗಳ ಹಬ್ಬ ನಡೆಯುತ್ತಿತ್ತು. ಒಮ್ಮೆ ಅಧ್ಯಾಪಕರು "ಈ ಸಲ ನೀನು ಅಧ್ಯಕ್ಷನಾಗು" ಎಂದರು. ಹೊಸ ಪಾತ್ರ. ಎಲ್ಲ ವಿಧ್ಯಾರ್ಥಿಗಳದೇ ಕಾರಭಾರು. ಹಾಡು, ಕಥೆ, ಭಾಷಣ ಎಲ್ಲವೂ. ಅಧ್ಯಕ್ಷನಾದ ಮಾತ್ರಕ್ಕೆ ನನ್ನದೇ ಕಾರ್ಯಕ್ರಮ ಇರಬಾರದೆಂಬ ನಿಯಮವಿರಲಿಲ್ಲ. ಸ್ವಿಜರ್ಲೆಂಡಿನ ದೇಶಪ್ರೇಮಿ ವಿಲಿಯಂಟೆಲ್ ನ ಕತೆಯನ್ನು ಆಯ್ಧುಕೊಂಡೆ. ಒಬ್ಬ ಕಿರಿಯ ಹುಡುಗನಿಗೆ ಟೆಲ್ ನ ಪಾತ್ರಕೊಟ್ಟು (ಕತ್ತರಿಸಿ, ಮತ್ತೆ ನಯವಾಗಿ ಜೋಡಿಸಿದ ನಿಂಬೆಹಣ್ಣು ಅವನ ತಲೆಯಮೇಲೆ. ಅದಕ್ಕೆ ಕಟ್ಟಿದ ನೂಲು ನೇಪಥ್ಯದಲ್ಲಿ ಕಣ್ಮರೆ.) ನಾನೇ ಟೆಲ್. ಸಾಭಿನಯ ಕಥನ. (ದೃಶ್ಯ-ಶ್ರಾವ್ಯ ಎರಡೂ.) "ಬಾಣಬಿಟ್ಟು, ನಿನ್ನ ಮಗನ ತಲೆಯ ಮೇಲಿನ ಹಣ್ಣನ್ನು ಎರಡು ಹೋಳು ಮಾಡು! ಇಲ್ಲವಾದರೆ-!" ವೈರಿಭೂಪನ ಗರ್ಜನೆ. ಆ ಮಾತು ಹೇಳಿ ಮತ್ತೆ ದೇಶಪ್ರೇಮಿ ಟೆಲ್ ಆಗಿ, ಹೆದೆ ಏರಿಸಿ ಬಾಣಬಿಟ್ಟೆ, ಮರೆಯಲ್ಲಿದ್ದವನು ನೂಲು ಎಳೆದ. ನಿಂಬೆ ಹಣ್ಣಿನ ಎರಡು ಹೋಳುಗಳು ಉರುಳಿದುವು! (ಕರತಾಡನ)
೪
ಹೈಸ್ಕೂಲು ಅಧ್ಯಯನಕ್ಕೆಂದು, ನೀಲೇಶ್ವರಕ್ಕೆ ಹೋದೆ ೧೯೩೮ರ ಬೇಸಗೆಯಲ್ಲಿ. ಪುತ್ತೂರು ಕಾಸರಗೋಡು ತಾಲೂಕುಗಳಿಂದ ಕನ್ನಡ ಹುಡುಗರು ಅಧ್ಯಯನಕ್ಕಾಗಿ ಅಲ್ಲಿಗೆ ಬರುತ್ತಿದ್ದರು. ಮಲಯಾಳಿಗಳು ಸಮಾನ ಪ್ರಮಾಣದಲ್ಲಿದ್ದರು. ಅಲ್ಲಿನವರು, ಸುತ್ತುಮುತ್ತಲಿನವರು. ಇಬ್ಬರ ನಡುವೆ ಸಂಪರ್ಕಭಾಷೆ, ಇಂಗ್ಲಿಷ್. ಆ ಸಲದ (೧೯೩೯) ವಾರ್ಷಿಕೋತ್ಸವದಲ್ಲಿ ಮದರಾಸಿನ ಯಾರೋ (ಚೆಟ್ಟೂರ್?) ಬರೆದ ಇಂಗ್ಲಿಷ್ ನಾಟಕವನ್ನು ಅಭಿನಯಕ್ಕೆ ಗೊತ್ತುಮಾಡಿದ್ದರು. (ಹೆಸರು ಮರೆತಿದ್ದೇನೆ.)ನಾನು ನಾಯಕಿ. ಹಿರಿಯ ಅಧಿಕಾರಿಯ ಪತ್ನಿ ಅಲಮೇಲು. ವಕ್ಷಸ್ಥಲ?
ತೆಂಗಿನ ಎರಡು ಹೋಳುಗಳ ಚಿಪ್ಫು. ಬಿಗಿದು ಹಿಡಿಯಲು ಬ್ರಾ,ಸಿಕ್ಸ್ತ್ ಫಾರ್ಮ್‍ನ ಹಿರಿಯ ಹುಡುಗಿಯೊಬ್ಬಳು (ಯಾರ ಮೂಲಕವೊ) ಎರವಲು ಕೊಟ್ಟದ್ದು.
ಶಾಲೆಯಲ್ಲೂ ಹೊರಗೂ ವಾಗ್ಮಿಯ ಪಾತ್ರ. ಸಾಮ್ರಾಜ್ಯಶಾಹಿಯ
ವಿರುದ್ಧ ಆವೇಶದ ಭಾಷಣಗಳು. ಭಾಷಣ ಸ್ಪರ್ಧೆಯಲ್ಲಿ-ಲೇಖನ ಸ್ಪರ್ಧೆ ಯಲ್ಲೂ ಪ್ರತಿವರ್ಷ ಬಹುಮಾನಗಳು. ಆಗೊಮ್ಮೆ ಈಗೊಮ್ಮೆ ಕಥಕ್ಕೆಳಿ ನೋಡುತ್ತಿದ್ದೆ ಇಷ್ಟಪಟ್ಟು. ಬಣ್ಣ ಬಳೆದ ಮುಖ. ಬಯಲಿನಲ್ಲಿ ಕುಳಿತೆವರು ಬೆರಗಾಗಬೇಕು. ಮುಷ್ಟಿಕಟ್ಟಿ ಭಾಷ್ಪಣ ಮಾಡುವ ಕಲೆ ಸಮನಲ್ಲವೆ ಕಥಕ್ಕಳಿಗೆ ಮುಖವಾಡದ ಬದುಕು. ಒಳಗೂ ಹೊರಗೂ ಒಂದೇ ಆದರೆ ಚಂದ. ಬೇರೆಬೇರೆ ಆದರೆ?
ಕನ್ನಡನೆಲದಲ್ಲಿ ಗಾಂಧಿ-ನೆಹರು ನಾಯಕರು. ದಕ್ಷಿಣಕ್ಕೆ, ಅಗೋಚರ ನಾಯಕರಿದ್ದರು:ಮಾರ್ಕ್ಸ್,ಲೆನಿನ್,ಸ್ಟಾಲಿನ್. ಅಹಿಂಸೆ,ಕರುಣೆ,ಅನುಕ೦ಪ ಗಳ ಜತೆ ಬೆರೆಯಿತು ತೀವ್ರಗಾಮಿತ್ವ. (ನಾಟಕದಲ್ಲಿ ಮುಖ್ಯ ರಸಗಳು ಎಷ್ಟು?)
೫
ಹೈಸ್ಕೂಲು ಮುಗಿಸಿದವನು.೧೯೪೧ರ ಮೇ ಮೊದಲದಿನದಿಂದಲೇ ಮಂಗಳೂರಿನ ನಾಗರಿಕನಾದೆ. 'ರಾಷ್ಟ್ರಬಂಧು' ಸೇರಿದೆ, ಪತ್ರಿಕೋದ್ಯೋಗಿ ಯಾದೆ.
ನಾಟಕಲೋಕದಲ್ಲಿ ನನ್ನ ವಿಲಿವಿಲಿಗೆ ಸಂಬಂಧಿಸಿ ೧೯೪೩ ಗಮನಾರ್ಹ ವರ್ಷ. ಆ ವರ್ಷದ ಮೇ ತಿಂಗಳಲ್ಲಿ ಅಖಿಲ ಭಾರತ ಪ್ರಗತಿಶೀಲ ಲೇಖಕರ ಸಮ್ಮೇಳನ ಮುಂಬಯಿಯಲ್ಲಿ ಜರಗಿತು. ಭಾಗವಹಿಸಲೆಂದು ಮಂಗಳೂರಿ ನಿಂದ ಆ ಮಹಾನಗರಕ್ಕೆ ತೆರಳಿದೆ. ಧಾರವಾಡದಿಂದ ಶ್ರೀರಂಗರು ಬಂದಿದ್ದರು, ಜತೆಗೆ ಮುಂಬಯಿ ನಿವಾಸಿಗಳಾದ ಶ್ರೀರಂಗ ಮಿತ್ರರಿದ್ದರು-ಕೃಷ್ಣಕುಮಾರ ಕಲ್ಲೂರ ಮತು ಎಚ್. ಎಸ್. ಪಾಟೀಲ. ಇನ್ನೊಂದು ಸಮ್ಮೇಳನದಲ್ಲೂ ನಾನು ಭಾಗವಹಿಸಿ IPTA (ಇಪ್ಪಾ)ಅಸ್ತಿತ್ವಕ್ಕೆ ಬಂದುದನ್ನು ಕಂಡೆ.ಏನು ಪೀಪ್ ಲ್ಸ್ ಥಿಯೇಟರಿನ ಉದ್ದೇಶ? ಪ್ರಗತಿಶೀಲ ಸಾಹಿತಿಗಳಿಗೂ ಅದಕ್ಕೂ ಏನು ಸಂಬಂಧ? ಉತ್ತರಗಳು 'ಬಣ್ಣದ ಬಯಲು' ಲೇಖನಕ್ಕೆ ಪೂರಕ ವಾಗಿರುವ ಇನ್ನೊ೦ದು ಪುಟ್ಟ ಲೇಖನದಲ್ಲಿ ಅಡಕಗೊಂಡಿವೆ.ಓದಿ ನೋಡು ವಿರಂತೆ.
ಒಂದು ಮಾತು ಮೊದಲೇ ಹೇಳಿಬಿಡುವುದು ಮೇಲು. ಮೇಲೆ ಪ್ರಸ್ಥಾಫಿತವಾದ ಎರಡು ಸಂಘಟನೆಗಳಿಗೂ ಆ ಕಾಲದ ಏಕ ಕಮ್ಯೂನಿಸ್ಟ್ ಪಕ್ಷವೇ ಪ್ರೇರಕಶಕ್ತಿಯಾಗಿತ್ತು. ಆ ವೇಳೆಗೆ ನಾನು ಕಮೂನಿಸ್ಟ್ ಸೇರಿದ್ದೆನೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ?
ಮಂಗಳೂರು ನನ್ನ ಕಾರ್ಯರಂಗ. ಪ್ರಗತಿಶೀಲ ಲೇಖಕರ ಸಂಘಕ್ಕೂ ಜನತಾರಂಗಭೂಮಿ ಸಮಿತಿಗೂ ನಾನೇ ಕಾರ್ಯದರ್ಶಿ. ಮೊದಲಿನದಕ್ಕೆ ಕೆ.ಕೆ.ಶೆಟ್ಟರು ಅಧ್ಯಕ್ಷರು; ಎರಡನೆಯದರ ಅಧ್ಯಕ್ಷರು ತಲಚೇರಿ ರ೦ಗ ರಾಯರು.ಜನತಾರಂಗಭೂಮಿಯ ಉದ್ಘಾಟನೆಯಲ್ಲಿದ್ದದು ಬರೇ ಭಾಷಣ ಗళు ಮಾತ್ರ!
ಜಪಾನಿನಲ್ಲಿ ಎರಡು ವಿಶಿಷ್ಟ ನಾಟಕ ಶೈಲಿಗಳಿವೆ: 'ನೊ' ಮತ್ತು 'ಕಬುಕಿ'. ನನ್ನ ಮೊದಲ ಯತ್ನ NO ಆಯಿತು! ಹೀಗೆ ಕಾಳಸಂತೆಯವ ರನ್ನು ಹೀಗಳೆಯುವ ಅಭಿನಯಕ್ಕೆ ಒಂದು ಗಂಟೆ ಬೇಕಾಗುವ ನಾಟಕ ರಚಿಸಿದೆ.ಅನುಮತಿ ನೀಡುವವರು ಜಿಲ್ಲಾ,ಪೋಲೀಸ್ ಸೂಪರಿ೦ಟೆ೦ಡೆ೦ಟರು. ಕಾಗದ ಬರೆದೆ. ಮೂರನೆಯ ದಿನ ಪೋಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರು ಸನ್ಯಾಸಿಗುಡ್ಡೆ ರಸ್ತೆಗೆ ಬಂದರು. ಸೈಕಲಿನಲ್ಲಿ. ರಸ್ತೆಗೆ ತಗಲಿಕೊಂಡೇ ನನ್ನ ಕಿಟಿಕಿ. ಸೈಕಲಿನಿಂದಿಳಿದು, ಅತ್ತ ಬಂದು, ಕೇಳಿದರು:
"ಇಲ್ಲಿ ಪೀಪ್‍ಲ್ಸ್ ಥೀಯೇಟರ್ ಎಲ್ಲಿದೆ?"
“ಥಯೇಟರ್‍ಗೆ ಕಟ್ಟಡ ಇಲ್ಲ. ಸಮಿತಿ ಮಾತ್ರ. ನಾನು ಕಾರ್ಯದರ್ಶಿ," ಎಂದೆ.
"ನಿಮ್ಮ ನಾಟಕದ, ಹಸ್ತಪ್ರತಿ ಬ೦ದಿದೆ. ಡಿ.ಎಸ್.ಪಿ.ಬರ ಹೇಳಿ ಧಾರೆ. ಚರ್ಚ್ಚಿಗೆ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಬನ್ನಿ.”
"ಸರಿ."
ಮಾರನೆ ದಿನ ಬ೦ತು.
ಡಿ.ಎಸ್.ಪಿ. ಆಫೀಸಿಗೆ ಹೋಗುವ ಕಡೆ ಬಲಬದಿಯಲ್ಲಿ ಲಾಕಪ್ಪು. ಒಳಗಿದ್ದರು ಕೇಶವ ಕಾಮತ್. ಮಜೂರ ನಾಯಕ. ಅತ್ತ ಇತ್ತ. ಹುಲಿ ಹೆಜ್ಜೆ ಇಡುತ್ತಿದ್ದವರು ನನ್ನನ್ನು ನೋಡಿ ನಕ್ಕರು.
ಅಧಿಕಾರಿಯೊಂದಿಗೆ ವ್ಯರ್ಥ ಚರ್ಚೆ.
ಡಿ.ಎಸ್.ಪಿ. ವಿಚಾರಣೆಗೆ ಮುಂಚೆಯೇ ತೀರ್ಪುಕೊಟ್ಟರು:"ಇಂಥ ನಾಟಕ ಆಡಬಾರದು. No!"
ಹೊರಟು ಬ೦ದೆ.ಹಸ್ತಪ್ರತಿ ಅಲ್ಲಿಯೇ ಉಳಿಯಿತೊ,ತ೦ದೆನೊ, ನೆನಪಿಲ್ಲ.ನಿಮಗೆ ತೋರಿಸಲು ಆ 'ನೋ' ನಾಟಕ ಇಲ್ಲವಲ್ಲ ಎಂದು ಬೇಸರ. ಹರಿದು ಎಸೆದಿರಬಹುದು. ಬೇಡದ್ದನ್ನು ತಕ್ಷಣ ಹರಿದುಬಿಡುವುದು ಮೊದಲಿನಿಂದಲೂ ನನಗಿದ್ದ ಚಾಳಿ.(ಆ ಚಾಳಿಯಿಂದ ಮುಕ್ತನಾಗಲು ಈಗ ಪ್ರಯತ್ನಿಸುತ್ತಿದ್ದೇನೆ. ಆದರೆ, ತಡವಾಗಿ ಬಂದ ಬುದ್ಧಿಯಿಂದ ಪ್ರಯೋಜನ ಕಡವೆು.)
ವಿವಿಧ ವಿನೋದಾವಳಿಗೆ ಪೋಲೀಸ್ ಕಣ್ಯಾಪು ಬೇಡವಲ್ಲ? ಕೆನರಾ ಹೈಸ್ಕೂಲಿನಲ್ಲಿ ಕಾರ್ಯಕ್ರಮ ಇಟ್ಟುಕೊಂಡೆವು. ಸಪ್ಪೆಯಾಯಿತು.
ಆಗ ಬಂತು ಮುಂಬಯಿಯಿಂದ ಒಂದು ನಾಟಕದ ಬೆರಳಚ್ಚು ಪ್ರತಿ. ಶೀರ್ಷಿಕೆ: 'ಅಮೃತ್'. ಬರೆದವರು ಖ್ವಾಜಾ ಅಹಮದ್ ಅಬ್ಸಾಸ್. ಭಾಷೆ ಇಂಗ್ಲಿಷ್ವಿ.ವಿಡಂಬನಾತ್ಮಕ ಕೃತಿ. No? or Yes? ಅನುವಾದಿಸುವುದಕ್ಕೆ ಮುಂಚೆ ಮೊದಲು ಇದರ ತೀರ್ಮಾನವಾಗಲಿ ಎಂದು,ಡಿ.ಎಸ್.ಪಿ.ಯವರಿಗೆ 'ಅಮೃತ್' ಕೊಟ್ಟೆ. ಅವರು ಜಿಲ್ಲಾ ಕಲೆಕ್ಟರಿಗೆ ರವಾನಿಸಿದರು. ಕರಮತುಲ್ಲಾ,ಐ.ಸಿ.ಎಸ್.
ಬುಲಾವ್. ಸಂಜೆ ಹೊತು ಹೋದೆ ವಸತಿ-ಕಾರ್ಯಾಲಯ ಎರಡೂ ಇದ್ದಕಟ್ಟಡಕ್ಕೆ. ಅಬ್ಬಾಸರ ನಾಟಕವನ್ನು ಓದಿ ಮುಗಿಸಿದ್ದರು, ಏನು ನಯ! ಏನು ವಿನಯ! ನಮ್ಮ ಮಾತುಕತೆ ನಡೆಯುತ್ತಿದಾಗ, ಬೇಗಂ ಸಾಹೇಬರೂ ಎಲ್ಲಿಂದಲೋ ಇಣಿಕಿ ನೋಡಿದರು.
“ನಾಟಕ ಸಾರಸ್ಯಕರ. ಆದರೆ-"
ಅವರ ಮುಖ ನೋದಿದೆ.ಮು೦ದುವರಿಸಿದರು
"ಜಾನ್‍ಬುಲ್ ಪಾತ್ರ ಮಾತ್ರ ಬೇಡ. ಅದನ್ನು ತೆಗೆದು ಹಾಕಿ
ಅನುಮತಿ ಕೊಡೋಣ."
ನಾಟಕ ಸೀಳು ಬಿಟ್ಟಂತೆ ಆಗ್ತದಲ್ಲ?"
"Sorry Mr. Rao. ಸ್ಟೇಜ್ ಮೇಲೆ ಜಾನ್ಬುಲ್ ಚಿತ್ರಣ
ಸಲ್ಲದು....”
ಗಣಪತಿ ಹೈಸ್ಕೂಲಿನಲ್ಲಿ ಬುಲ್ ಇಲ್ಲದೆಯೇ 'ಅಮೃತ್' 1 ಆಡಿದೆವು. ಆ
ವರ್ಷ ಬಿಜಾಪುರದ ಬರಗಾಲದ ವೇಳೆ ಶ್ರೀರಂಗರು ಬರೆದಿದ್ದ'ಬೀದಿಯ ಭೂತ' ಏಕಾಂಕವನ್ನೂ ಅಭಿನಯಿಸಿದೆವು. ಯಶಸ್ಸು ಲಭಿಸಿತು. ಸಂಘಟಕನಾದವನು ಹೊರಗೆ ಓಡಾಡಬೇಕೇ ಹೊರತು ಸ್ವತಃ ಬಣ್ಣ ಅಂಟಿಸಿಕೊಳ್ಳಬಾರದೆಂಬು ದನ್ನು ಆದಿನ ಕಲಿತೆ.
ಕಲಿತದ್ದನ್ನು. ಕೃತಿಗಿಳಿಸಲು ಅವಕಾಶ ದೊರೆತದ್ದು ೧೯೪೪ರಲ್ಲಿ
"ನಾವೂ ಮನುಷ್ಯರು!” ನಾಟಕವನ್ನು ಮಂಗಳೂರು ಮೈದಾನದಲ್ಲಿ ಬಯಲು ನಾಟಕವಾಗಿ ಆಡಿದಾಗ.
೬
ಈ ಪುಸ್ತಕದ ಹೂರಣವೇ 'ನಾವೂ ಮನುಷ್ಯರು!'ನೀವು ಓದುವುದಕ್ಕೆ
ಮುನ್ನ ಅದರ ಪೃಥಕ್ಕರಣ, ಮೌಲ್ಯಮಾಪನ ಇತ್ಯಾದಿ ನಾನು ಮಾಡ ಬಾರದು.
೧೯೪೪ರ ನವೆಂಬರ್ ೭ ರಂದು 'ನಾವೂ ಮನುಷ್ಯರು!' ನಾಟಕದ
ಪ್ರಥಮ ಪ್ರದರ್ಶನ, ಮಂಗಳೂರು ಮೈದಾನಿನಲ್ಲಿ, ಮೇಜುಗಳ ಮೇಲೆ ಮೇಜುಗಳನ್ನಿರಿಸಿ ನಿರ್ಮಿಸಿದ ರಂಗಸ್ಥಲ, ಬಿದಿರು ಊರಿ ಮಾಡಿದ
1 ಕನ್ನಡದಲ್ಲಿ'ಅಮೃತ' ಚೌಕಟ್ಟು. ಹಿನ್ನೆಲೆಯಲ್ಲಿ ಬಿಳಿಬಟ್ಟೆ, ಬೇರೆ ಪರದೆಗಳಿಲ್ಲ. ಪೆಟ್ರೊಮ್ಯಾಕ್ಸ್ ದೀಪಗಳು,ಎದುರು ಹೊಸ ಅನುಭವಕ್ಕಾಗಿ ಕಾದಿದ್ದ ಐದು ಸಹಸ್ರಕ್ಕೂ
ಹೆಚ್ಚು ಜನ.ನಾಟಕ ಅಭಿನಯಿಸಲು ಪೋಲೀಸರ ಅನುಮತ್ತಿ ಕೇಳಿರಲಿಲ್ಲ.ಅವರೂ ನನ್ನನ್ನು ಸಮೀಪಿಸಿರಲಿಲ್ಲ;ಅಕ್ಟೋಬರ್ ಕ್ರಾ೦ತಿಯ ದಿನವಲ್ಲವೆ ಆವತ್ತು? ನಡೆಯುತ್ತಿದ್ದ ವುಹಾಯುದ್ಧದಲ್ಲಿ ಫಾಸಿಸಮಿನ ಶವದ್ದಾನಿಗೆ ಮೊಳೆ ಹೊಡೆಯುತ್ತಿದ್ದ ಬಲಿಫ್ಟದೇಶವಲ್ಲವೆ ರಷ್ಯ?
ಕಮೂನಿಸ್ಟ್ ಪಕ್ಷದಿಂದ ನಾನು `ದೂರಸರಿದು ಮೂವತ್ತೈದು ವರ್ಷ ಸಂದಿವೆ. ಆದರೂ ನನ್ನ 'ಕೆಂಪು ದಿನಗಳ ನೆನಪು ಮಾಸಿಲ್ಲ.ಇಷ್ಟ ವಾದದ್ದು ಅಪ್ರಿಯವಾದದು ಎರಡೂ ಇವೆ ಆ ಮೂಟೆಯಲ್ಲಿ.ನನಗೆ ತೃಪ್ತಿ ನೀಡಿದ ಒಂದು ಘಟನೆ: 'ನಾವೂ ಮನುಷ್ಯರು!'2' ಬಯಲು ನಾಟಕದ ಪ್ರದರ್ಶನ.
ಹಲವು ಕಾರ್ಮಿಕ ಸಂಘಟನೆಗಳೂ ಕಮ್ಯೂನಿಸ್ಟ್ ಪಕ್ಷವೂ ಒಂದಾಗಿ
ಏರ್ಪಡಿಸಿದ್ದ ಕಾರ್ಯ್ದುಕ್ರಮ್ಮ. ಭಾಷಣಗಳ ಸುರಿಮಳೆ ಆದಮೇಲೆ ಜನತಾ ರಂಗಭೂಮಿ ಹೊಣೆ ಹೊತ್ತಿದ್ದ ನಾಟಕ, ವಿವಿಧ ವಿನೋದ. ಕ್ಲಾರ್ಮಿಕ
1. ಆಕ್ಟೋಬರ್ ಕ್ರಾ೦ತಿ,-ನವೆಂಬರ್'ನಲ್ಲಿ ಆಚರಣೆಇದೇನು ಎನ್ನುವಿರಾ? ತ್ಸಾರ್ ಆಳ್ವಿಕೆಯಲ್ಲಿ ರಷ್ಯದಲ್ಲಿ ಬಳಕೆಯಲ್ಲಿದ್ದ ಕ್ಯಾಲೆ೦ಡರಿನ ಪ್ರಕಾರ ಸಮಾಜ ವಾದ ಕ್ರಾ೦ತಿ ಆರ೦ಭವಾದದ್ದು ಅಕ್ಟೋಬರ್ ೨೫ರ೦ದು.ಈಗಿನ ಕ್ಯಾಲೆ೦ಡರ್ ಪ್ರಕಾರ ಆಧು ನವೆಂಬರ್ ೭ ಆಗುತ್ತದೆ, ಹೀಗಾಗಿ ಅಕ್ಟೋಬರ್ ಕ್ರಾ೦ತಿ ಯೆಂಬ ಹೆಸರು ಹೊತ್ತಿದ್ದರೂ ಅದರ ಆಚರಣೆ ನವೆಂಬರ್ನಲ್ಲಿ.
2. 'ನಾವೂ ಮನುಷ್ಯರು!' ನಾಟಕದ ಮೊದಲ ಪ್ರದರ್ಶನದಲ್ಲಿ ಪಾತ್ರ ವಹಿಸಿದ ವರು- ೧. ಸಿರಿಪ್ಸನ್ ಸೋನ್ಸ್ (ದಕ್ಷಿಣ ಕನ್ನಡದಲ್ಲಿ ನೇಕಾರರನ್ನು ಸ೦ಘಟಿಸಿದ ಆದ್ಯರು) ೨ . ಎ. ಬಾಬು ೩ , ರಾಮ ಬಲಾಯ ೪ . ಘಾಟಿ ಬಾಬು ೫ . ಬಿ.ರಾಮಪ್ಪ (ಇವರೆಲ್ಲ ನೇಕಾರರು) ೬ .ಶ್ರೀಪತಿ ಭಟ್ ೭ :ಮ. ಕ. ಶೀನಪ್ಪ (ಪ್ರೆಸ್ ಕಾರ್ಮಿಕರು) .ಈ ಪೈಕಿ ರಾಮ ಬಲ್ಮಾಯ , ಘಾಟಿ ಬಾಬು ಮತ್ತು ಮ. ಕ. ಶೀನಪ್ಪ ಮೃತಪಟ್ಟಿದ್ದಾರೆ. ಎಂ . ಬ್ಲಾಬು ಮತ್ತು ಶ್ರೀಪತಿ ಭಟ್ ಬೊಂಬಾಯಿಯಲ್ಲಿದ್ದಾರೆ . ಈಯೆಲ್ಲ ಮಾಹಿತಿಗಾಗಿ ಶ್ರೀ ಸೋನ್ಸರಿಗೆ
ಕೃತಜ್ನ - ನಿರ೦ಜನ.. xvi/ ನಾವೂ ಮನುಷ್ಯರು!
ಬಂಧುಗಳೇ ಪಾತ್ರಧಾರಿಗಳು. ಇದ್ದೂ ಇರದ ಮೇಕಪ್. ಎಲ್ಲಾ ನೈಜತೆಗೆ ಹತ್ತಿರ. ಕಾಲೇಜು ವಿದ್ಯಾರ್ಥಿಗಳಾದ ಆರೂರು ಪಟ್ಟಾಭಿ-ಕುಪ್ಳುಚಾರ್ ರಾಮಕೃಷ್ಣ ಭಟ್ಟರಿಂದ ನೃತ್ಯ.
ಮೂರು ನಾಲ್ಕು ತಿಂಗಳ ಬಳಿಕ ಬೆಂಗಳೂರಿಗೆ ಹೊರಟೆ, ಪತ್ರಿ
ಕೋದ್ಯಮದ 'ದೊಡ್ಡಾಟ'ದಲ್ಲಿ ಭಾಗವಹಿಸಲು. 'ನಾವೂ ಮನುಷ್ಯರು'! ಹಸ್ತಪ್ರತಿ ನನ್ನ ಜತೆ ಪ್ರಯಾಣ ಬೆಳೆಸಿತು. ಬೆಂಗಳೂರಿನ ಪುಟ್ಟದೊಂದು ಮಾಸಪತ್ರಿಕೆ ಅದನ್ನು ಪ್ರಕಟಿಸಿ ಹಸ್ತಪ್ರತಿ ಹಿಂತಿರುಗಿಸಿತು. ಇಲ್ಲಿ ಸ್ವಚ್ಛ ನಕಲಿಗಾಗಿ ಬಳಸಿರುವುದು ಅದನ್ನೇ.
ನಾನಾ ಸಾಹಸ ದುಸ್ಸಾಹಸಗಳ ಬಳಿಕ ೧೯೫೧ರಲ್ಲಿ ಬೆಂಗಳೂರಲ್ಲಿ
ಮತ್ತೆ ಕಾಣಿಸಿಕೊಂಡೆ, ಪ್ರಕಾಶಕನಾಗಿ. ನಿರಂಜನ ಮತ್ತು ನನ್ನ ಮುಂಬಯಿ ಸ್ನೇಹಿತ ವಾಸುದೇವ ಜತೆ ಸಂಪಾದಕರು. ಹೊರತಂದ ಪ್ರಕಟಣೆಗಳಲ್ಲಿ (ಪುರೋಗಾಮಿ ಪ್ರಕಾಶನ) ಒಂದು-'ಕವಿಪು೦ಗವ' ನಾಟಕ. ತೆಲುಗಿನ ಅತ್ರೇಯ ಬರೆದದ್ದು, ವಾಸುದೇವರು ಕನ್ನಡಿಸಿದ್ದು. ೧೯೫೨ರಲ್ಲಿ ಅದನ್ನು ಓದಿದ ಅ. ನ. ಸುಬ್ಬರಾಯರು-'ಕೂಲಿ'-ನಾಟಕ ಬರೆದವರು-"ಆಡೋಣ" ಎಂದರು. ಅವರ ಮನೆಯ ಕಿರಿಯರು ಮತ್ತು ನಾನು ನಟ-ನಟಿಯರು. (ಹುಡುಗ ಸ್ತ್ರೀಪಾತ್ರ ಮಾಡುವ ಕಾಲ ಕಳೆದಿತ್ತು!) ಗುಬ್ಬಿ ವೀರಣ್ಣನವರ ಗಾಂಧಿನಗರದ ರಂಗಮಂದಿರದಲ್ಲಿ ಒಂದು ದೇಖಾವೆ. ಬಳಿಕ ಮೈಸೂರಿನ ಪುರಭವನದಲ್ಲೊಮ್ಮೆ. ನನ್ನದು ಕಾರ್ಮಿಕ ಧುರೀಣನ ಪಾತ್ರ. ನನಗೆ ದೊರೆ ತದ್ದು ಕಳಪೆ ಅಂಕ. ಅದೇ ಕೊನೆಯದು. ಈ ವರೆಗೂ ಯಾವ ನಾಟಕ ದಲ್ಲೂ ಮತ್ತೆ ಆಭಿನಯಿಸಿಲ್ಲ.
೭
ಮಿತ್ರ ಚದುರಂಗರನ್ನು ಒಮ್ಮೆ ಮೈಸೂರಿನಲ್ಲಿ ಕಂಡಾಗ."ಶಿವಸ್ವಾಮಿ
ಯವರನ್ನು ನೋಡಿ ಬರೋಣವಾ?" ಎಂದರು. ಆಗ ಮೈಸೂರು ಆಕಾಶ ವಾಣೆಯ ಅಧಿಕಾರಿಯಾಗಿದ್ದರು ಎಸ್.ಎನ್.ಶಿವಸ್ವಾಮಿ.ಇಬ್ಬರೂ ಅವರ
ಮನೆಗೆ ಹೋದೆವು. ಶಿವಸ್ವಾಮಿ ಸ್ನೇಹಪರ. ಆದರೆ ಸೂಕ್ಷ್ಮಗ್ರಾಹಿ. ಬಣ್ಣದ ಬಯలు | xvii
ಜವಾಬುದಾರಿ ಹೊತ್ತವ್ಯಕ್ತಿ ಮೈಯೆಲ್ಲ ಕಣ್ಣಾಗಿರಬೇಕು. ನನ್ನ ಹಿಂದಿತ್ತು ಭಿನ್ನವೂ ಉಗ್ರವೂ ಆದ ಬದುಕಿನ ಛಾಯೆ. ಬಾನುಲಿ ನಾಟಕದ ಪ್ರಸ್ತಾಪ ಅವರು ಮಾಡಲಿಲ್ಲ. "ಪ್ರಸಾರಕ್ಕಾಗಿ ಒಂದು ಕತೆ ಬರೆಯಿರಿ," ಎಂದು ಹೇಳ ಲಿಲ್ಲ. ಚದುರಂಗ ಯಾವ ಸೂಚನೆಯನ್ನೂ ನನಗೆ ಕೊಟ್ಟಿರಲಿಲ್ಲವಾದ್ದರಿಂದ, ಬೇಸರದ ಪ್ರಶ್ನೆ ಇರಲಿಲ್ಲ.
೧೯೫೫ರಲ್ಲಿ ಕಾದಂಬರಿಕಾರ ನಿರಂಜನ ಮೈಸೂರಿನಲ್ಲಿ ಮನೆಮಾಡಿದ.
ಪ್ರದೇಶ ವಾಣಿವಿಲಾಸ ಮೊಹಲ್ಲಾ. ಅಲ್ಲಿ ಎಡವಿದರೆ ಸಾಕು, ಆಕಾಶವಾಣಿ ಯವರೋ ವಿಶ್ವವಿದ್ಯಾಲಯದವರೋ ಸಿಗುತ್ತಿದ್ದರು. ಇತ್ತ ಕವಿ ಇಟಗಿ ರಾಘವೇಂದ್ರ (ಆಕಾಶವಾಣಿಯ ಕಾರ್ಯಕ್ರಮ ಸಹಾಯಕರು): ಅತ್ತ ಶಿವಸ್ವಾಮಿ. ಸಣ್ಣ ಜಗತು. ಆಕಾಶವಾಣಿಗಾಗಿ ಕೆಲ ಪುಸ್ತಕಗಳನ್ನು ವಿಮರ್ಶೆ ಮಾಡಿದೆ. ನಿಮ್ಮ 'ರಂಗಮ್ಮನ ವಠಾರ' ಕಾದಂಬರಿಯನ್ನು ನಾಟಕ ರೂಪದಲ್ಲಿ ಬರೆದುಕೊಡಿ, ಆರು ಭಾಗಗಳಲ್ಲಿ" -ಎಂದರು ಶಿವಸ್ವಾಮಿ. ನಾಟಕ! ಬಾಗಿಲಲ್ಲಿ ಹೋದದ್ದು ಕಿಟಿಕಿಯಿಂದ ಬಂದಿತ್ತು!
ಮೈಸೂರು ಆಕಾಶವಾಣಿ ಬೆಂಗಳೂರಿಗೆ ಸ್ಟಳಾಂತರಗೊಂಡಿತು.
ರೂಪುಗೊಳ್ಳುತ್ತಿದ್ದ ಕರ್ನಾಟಕದ ರಾಜಧಾನಿಯ ಹೊಸನಿಲಯ. "ಇದು ಆಕಾಶವಾಣಿ, ಬೆಂಗಳೂರು.” ಅದರ ಉದ್ಘಾಟನೆಯ ಘಳಿಗೆಯಲ್ಲಿ 'ಪಾವನ ಪರಂಪರೆ' ಎಂಬ ನುಡಿಚಿತ್ರ ಬೇಂದ್ರೆ ಬರೆದದ್ದು. ರಾಜರತ್ನಂ, ನಿರಂಜನ; ಎಲ್.ಜಿ. ಸುಮಿತ್ರಾ....ಧ್ವನಿಗಳು (ಪಾತ್ರಗಳು). ಆಹ್ವಾನಿತ ಶ್ರೋತೃಗಳ ಎದುರಲ್ಲಿ ಕಾರ್ಯಕ್ರಮ ನಡೆಯಿತು. ರೂಪಕ ಪ್ರಸಾರ ಒಂದು ಬಗೆಯ ಧ್ವನಿ ಅಭಿನಯ.ಮುಂದೆ ಆ ನಿಲಯಕ್ಕೆ ಶ್ರೀರಂಗ, ವಿ.ಸೀ., ಕಸ್ತೂರಿ ಪ್ರೊಡ್ಯೂಸರುಗಳಾಗಿ ಬಂದರು.
ನಾನು ಸಕುಟುಂಬನಾಗಿ ಧಾರವಾಡಕ್ಕೆ ಸಾಗಿದೆ. ಬೆಂಗಳೂರು
ನಿಲಯಕ್ಕಾಗಿ ಭದ್ರಾವತಿ ಉಕ್ಕಿನ. ಕಾರಖಾನೆಯನ್ನು ಕುರಿತು ಒಂದು ರೂಪಕ-ನುಡಿಚಿತ್ರ-ಬರೆಯಲು ಓಡಾಡಿದೆ."ಮಣ್ಣು ಉಕ್ಕಾಯಿತು; ಕಾಡು ಊರಾಯಿತು!"ನನ್ನದೇ ನಿರ್ವಹಣೆ. ದಕ್ಷಿಣದ ನಾಲ್ಕು ಆಡು ಭಾಷೆಗಳಲ್ಲಿ ಪ್ರಸಾರವಾಯಿತು. ಧಾರವಾಡದಲ್ಲಿದ್ದಾಗ ರಂಗಸ್ಟಲದಲ್ಲಿ ಆಡುವ ಮತ್ತು xviii / ನಾವೂ ಮನುಷ್ಯರು!
ಜತೆಯಲ್ಲೆ ಪ್ರಸಾರ ಮಾಡುವ ಉದ್ದೇಶಕ್ಕಾಗಿ ಬೆಂಗಳೂರು ನಿಲಯ ಒಂದು ನಾಟಕ ಕೇಳಿತು. 'ಸಂಗಮಸ್ನಾನ' ಬರೆದೆ. ನಿಲಯ ನಿರ್ದೇಶಕ ಡಾ! ನಟೇಶರ ದ್ವಿಉದ್ದೇಶ ಯೋಜನೆ ದಿಲ್ಲಿಯ ಟೀಕೆಗೊಳಗಾಗಿ, 'ಸಂಗಮಸ್ನಾನ' ಪ್ರಸಾರವಷ್ಟೇ ಆಯಿತು. (ರಂಗನಾಟಕ ಬೇರೆ, ಪ್ರಸಾರ ನಾಟಕ ಬೇರೆ ಎಂಬುದು ನನ್ನ ಅಭಿಪ್ರಾಯವೂ ಆಗಿತ್ತು.) ಧಾರವಾಡ ನಿಲಯಕ್ಕಾಗಿ ನಾನು ಬರೆದ ಪ್ರಸಾರನಾಟಕಗಳು: 'ಅನುರಾಗ', 'ಸೂತ್ರಕಿತ್ತಪಟ' 'ಕಣ್ಣಿದ್ದವರಿಗೂ ನೀನೆ ಶಿವಾ' ಮತ್ತು ನಿಲಯ ನಿರ್ದೇಶಕ ಮಧುರಕಾಂತ ವೈದ್ಯರ ಅಧಿಕಾರಾ ವಧಿಯಲ್ಲಿ, ನೆರೆಹೊರೆಯಲ್ಲಿದ್ದ ಭಾಸ್ಕರ ಯೇಸುಪ್ರಿಯರ ಸ್ನೇಹದ ಬಲವಂತಕ್ಕೆ ಒಪ್ಪಿ, ವೈದ್ಯರ ಅಪೇಕ್ಷೆಯಂತೆ ರಚಿಸಿದ ಆರು ಭಾಗಗಳ ನಾಟಕ ಮಾಲಿಕೆ 'ಆಹ್ವಾನ'.
ಬೆಂಗಳೂರಿಗೆ ಮರಳಿದೆ. ಬದುಕಿನ ಅಲೆದಾಟದ ಕೊನೆಯ ತಾಣ.
ಅಂಕಣಗಳನ್ನೂ ಕಾದಂಬರಿಗಳನ್ನೂ ಹೊಸೆಯುವ ಕೆಲಸ. ಜತೆಯಲ್ಲಿ ಆಕಾಶವಾಣಿಗಾಗಿ ಮೂರು ಮೊಳದ ಅರೆ ಬಟ್ಟೆಗಳು. ಚೀನದೊಡನೆ ಘರ್ಷಣೆ ಸಂಭವಿಸಿದಾಗ ಬರೆದ ನಾಟಕಗಳು. 'ಬಂದ ದಾರಿಗೆ ಸುಂಕವಿಲ್ಲ' ಮತ್ತು 'ಪಾಪಾಸುಕಳ್ಳಿ' ಮುಂದೆ, ಮೊದಲಿನದನ್ನು 'ಸಮ್ರಾಜ್ಞಿ'ಎಂಬ ತಲೆಕಟ್ಟಿನಲ್ಲಿ ರಂಗನಾಟಕವಾಗಿ ಬರೆದೆ.'ಪಠ್ಯ ನಾಟಕ' ಎಂದರೂ ಸಂದೀತು. ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗೆ ಅದು ಉಪಪಠ್ಯವಾಗಿ, ಮನೆಸಾಲ ತೀರಿಸಲು ಅಗತ್ಯವಿದ್ದ ಹಣ ದೊರೆಯಿತು.
ಪ್ರಸಾರಕ್ಕೆಂದೇ ಬರೆದ ರೂಪಕಗಳು ಇನ್ನೂ ನಾಲ್ಕಾರಿವೆ. ಹೆಸರುಗಳ
ಪಟ್ಟಿ ಕೊಟ್ಟರೇನು? ಬಿಟ್ಟರೇನು?
ಈಗ ದೂರದರ್ಶನ ಬಂದಿದೆ.೧೯೭೧ರಲ್ಲಿ ಪಾರ್ಶ್ವಪೀಡಿತನಾದ ಮೇಲೆ
ನಾಟಕ ನೋಡುವ ಸುಖದಿಂದ ವಂಚಿತನಾದವನಿಗೆ ಈಗ ತುಸು ಸಮಾಧಾನ. ಸಮುದಾಯ ತಂಡ, ಬೀದಿ ನಾಟಕದ ಬಂಧುಗಳು, ಹವ್ಯಾಸೀ ನಟವೃಂದ, ಇತರ ರಂಗಭೂಮಿ ಪ್ರಯೋಗಗಳನ್ನು ಕಾಣಲಾರೆನಾದರೂ ದೂರದರ್ಶನ ದಲ್ಲಿ ಬರುವ ನಾಟಕ, ಯಕ್ಷಗಾನ ನೋಡಿ, ಬಯಲನ್ನೂ ಅಗೋಚರ ಪ್ರೇಕ್ಷಕಗಣವನ್ನೂ ಕಲ್ಪಿಸಿಕೊಳ್ಳುತ್ತೇನೆ. ಬಣ್ಣಮೆತ್ತಿದ ನಾಟಕಗಳೂ ಬರತೊಡಗಿದೆ ಈಗ. ಬಣ್ಣದ బಯలు | xix
ನನ್ನ ಪಾಲಿಗೆ ನಾಟಕ ಬರೆಯುವ ಕನಸು ಹಳೆಯದು. ಅದಿನ್ನೂ
ಹಸುರಾಗಿದೆಯಲ್ಲ. ಆಶ್ಚರ್ಯ!
* * *
ಇನ್ನೊಂದು ಲೇಖನವನ್ನು ಓದಿದಿರೆಂದರೆ, 'ನಾವೂ ಮನುಷ್ಯರು!'
ನಾಟಕದ ಪ್ರೇಕ್ಷಕ ಮಹಾಶಯರಾಗುತ್ತೀರಿ ನೀವು.
'ಭಾರತ್ತೀಯ ಜನತಾ ರಂಗಭೂಮಿ ಮತ್ತು ಪ್ರಗತಿಶೀಲ ಲೇಖಕರು'
ಎಂಬ ಲೇಖನವನ್ನು ನಾನು ಬರೆದದ್ದು ೧೯೪೪ರಲ್ಲಿ.'ನಾವೂ ಮನುಷ್ಯರು!' ರಚನೆಗೆ ಕೆಲದಿನ ಮುಂಚೆ ಇರಬೇಕು. ಜನತಾ ರಂಗಭೂಮಿ ದೇಶದ ನಾಟಕ ಕ್ಷೇತ್ರದಲ್ಲಿ ಆಗ ಮೂಡಿಬಂದ ಹೊಸ ಅಲೆ.
ಮುಂಬಯಿಯಲ್ಲಿ 'ಇಪ್ವಾ' ಈಗಲೂ ಜೀವಂತವಾಗಿದೆ. ಬೇರೆಡೆ
ಗಳಲ್ಲಿ ಅದು ಬೇರೆ ಬೇರೆ ರೂಪ ತಳೆದಿದೆ. ನಾಟಕ ಜನತೆಗೆ, ಬದುಕಿಗೆ ಹತ್ತಿರವಾಗಿರಬೇಕೆಂದು ಬಯಸುವವರಿಗೆಲ್ಲ ಜನತಾರಂಗಭೂಮಿ ಅನಿವಾರ್ಯ ವಾಗಿ ಗಮನಿಸಲೇಬೇಕಾದ ಅಧ್ಯಾಯ.
ಪ್ರವರ ಸಾಕುಮಾಡಲೆ? ಆಗಲೇ ಹೇಳಿದಂತೆ, ಲೇಖನ ಓದಿದ ಮೇಲೆ,
“ನಾವೂ , ಮನುಷ್ಯರು!" ಎಂದು ಪ್ರತಿಪಾದಿಸುವ ಪಾತ್ರಗಳನ್ನು ಭೇಟಿ ಯಾಗುತ್ತೀರಿ. ನಮಸ್ಕಾರ.
ಬೆಂಗಳೂರು
ನಿರಂಜನ
ಭಾರತೀಯ ಜನತಾ ರಂಗಭೂಮಿ' ಮತ್ತು
ಪ್ರಗತಿಶೀಲ ಲೇಖಕರು
ಕುಳುಕುಂದ ಶಿವರಾಯ ಕಾರ್ಯದರ್ಶಿ, ಜನತಾ ರಂಗಭೂಮಿ ಮಂಗಳೂರು ಸವಿುತಿ
ಹೊಸ ವ್ಯವಸ್ಥೆಯ ಪ್ರಸವಕಾಲವಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ
ಜನಜೀವನವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಹಲವು ಶಕ್ತಿಗಳಲ್ಲಿ ಭಾರತೀಯ ಜನತಾ ರಂಗಭೂಮಿಯ ಆಂದೋಲನವೂ ಒಂದು. ಹತ್ತಾರು ಮಹಾರಾಜರ-ಹತ್ತಾರು ಶ್ರೀಮಂತರ-ಆಸೆ ಲಾಲಸೆಗಳಿಗೆ ಪೋಷಕವಾಗಿರು ತ್ತಿದ್ದ ಭಾರತೀಯ ಕಲೆಯಿಂದು-ಅಧಃಪತನದ ಗಂಡಾಂತರದಲ್ಲಿದೆ. ಮಿಲಿ ಯಾಂತರ ಜನ ಆ ಕಲೆಯನ್ನು ಉಳಿಸಲೆತ್ನಿಸುತ್ತಿದ್ದಾರೆ.
ಅವರು ಉಳಿಸುತ್ತಿರುವ ಕಲೆ ಮಾತ್ರ ಹೊಸ ರೂಪವನ್ನು ತಳೆಯು
ತ್ತಿದೆ!
ನಾಲ್ಕಾರು ಗವಿ ಗುಹೆಗಳಲ್ಲಿ, ಶಾಸ್ತ್ರೀಯ ವಿಜ್ಞಾನದ ಬಂಧನದಲ್ಲಿ
ಹೇಳುವ-ಕೇಳುವರಿಲ್ಲದೆ, ನಶಿಸಿಹೋಗುತ್ತಿದ್ದ ನೃತ್ಯಕಲೆಯನ್ನು ಜನತೆ ತನ್ನ ದಾಗಿ ಸ್ವೀಕರಿಸಿದೆ. ಬಂಗಾಲದ ಜನಜೀವನದ ದುರಂತ ಚಿತ್ರಪ್ರಸಾದ, ಸುಧೀರ ಕಾಷ್ತ್ ಗಿರರಂತಹ ಚಿತ್ರಕಾರರನ್ನು ಬೆಳಕಿಗೆ ತಂದಿದೆ. ಪ್ರೇಮ ಆಲಾಪನೆಗಳ 'ಸಂಗೀತರತ್ನ ಆಸ್ಥಾನವಿದ್ವಾನ್'ರ ಸಂಗೀತ ಮುಂಬಯಿ ಬಂಗಾಳಗಳ ಮಜೂರರ, ಆಂಧ್ರ-ಕೇರಳಗಳ ಕಿಸಾನರ ದಲಿತಧ್ವನಿಯಲ್ಲಿ
1. Indian People's Theatre Association : IPTA.
2.1944ರಲ್ಲಿ ಅ. ನ. ಕೃಷ್ಣರಾಯರು 'ಪ್ರಗತಿಶೀಲ ಸಾಹಿತ್ಯ' ಎoಬ ಲೇಖನ ಸಂಕಲನವನ್ನು ಪ್ರಕಟಿಸಿದರು. ಅದರಲ್ಲಿ ಜನತಾ ರಂಗಭೂಮಿಯನ್ನು ಕುರಿತ ನನ್ನ ಈ ಲೇಖನವಿತ್ತು. ಆ ಮೂರು ಪುಟಗಳನ್ನು ಕ್ಸೆರೋಕ್ಸ್ ಮಾಡಿಸಿ ನೆನಗೆ ಕೊಟ್ಟು ನೆರವಾದವರು ಆ ಅಲಭ್ಯ ಪ್ರತಿಯ ಒಡೆಯರಾದ ಪ್ರೊ| ಚಿ. ಶ್ರೀನಿವಾಸ ರಾಜು ಅವರು. ನಾನು ಅವರಿಗೆ ಋಣಿ. -ನಿರಂಜನ ವರಾರ್ದನಿಗೊಳ್ಳುತ್ತಿದೆ. ಆ ಇತಿಹಾಸದ ಚಿತ್ರಗಳು ನಾಟಕಗಳ ವಸ್ತು ಗಳಾಗತೊಡಗಿವೆ. ಚೀನೀಯ ನಾಟಕಗಳ ಅಪೂರ್ವ ಶಕ್ತಿ-ಸಾಮರ್ಥ್ಯ,ರಷ್ಯದ ಸ್ವತಂತ್ರ ಕಲಾವಿದರ ಪ್ರದರ್ಶನ ನೈಪುಣ್ಯ ನಮ್ಮ ಪುರೋಗಾಮಿಗಳ ಮನಸ್ಸಿಗೆ ತಟ್ಟಿದೆ!ವಿಚಾರ ಕ್ರಾಂತಿಗೆ ಎಡೆಗೊಟ್ಟಿದೆ.
ಇನ್ನೂ ನಮ್ಮ ಕಲಾಸಂಪತ್ತು ಶ್ರೀಮಂತರ ಮಹಾರಾಜರ ಕಾಲಕ್ಷೇ
ಪದ ಸಾಧನವಾಗಬೇಕೆ?ಇನ್ನೂ ದೇಶದ ಸ್ವಾತಂತ್ರ್ಯ ಸಂಗ್ರಾಮ-ಅಂತರರಾಷ್ಟ್ರೀಯ ಮಹಾ
ಸಮರಗಳಲ್ಲಿ, ಹೊಸ ಜಗತ್ತಿನ ನಿರ್ಮಾಣದ ಬೃಹದ್ಯ ತ್ನದಲ್ಲಿ, ನಮ್ಮ ಕಲಾಸಂಪತ್ತು ಸಹಾಯಕವಾಗದೆ ಹೋಗಬೇಕೆ?
ಭಾರತದ ಮೂಕ ಮಿಲಿಯಗಳಲ್ಲಿ ಅಲ್ಲೊಂದು ಇಲ್ಲೊಂದು ಸ್ವರ
ಹೀಗೆ ನೂರಾರು ಸ್ವರ-ಮುಷ್ಟಿಯೆತ್ತಿ "ಇಲ್ಲ!" ಎನ್ನುತ್ತಿದೆ.
“ಕಲೆ ಕಲೆಗಾಗಿಯಲ್ಲ! ಜನತೆಗಾಗಿ" ಎಂಬ ಘೋಷ ಜನತಾ ರಂಗ
ಭೂಮಿಯ ಸ್ಥಾಪನೆ-ಬೆಳವಣಿಗೆಗಳಿಗೆ ಕಾರಣವಾಗಿದೆ.
ಅರೆ ಹೊಟ್ಟೆಯ ಕೂಗನ್ನು ಕುರಿತು ಕವಿತೆ ಬರೆಯಬಲ್ಲ ಕವಿ ಜನತಾ
ರಂಗಭೂಮಿಯ ಅಂಗಣದಿಂದ ತನ್ನ ಕೃತಿಯನ್ನು ಹಾಡಿಸುತ್ತಾನೆ: ಜನತೆಯ ಜೀವನವನ್ನು ಚಿತ್ರಿಸಿ, ವಿಚಾರ ಕ್ರಾಂತಿಯನ್ನು ಕೆರಳಿಸಿ ಪ್ರಗತಿಶೀಲ ಲೇಖಕನು ಭರೆದ ನಾಟಕವನ್ನು ಜನತಾ ರಂಗಭೂಮಿ ಆಡುತ್ತಿದೆ!.'ಜನರ ಸಂಕಷ್ಟವನ್ನು ಚಿತ್ರಿಸುತ್ತ ಉಷಾರಾಣಿ ಅನುದಾಸಗುಪ್ತರು ನರ್ತಿಸುತ್ತಿದ್ದಾರೆ.ಹೀಗೆ ಪ್ರಗತಿಶೀಲ ಲೇಖಕರ ಸಹಾಯ-ಸಹಕಾರಗಳಿಂದ ಭಾರತೀಯ
జನತಾ ರಂಗಭೂಮಿ ಬೆಳಯುತ್ತಿದೆ.
"ಇದೆಲ್ಲ ಬರಿಯು ಕಲ್ಪನೆ-ಮರುಳು" ಎನ್ನುವ ಕಲಾಶಾಸ್ತ್ರಿಗಳಿಗೆ
ನಮ್ಮ ದೇಶದಲ್ಲಿ ಬರಗಾಲವಿಲ್ಲ.ಕೊಚ್ಚಿ ಮಹಾರಾಜರ ಅಡಿಯಾಳಾಗಿ ತಮ್ಮ ಕಲಾಮಂಡಲವನ್ನು ನಡೆಸುತ್ತಿದ್ದು, ಅವರ ದಾಕ್ ಕಟ್ಟುಬಿದ್ದು ದೇವದಾಸಿ ಪದ್ಧತಿಯನ್ನು ಎತ್ತಿ ಹಿಡಿದ ಮಹಾಕವಿ ವಲ್ಲತ್ತೋಳರೇ ಈಗ ಜನತೆಯ ಬಳಿಗೆ ಬಂದಿರುವುದು; ಆಲ್ಮೊರದ ಮಹಾ ಶಿಖರದಿಂದಿಳಿದ್ದು ಉದಯಶಂಕರರು ಜನನಿವಾಸಕ್ಕೆ ಸಮೀಪದಲ್ಲಿ ಇರತೊಡಗಿರುವುದು - ಈ ಎರಡು ದೃಷ್ಟಾಂತಗಳು ಶಾಸ್ತ್ರಿಗಳ ಬಾಯಿ ಮುಚ್ಚಿಸಬಲ್ಲುವು.
ಇಲ್ಲ: ಯಥಾರ್ಥ-ವಾಸ್ತವ ವಿಷಯವೆಂದರೆ, ಕೆರಳುತ್ತಿರುವ
ಜನತೆಯ ವಿಚಾರಶಕ್ತಿಯೊಡನೆ ನಮ್ಮ ಕಲೆಗಳು ಹೊಸರೂಪವನ್ನು ತಾಳುತ್ತಿವೆ.
ಭಾರತೀಯ ಜನತಾ ರಂಗಭೂಮಿ
೧೯೪೨ರಲ್ಲಿ ಭಾರತೀಯ ಜನತಾ ರಂಗಭೂಮಿ ಸಮಿತಿ ಮುಂಬಯಿ
ಯಲ್ಲಿ ರೂಪುಗೊಂಡಿತು. ಜವಾಹರರು ಆಗ ಸಂದೇಶ ಕಳುಹಿಸಿ,ಆ ಹೊಸ ಆಂದೋಲನಕ್ಕೆ ಯಶಸ್ಸನ್ನು ಕೋರಿದರು. ಆದರೆ ಆ ವರ್ಷ ಆಗಸ್ಟಿನ ಬಳಿಕ ದೇಶದಾದ್ಯಂತ ಉಂಟಾದ ಅನಾಹುತ, ಸರಕಾರದ ಅಮಾನುಷ ಮರ್ದನ, ಸಮಿತಿಯನ್ನು ಶಕ್ತಿಗುಂದಿಸಿದುವು. ದೇಶವು ತನ್ನ ಮೇಲೆ ಬಿದ್ದ ಅಘಾತದಿಂದ ಚೇತರಿಸಿದಂತಯೇ ಜನತಾ ರಂಗಭೂಮಿ ಸಮಿತಿಯೂ బల ಗೊಂಡು ೧೯೪೩ ಮೇ ತಿಂಗಳ ೨೫ರಂದು ಪ್ರಥಮ ಸಮ್ಮೇಳನವನ್ನು ಜರಗಿಸಿತು. ಕರ್ಣಾಟಕವನ್ನೂ 2 ಕೂಡಿ ವಿವಿಧ ಪ್ರಾಂತಗಳವರು ಅದರಲ್ಲಿ ಭಾಗವಹಿಸಿದರು. ಮುಂಬಯಿ, ಬಂಗಾಳ, ಪಂಜಾಬ್, ಆಂಧ್ರ ಸಂಯುಕ್ತ ಪ್ರಾಂತ ಮತು ಮಲಬಾರ್ ಪ್ರತಿನಿಧಿಗಳು ವರದಿಗಳನ್ನೊಪ್ಪಿಸಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ| ಹಿರೆನ್ ಮುಖರ್ಜಿಯವರು ಜನತಾ ರಂಗಭೂಮಿಯ ಮುರಿದಿದ್ದ ಕಷ್ಟದ ಹಾದಿಯನ್ನು ತೋರಿಸಿಕೊಟ್ಟ, ಸುಂದರ ಭವಿಷ್ಯತ್ತನ್ನು ಚಿತ್ರಿಸಿದರು.
ಆಗಲೇ ಭಾರತೀಯ ಪ್ರಗತಿಶೀಲ ಲೇಖಕರ ಸಮ್ಮೇಳನ ಜರಗು
ತ್ತಿದಾಗ, ಜನತಾ ರಂಗಭೂಮಿಯವರು ಕಾರ್ಮಿಕ ವಸತಿ ಪ್ರದೇಶವಾದ ಪರೇಲಿನಲ್ಲಿ ತಮ್ಮ ನಾಟಕಗಳನಾಡಿದರು. - -
ಪ್ರಗತಿಶೀಲ ಲೇಖಕರ ನೆರವಿನಿಂದ ಮುಂದೊತ್ತಬೇಕೆಂಬುದು ಜನತಾ
ರಂಗಭೂಮಿ ಸಮಿತಿಯ ತನ್ನ ಸಮ್ಮೇಳನದಲ್ಲಿ ಸ್ವೀಕರಿಸಿದ ಪ್ರಧಾನ ನಿರ್ಣಯಗಳಲ್ಲೊಂದು.
೧.ಕರ್ನಾಟಕವನ್ನು ಪ್ರಾಧಿಸಿದ್ದು ಕುಳುಕು೦ದ ಶಿವರಾಯ.
ಕರ್ಣಾಟಕದಲ್ಲಿ ಈ ಚಳವಳ
ಅ.ಭಾ. ಜನತಾ ರಂಗಭೂಮಿ ಕಾರ್ಯಕಾರಿ ಸಮಿತಿಯ ಸದಸ್ಯ
ರಲ್ಲೊಬ್ಬರಾದ ಕುಮಾರ ವೆಂಕಣ್ಣ ಅವರು ಬೆಂಗಳೂರಿನಲ್ಲಿರುವರು. ಮೈಸೂರಿನ ಸಮಿತಿಗೆ ಶ್ರೀಮತಿ ಕೇಸರಿ ಕೇಶವನ್ ಅವರು ಕಾರ್ಯದರ್ಶಿನಿ ಯಾಗಿದ್ದಾರೆ. ಬೆಂಗಳೂರಿನಲ್ಲಿ ಹಿಂದೊಮ್ಮೆ ತಾವೇ ಆರಂಭಿಸಿದ ಕಾರ್ಯ ವನ್ನು ಅವರೀಗ ಮೈಸೂರಲ್ಲಿ ಮುಂದುವರಿಸುತ್ತಿದ್ದಾರೆ. ಶ್ರೀ ಶಿವರಾಮಕಾರಂತರು 1 ಮಂಗಳೂರು ಸಮಿತಿಯ ಉದ್ಘಾಟನೆಯನ್ನು ೧೯೪೩ ರ ಆಗಸ್ಟಿನಲ್ಲಿ ನೆರವೇರಿಸಿದರು. ಅದೀಗ ತನ್ನ ಕಾರ್ಯಕಲಾಪಗಳನ್ನು ಮಾಡುತ್ತಿದೆ.
ಕರ್ಣಾಟಕದಲ್ಲಿ ಪ್ರಗತಿಶೀಲ ಲೇಖಕರ ಚಳವಳವೂ ಹೊಸತು;
ಎಳೆಯದು.ಈ ನಾಡಿನಲ್ಲಿ ಇನ್ನೂ ಶಿಶುವಾಗಿರುವ ಜನತಾ ರಂಗಭೂಮಿ ಪ್ರಗತಿಶೀಲ ಲೇಖಕ-ಕಲಾವಿದರ ಯತ್ನದಿಂದ ಮುಂದೆ ಸಾಗಲಿದೆ-೧೯೪೪
೧.ಉದ್ಘಾಟನೆಗೆ ಕೋ. ಶಿ. ಕಾರಂತರನ್ನು ಕರೆದವನು ಈ ಲೇಖಕನೇ.
ನಾವೂ ಮನುಷ್ಯರು !
ನಾಟಕ
ಮೊದಲ ಪ್ರದರ್ಶನ:೭–೧೧–೧೯೪೪ರಂದು,ಮಂಗಳೂರು ಜನತಾ ರಂಗಭೂಮಿ ಆಶ್ರಯದಲ್ಲಿ, ಈಗ ನೆಹರೂ ನಾಮಾಂಕಿತವಿರುವ ಮಂಗಳೂರುನಗರ ಮೈದಾನದಲ್ಲಿ
ಪಾತ್ರಗಳು
ರಾಮಣ್ಣ
ಹಂಚಿನ ಕಾರ್ಖಾನೆ ಕಾರ್ಮಿಕ
ರುಕ್ಕು
ರಾಮಣ್ಣನ ಹೆಂಡತಿ: ಹಂಚಿನ ಕಾರ್ಖಾನೆ ಕೂಲಿ
ಕಿಟ್ಟು
ಅವರ ಸಣ್ಣ ಮಗ
ಧನ ಕಾಮತ್
ಬಾಡಿಗೆ ವಸೂಲಿ ಮನುಷ್ಯ
ಲಸ್ರಾದೋ
ನೇಕಾರ
ಕಾರ್ಮಿಕ ಸ೦ಘದ ಕಾರ್ಯದರ್ಶಿ
ಆದ೦ ಸಾಹೇಬ್
ಬೀಡಿ ಕೆಲಸಗಾರ
ನಿರ್ದೇಶನ
ನಿರ೦ಜನ
oಹಂಚಿನ ಕಾರ್ಖಾನೆಯ ಕೆಲಸಗಾರ ರಾಮಣ್ಣನ ಗುಡಿಸಲು. ಹೊಟ್ಟೆನೋವು,
ಕಫ ಪೀಡಿತನಾಗಿ ರಾಮಣ್ಣ ಮಣ್ಣಿನ ತಿಟ್ಟೆಯ ಮೇಲೆ ಹಾಸಿದ ಹರಕು
ಚಾಪೆಯಲ್ಲಿ ಒಂದು ಹೊದಿಕೆ ಹೊದ್ಡುಕೊ೦ಡು ಮಲಗಿದ್ದಾನೆ. ನಾಟಕ
ಆರಂಭವಾದಾಗ ಕಾಣುವುದು ಈ ದೃಶ್ಯ.
ಸ್ವಲ್ಪ ಹೊತ್ತು ಮೌನ....ಕೆమ్ము.... "ಅಯ್ಯೋ" ನರಳುವಿಕೆ....
ಹತ್ತಿರದಲ್ಲಿರುವ ಮಣ್ಣಿನ ಪಾತ್ರವನ್ನು ಅಲ್ಲಾಡಿಸಿ ನೋಡುವನು.
ರಾಮಣ್ಣ :ಥೂ! ನೀರೂ ಮುಗಿದುಹೋಯಿತು....ಯಾರಪ್ಪ ಈಗ
ಒಳಗಿಂದ ತರುವುದು? ರಾಮಾ! ಲಕ್ಷ್ಮಣಾ!....ಸೀತೆ!
ಸಾವಿತ್ರಿ!....ನಮ್ಮರುಕ್ಕುವಾದರೂ ಬರಬಾರ್ದೆ....ಬಯ್ಯ
ಆಯಿತು ಇಷ್ಟರಲ್ಲೇ-
(ಮೆల్లನೆ ಎದ್ದು, ಹೊದಿಕೆ ಸರಿಸಿ, ಕೆಳಕ್ಕೆ ತೆವಳಲು ನೋಡು
ವನು. ಕೃಶವಾದ ದೇಹ. ಮುಖ ಕಳೆಗು೦ದಿದೆ. ಗಡ್ಡ
బందిದೆ....ಮೈಮೇಲೆ ಅ೦ಗವಸ್ತವಿಲ್ಲ....ಸೊ೦ಟದಲ್ಲೊಂದು
ಸಣ್ಣ ಬಟ್ಟೆ....ಕೆಮ್ಮುವನು.)
(ರುಕ್ಕು ಒಳಬರುವಳು. ಕೈಯల్లి బుತ್ತಿಯ ಪಾತ್ರ....ಕೆಂಪು
ಬಣ್ಣದ ನೂಲಿನ ಸೀರೆ ಉಟ್ಟಿದ್ದಾಳೆ....ಇನ್ನೊಂದು ಕೈಯಲ್ಲಿ
ಬಂಗುಡೆ ಕಟ್ಟು.)
ರುಕ್ಕು:ಕೂತಲ್ಲಿ ಕೂತುಕೊಳ್ಲಿಕ್ಕೂ ಆಗುವುದಿಲ್ವೊ ನಿಮಗೆ?
ಹಾo!
(ಬಾಯ್ತೆರೆದು)
ಹೆಸರು ಎತ್ತಿದ್ದೇ ಎತ್ತಿದ್ದು ಬಂದೇ ಬಿಟ್ಲಲ್ಲ! ಪಡ್ಡ
ಆಯ್ತು....ನೂರು ವರ್ಸ ಇಡೀ ಬದುಕ್ಲಿಕ್ಕೆ ಉಂಟಲ್ಲ
ಮಾರಾಯ್ತಿ ನೀನಿನ್ನು!
ರುಕ್ಕು:(ಬುತ್ತಿ ಪಾತ್ರೆಯನ್ನು ಮೂಲೆಯಲ್ಲಿರಿಸಿ)
ನಿಮ್ಗೆ ಹೆದರಿಕೆ ಅಂತ ತೋರ್ಥದೆ ನಾನು ನೂರು ವರ್ಸ
ಬದುಕಿದ್ರೆ?....
ರಾಮಣ್ಣ :ಹೆದರಿಕೆ ಎಂಥದು ಇವತ್ತೋ ನಾಳೆಯೋ ಸಾಯುವವ್ನಿಗೆ -
ಆದರೆ ಸ್ವಲ್ಪ -....
ರುಕ್ಕು:ನೋಡಿ - ಈಗ ನಿಲ್ಲಿಸ್ತೀರೋ ಇಲ್ವೋ ನಿಮ್ಮ ಚಿರಿ ಚಿರಿ?
ರಾಮಣ್ಣ:ಅಲ್ವೆ? ಸ್ವಲ್ಪ ನೀರಾದ್ರೂ ಬೇಕೋ ಬೇಡ್ವೋ ಇಲ್ಲಿ?
(ರುಕ್ಕು ಹತ್ತಿರ ಹೋಗಿ ಮಣ್ಣಿನ ಪಾತ್ರ ಎತ್ತುವಳು...
ರಾಮಣ್ಣ ಅವಳ ಕೈಯಲ್ಲಿದ್ದ ಬಂಗುಡೆ ಕಟ್ಟು ನೋಡುವನು.)
ಎಷ್ಟು ತಂದಿಯೇ ಇವತ್ತು ?
ರುಕ್ಕು:(ನೆಟ್ಟಗೆ ನಿಂತು - ಒಂದು ಕೈಯಲ್ಲಿ ಬುತ್ತಿ ಪಾತ್ರೆ,
ಇನ್ನೊಂದರಲ್ಲಿ ಬಂಗುಡೆ....)
ಹೆಚ್ಚಿಲ್ಲಾಂದ್ರು... ಕೆಲಸ ಬಿಟ್ಕೂಡ್ಲೆ ಮಾರ್ಕೆಟಿಗೆ ಓಡ
ಬೇಕೂಂತಿದ್ದೆ...... ಮತ್ತೆ ಸೀತ ತಂದ್ಕೊಟ್ಲು...
ರಾಮಣ್ಣ:ಓಹೋ! ಸೀತ ತಂದ್ಕೊಟ್ಲು ! ನೀನು ಯಾಕೆ
ಹೋಗ್ಲಿಲ್ಲ?...... ಹಾಗಾದರೆ ಇಷ್ಟು ಹೊತ್ತು ಏನು
ಮಾಡಿದಿ? ಯಾರ ಒಟ್ಟಿಗೆ ಇದ್ದಿ?
ರುಕ್ಕು:ನಿಲ್ಸೀಂದ್ರೆ ಒಮ್ಮೆ. ಯೂನಿಯನ್ ನವರು ಯಾರಾದರೂ
ಕೇಳಿದರೆ ಚಂದಾದೀತು
(ರಾಮಣ್ಣ ತಲೆ ಕೆಳ ಹಾಕುವನು)
ಇವತ್ತು ಮೀಟಿಂಗು ಇತ್ತೂಂತೇಳ್ತೇನೆ.
ರಾಮಣ್ಣ:ಹಾಂ. ಹಾಗಾದರೆ ಸರಿ. ಮೊದಲೇ ಹೇಳ್ಲಿಕ್ಕೆ ಏನಾಗಿತ್ತು?
ಅಲ್ಲಾ, ಹೌದೊ ರುಕ್ಕು? ಯಾವಾಗ ನೀನು ಬುದ್ಧಿ
ಕಲಿಯುವುದು? ಮೂರು ತಿಂಗಳಾಯ್ತು ನಾವು
ಯೂನಿಯನ್ ಸೇರಿ. ಎರಡು ತಿಂಗಳಾಯ್ತು ನಾನು
ಚಾಪೆ ಹಿಡ್ದು. ಇನ್ನೂ ಬುದ್ಧಿ ಬರಲಿಲ್ವಲ್ಲ ನಿನಗೆ?
೪ / ನಾವೂ ಮನುಷ್ಯರು!(ರುಕ್ಕು " ಹಿ ಹ್ಹಿ " ಎಂದು ನಗುತ್ತ ಒಳಗೆ ಹೋಗುವಳು. ರಾಮಣ್ಣ ಕೆಮ್ಮುವನು. ರುಕ್ಕು ನೀರಿನೊಡನೆ ಬಂದು-) ಸ್ವಲ್ಪ ಕುಡೀರಿ. (ಎಂದು ಕುಡಿಸಿ, ಅವನನ್ನು ಹಾಗೆಯೆ ಒರಗಿಸಿ ಮಲಗಿಸುವಳು.)
ರಾಮಣ್ಣ : ಹಾಂ. ಹೂಂ- ನೋಡುವ, ಹೇಳು ನೋಡುವ-
ಏನಾಯ್ತು ಮೀಟಿಂಗ್ನಲ್ಲಿ? ಸಭೆ ದೊಡ್ದಿತ್ತೊ? ಯಾರೆಲ್ಲ ಲೆಕ್ಚರ್ ಕೊಟ್ರು?
ರುಕ್ಕು : ಹೇಳ್ತೀನೀಂದ್ರೆ.....
( ಉತ್ಸಾಹದಿಂದ, ತಿಟ್ಟಿಯ ಒಂದು ಮೂಲೆಯಲ್ಲಿ ಕೂತು) ದೊಡ್ದ ಸಭೆ.... ಆ ಎರಡು ಗದ್ದೆ ತುಂಬ ಇದ್ರು- ಕೆಂಪು ಬಾವುಟ ಹಾಕಿದ್ರು.... (ರಾಮಣ್ಣ ಕಣ್ಣರಳಿಸಿ ಕೇಳುವನು)
ರಾಮಣ್ಣ : ಹುಂ, ಮತ್ತೆ? ರುಕ್ಕು : ಮತ್ತೆ- ಮತ್ತೆ-
( ಙ್ಞಾಪಿಸಿಕೊಳ್ಳುವವಳಂತೆ)
ರಾಮಣ್ಣ : ಹೂಂ, ಮತ್ತೆ ಏನಾಯಿತು? ರುಕ್ಕು : ಲೆಕ್ಚರಿತ್ತು. ರಾಮಣ್ಣ : ಓಹೋ..... ಮೀಟಿಂಗ್ನಲ್ಲಿ ಲೆಕ್ಚರು ಯಾವಾಗ್ಲೂ ಉಂಟು,
ಅಲ್ಲಾ ಏನೂಂತ ಲೆಕ್ಚರು?.....
ರುಕ್ಕು : ಓ- ಹಾಗೆಯೊ? ಜೋರು ಲೆಕ್ಚರು ಕೊಟ್ರು... ನೋಡೀ...
ದೊರೆಗಳ ಎರಡು ಕಾರ್ಖಾನೆ ಬಿಟ್ಟು ಬೇರೆಯೋರೆಲ್ಲ
ರೂಪಾಯಿಗೆ ರೂಪಾಯಿ ಯುದ್ಧ ಭತ್ತೆ ಕೊಡ್ತಾರಲ್ಲ?
ಅದು ಸರಿ . ಆದರೆ ಈ ದೊರೆಗಳು ಕೂಡ ಕೊಡ್ಬೇಕೂಂತ....
ನಾವೂ ಮನುಷ್ಯರು!/೫
ರಾಮಣ್ಣ : ಹೂ೦. ಸರಿ. ನನಗೆ ಗೊತ್ತಿತ್ತು.....ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಮಾತಾಡಿದ್ರಲ್ವೊ? ಕೈ ಹೀಗೆ ಹೀಗೆ ಮಾಡಿ? ರುಕ್ಕು ; ಹೌದು, ಹೌದು. ರಾಮಣ್ಣ : ಹೂಂ. ನೋಡು, ನನ್ಗೆ ಗೊತ್ತಿತ್ತು.....ಸಭೆಗೆ ಯಾರೆಲ್ಲ ಬಂದಿರ್‍ಲಿಲ್ಲ ? ರುಕ್ಕು : ನಾನು ಲೆಕ್ಕ ಮಾಡ್ತಾ ಕೂತದ್ದೂಂತ.... ತೋರ್‍ತದೆ ಹುಂ?... ಯೂನಿಯನ್ ನಲ್ಲಿ ನಾವಿಲ್ಲಾಂತ ಕೆಲವರು ಸೀದಾ ಹೋದ್ರು.ಮತ್ತೆ ಕೆಲವರು ಬೇಗ ಮಾರ್ಕೆಟಿಗೆ ಹೋಗಿ ಬಂಗುಡೆ ತೆಕ್ಕೊಂಡು ಮೀಟಿಂಗಿಗೆ ಬಂದ್ರು..ಸೀತ ಹಾಗೇ ಮಾಡಿದ್ದು.....ನಾನು ಮೊದ್ಲೇ ಬಂದು ಕೂತೆ..... ರಾಮಣ್ಣ :(ಹಲ್ಲು ಕಿರಿದು) ಸರಿ, ಸರಿ. ನಿನಗೆ ಕೊಟ್ಟ ಬಂಗುಡೆಗೆ ಸೀತ ಎಷ್ಟು ವಸೂಲು ಮಾಡಿದ್ಲು? ರುಕ್ಕು : ಓಹೋ..ನನಗೆ ತಲೆಯೇ ಇಲ್ಲಾಂತ ತೋರ್‍ತದೆ ನಿಮಗೆ ಯಾವಾಗಲೂ ಹಾಗೆಯೇ. ಮತ್ತೊಬ್ರ ವಿಷಯ ದಲ್ಲಿ ಅಪನಂಬಿಕೆ.... ಅಲ್ಲಾಂದ್ರೆ.. ಆ ಸೀತು, ಅಲ್ಲ ಹಿಂದೆ ನಾವು ಭಾರೀ ಲಡಾಯಿ ಮಾಡಿಕೊಂಡಿದ್ದೆವೂಂತ ಹೇಳ್ವ・・・ ಈಗ ಯೂನಿಯನ್ ಆದ ಮೇಲೆ ನಾವೆಲ್ಲ ಒಂದೇಂತ ಹೇಳಿದ್ರೆ..... ನಾಲ್ಕು ಬಂಗುಡೆ ಕೊಟ್ಟು ದುಡ್ಡು ತಕ್ಕೊಳ್ಲೇ ಇಲ್ಲ, ನಾಳೆ ಬಂಗುಡೆಯೇ ಬದಲಿ ಕೊಡೂಂತ ಹೇಳಿದ್ಲು.
ರಾಮಣ್ಣ : ಹೂಂ... ಹೂಂ.... ಆಗ್ಲಿ. ಎಲ್ಲಾ ಒಳ್ಳೇದಕ್ಕೇ... ಏನು
ಹೇಳಿದ್ರು ಭಾಷಣದಲ್ಲಿ? ...... ಅಯ್ಯೋ.... ಒಂದಿಷ್ಟು ತಲೆ
ಯಲ್ಲಿ ತುಂಬಿಸ್ಬಾರ್‍ದೋ ....... ವರ್ಷ ಮೂವತ್ತಾಯ್ತು
ಎಮ್ಮೆಗೆ ಆದ ಹಾಗೆ (ಕೆಮ್ಮು)
೬ / ನಾವೂ ಮನುಷ್ಯರು!
ರುಕ್ಕು : ನೋಡಿ ನೋಡಿ, ಕೆಟ್ಟ ಮಾತು ಹೇಳಬಾರ್ದು.......ಸತ್ಯ, ಸತ್ಯ.ಕೆಮ್ಮು ಬಂತೋ ಇಲ್ವೋ? (ರಾಮಣ್ಣ ನಗುವನು-ಮತ್ತೂ ಕೆಮ್ಮು. ರುಕ್ಕು ಎದ್ದು ಅವನ ಬೆನ್ನು ಸವರುವಳು. ಶಾಂತವಾದ ಮೇಲೆ-) ರುಕ್ಕು : ಅಧ್ಯಕ್ಷರು ಜೋರೇ.. ಹದಿನೆಂಟು ರೂಪಾಯಿ ಇದ್ದ -- ಹಂಚಿಗೆ ಎಪ್ಪತ್ತಾಯ್ತು, ನಮ್ಮ ನಾಲ್ಕಾಣೆ ಎಂಟಾಣೆ ಯಾದರೂ ಆಗುವುದು ಬೇಡ್ವೋ? ಆರುಮುಕ್ಕಾಲಿನ ಅಕ್ಕಿಗೆ ಆರಾಣೆಯಾಯಿತು; ನಮ್ಮ ಕೂಲಿ ಎರಡು ಪಟ್ಟಾದರೂ ಆಗಬೇಕೊ, ಬೇಡ್ವೊ? ರಾಮಣ್ಣ : ಮತ್ತೆ ಚಿಮಿಣಿ ಎಣ್ಣೆ, ಹುಳಿ, ಮೆಣಸು, ಬಟ್ಟೆ, ಕಟ್ಟಿಗೆ- ರುಕ್ಕು : ಹೂಂ ಹೂಂ-ಎಲ್ಲಾ! ಹಿಡಿದದ್ದಕ್ಕೆ ಮುಟ್ಟಿದ್ದಕ್ಕೆ ಎಲ್ಲ ವಿಪರೀತ ಕ್ರಯ ಆದ ಮೇಲೆ ನಾವು ಬದುಕಬೇಕೊ, ಬೇಡ್ವೊ? ನಾವು ಮನುಷ್ಯರು ಹೌದೋ ಅಲ್ಲವೋ ಅಂತ..ರೈಟರು ಮತು ದೊರೆ ಕಂಡಿಯ ಹತ್ರ ನಿಂತು ನಮ್ಮನ್ನೆ ನೋದಡ್ತಿದ್ರು....ನಾವೇನೂ ಹೆದರ್ಲೇ ಇಲ್ಲ. ರಾಮಣ್ಣ : ನೀವು ಹೆಂಗಸ್ರು, ಯಾವಾಗಲೂ ಹಾಗೆಯೇ-ಹೆದರೋದು ಯಾಕೇಂತ ಬೇಡ್ವೊ? ನಾವೇನಾದರೂ ಅವರಿಗೆ ವಿರುದ್ಧ ಮಾತಾಡ್ತೇವೊ?.ನ್ಯಾಯವಾದ್ದು ಕೇಳ್ಲಿಕ್ಕೆ ಯಾರ ಹೆದ್ರಿಕೇಂತ? ರುಕ್ಕು : ಮತ್ತೊಂದು ಗೊತ್ತುಂಟೋ ನಿಮ್ಗೆ...? ಇವತ್ತು ಉರ್ವ ದಿಂದ ಒಬ್ಳು ಬಂದಿದ್ಳು ಯೂನಿಯನಿನವಳಂತೆ. ಅವಳ್ದು ದೊಡ್ಡ ಲೆಕ್ಚರು ನಮಗೆ...ಅವಳ ಗಂಡನೂ ಬಂದಿದ್ದ... ಮೊದಲು ಅವನು ಬಹಳ ಕುಡೀತಿದ್ನಂತೆ, ಮತ್ತೆ ಅವನನ್ನು ಯೂನಿಯನಿಗೆ ಸೇ ಕಂಡಾಬಟ್ಟೆ ಕಳ್ಳು ಗಿಳ್ಳು ಕುಡಿಯೋದನ್ನೆಲ್ಲ ನಿಲ್ಲಿಸಿ ಬಿಟ್ಲಂತೆ ಆ ಹೆಂಡ್ತಿ. ನಾವೂ ಮನುಷ್ಯರು! / ೭ ರಾಮಣ್ಣ : ಆಯ್ತಲ್ಲಿಗೆ! ಅವಳೇ ಯಜಮಾನ್ತೀಂತಾಯ್ತು ಹಾಗಾದರೆ.... ಬದುಕಿದೆ. ಸದ್ಯಃ ನಾನೇನೂ ಕಳ್ಳು ಕುಡಿಯೋದಿಲ್ಲವಲ್ಲ! (ಕೆಮ್ಮು , ರುಕ್ಕು ಅವನ ಬೆನ್ನು ಸವರುವಳು.) ರುಕ್ಕು : ಹೌದೊ? ಈಗ ಮದ್ದಿಗೇನು ಮಾಡುವುದು? ನಾಳ್ದು ಶನಿವಾರ ದುಡ್ಡು ಸಿಕ್ತದೇಂತ ಹೇಳ್ವ...ಮತ್ತೆ ತರು ವುದೋ...ಅಲ್ಲ....ಆ ನಾಲ್ಕಾಣೆ- ರಾಮಣ್ಣ : ಏನು? ಯೂನಿಯನಿಗೆ ಕೊಡ್ಲಿಕ್ಕಿರುವ ನಾಲ್ಕಾಣೆ ಮದ್ದಿಗೊ? ಛೆ! ಛೆ! ನಾನು ಹುಷಾರಾಗಿದ್ದೇನೆ. ಇನ್ನು ಒಂದು ಸರ್ತಿ ಮದ್ದು ತಂದ್ರೆ ಆಯ್ತು, ಮತ್ತೆ ಒಮ್ಮೆ ತಲೆ ಕೆಲಸಿಗೆ ಕೊಟ್ಟು ಕೆಲಸಕ್ಕೆ ಬರುವುದೇ. ನಮ್ಮ ರೈಟರನ್ನು ನೋಡದೆ ಬಾಳ ಸಮಯ ಆಯ್ತು...... ರುಕ್ಕು : (ಮುಖ ತಿರುಗಿಸಿ) ಅವನಿಗೆ ಪಾಪ......ಜೀವದಲ್ಲಿ ಜೀವ ಇಲ್ಲ. ಒಟ್ಟು ಹೇಗಾದರೂ ಮಾಡಿ ಯೂನಿಯನ್ ಮುರೀಬೇಕೂಂತ ಆಗಿದೆ ಅವನಿಗೆ. ರಾಮಣ್ಣ : ಕಣ್ಣು ಹಾಕ್ಲಿಕ್ಕೂ ಪುರಸತ್ತಿಲ್ವೋ ಏನೊ ಈಗ? ರುಕ್ಕು : ಹೋದ ಅವ. ಕಣ್ಣು ಹಾಕುವವ ಮಣ್ಣು ತಿಂದ..... ಒಮ್ಮೆ ಮಾತಾಡ್ಲಿಕ್ಕೆ ಬರಲಿಯಂತೆ ನಮ್ಮಲ್ಲಿ ಯಾರ ಹತ್ತಿರವಾದ್ರೂ, ಯೂನಿಯನಿಗೆ ಹೇಳಿ ಅವನಿಗೆ ತಕ್ಕ ಶಾಸ್ತಿ ಮಾಡಿಸ್ತೇವೆ. : ರಾಮಣ್ಣ : ಭೇಷ್! ಇನ್ನು ನಾವು ಗಂಡಸ್ರು ಮನೆಯಲ್ಲೇ ಕೂತು ನೀವು ತಂದದ್ದನ್ನುತಿಂದರಾಯ್ತು. ನೀವೂ ಯೂನಿಯನೂ ಇಬ್ರೇ ಎಲ್ಲಾ ಮಾಡ್ತೀರಿ.
೮ / ನಾವೂ ಮನುಷ್ಯರು!
ರುಕ್ಕು : (ತಮಾಷೆ ಮಾಡುತ್ತ) ಓಹೋಹೊಹೊ....ಯೂನಿಯನಂತೇಳಿದ್ರೆ ಗಂಡಸರೂ ಇಲ್ಲಾಂತ ತೋ....ಗಂಡಸ್ರೂ ಹೆಂಗಸ್ರೂ ಎಲ್ಲಾ ಮಜೂರರೂ ಸೇರಿರುವ ಸಂಘಟನೆ ಯೂನಿಯನು. (ರಾಮಣ್ಣ ನಗುವನು.ಕೆಮ್ಮು. ರುಕು ಏಳುವಳು.) ರುಕ್ಕು :ಸಾಕು ಮಾತಾಡಿದ್ದು....ಹೊತು ಕಂತುತ್ತ್ ಬಂತು.... ಸ್ವಲ್ಪ ಕಟ್ಟಿಗೆ ಎಲ್ಲಿಯಾದರೂ ಸಿಗ್ತದೋ ನೋಡೇನೆ.... ಈ ಕಿಟ್ಟೂಎಲ್ಲಿಗೆ ಹೋದ್ನಪ್ಪ. ನಾನು ಕೆಲಸಕ್ಕೆ ಹೋದ ಮೇಲೆ ಹೊರಗೆ ಆಡಿದ್ದು ಸಾಕಾಗ್ಲಿಲ್ಲೋ ಏನೋ! (ಹೊರ ಹೋಗುವಳು. ರಾಮಣ್ಣ ಬಳಲಿದ ಧ್ವನಿಯಲ್ಲಿ “ಹೋಗು ಹೋಗು" ಎನ್ನು ವನು. ಸ್ವಲ್ಪ ಹೊತ್ತು ನೀರವ. ರಾಮಣ್ಣ ಒರಗಿಕೊಳ್ಳುವನು. ಹೊರಗಿನಿಂದ "ರಾಮಣ್ಣ-ఓ ರಾಮಣ್ಣನವರೇ” ಎಂದು ಕರೆಯುವ ಸ್ವರ.) ರಾಮಣ್ಣ : ಯಾರಪ್ಪಾ? ಬನ್ನಿ.... ಇದ್ದೆನೆ. (ಲಸ್ಸಾದೋ ಒಳಗೆ ಬರುವನು. ಮಾಸಿದ ಬಟ್ಟೆ, ಕೊಳೆಯಾದ ಕೋಟು, ಟೋಪ್ಪಿ, ಕೊರಳಲ್ಲಿ ಶಿಲುಬೆ....) ಲಸ್ರದೋ: ಹ್ಯ್ರಾಗಿದ್ದೀರಿ ರಾಮಣ್ಣ? ರಾಮಣ್ಣ : ಹಾ–ಲಸ್ರದೋ ಪೊರ್ಬುಗಳೋ? ಬನ್ನಿ....ಇದ್ದೇನೆ ನೋಡಿ....ಗುಣ ಆಗ್ತ ಬಂತು. ಇನ್ನೂ ಸ್ವಲ್ಪ ಕ್ಷೀಣ.... ಬನ್ನಿ....ಇದರ ಮೇಲೆ ಕೂತ್ಕಳ್ಳಿ....ಹಾಗೆ ನಾವೂ ಮನುಷ್ಯರು! /೯ (ಲಸ್ಸಾದೋ ಕುಳಿತುಕೊಳ್ಳುವನು) ಕೆಲ್ಸ ಬಿಟ್ಟು ಈ ಕಡೆ ಬಂದಹಾಗಿದೆ. ಲಸ್ರಾರ್:ಇಲ್ಲ ರಾಮಣ್ಣ..ಕೆಲಸಕ್ಕೆ ಹೋಗ್ಲೆ ಇಲ್ಲ. ರಾಮಣ್ಣ : ನೋಡಿ ಹಾ೦. ನಾನು ಅಂದಾಜು ಮಾಡಿದೆ. (ನಗುತ್ತ) ನಾವೆಲ್ಲಿಯಾದರೂ ಕೆಲಸಕ್ಕೆ ಹೋಗದಿದ್ರೆ ಯೂನಿಯನಿ ನವರು ಸಿಟ್ಟು ಮಾಡ್ತಾರೆ....ಒಬ್ಬ ಒಂದು ದಿನ ಕೆಲಸಕ್ಕೆ ಹೋಗದಿದ್ರೆ, ಅಷ್ಟು ಹಂಚು ತಯಾರಾಗುವುದಿಲ್ಲ.... ಅದು ಯುದ್ಧಕ್ಕೆ ಹೋಗುವುದಿಲ್ಲ....ಮಳೆ ಬಂದು ಸೈನ್ಯಕ್ಕೆ ತೊಂದರೆಯಾಗ್ತದೆ. ಜಪಾನಿನವ ಬರಾನೆ. ಲಾಸ್ರಾದೋ: ಹಾಂ! ಹಂಚು ಅಷು ಮುಖ್ಯವೊ? ಯುದ್ಧ ಮಾಡು ವವರಿಗೆ ಬೇಕು ಅಲ್ಲವೊ? ರಾಮಣ್ಣ: ಹಾ೦, ಅದೇ ಹೇಳುವುದು....ನೋಡಿ. ನನಗೇನೋ ಇದು ಶುರು ಶುರುವಿಗೆ ತಮಾಷೆ ಕಣೀತ್ತು....ಮತ್ತೆ ಯೋಚ್ನ್ ಮಾಡಿದ್ರೆ.... ಅದು ಸರಿ. ಅಲ್ಲೊ ಹೇಳಿ.ಎಲ್ಲರೂ ಇವತ್ತು ಬೇಡಾಂತ ಕೆಲಸ ನಿಲ್ಸಿದ್ರೆ ಹಂಚೇ ಆಗ್ಲಿಕ್ಕಿಲ್ಲ.... ಲಾಸ್ರಾದೋ: ಅಲ್ಲಾ ಅದ್ಸರಿ. ರಾಮಣ್ಣ: ಹಾಂ ಹಾಂ ಅದೇ -ಯೂನಿಯನಿನವರು ಹೇಳೋದೇ ನಂದ್ರೆ ಓಡಾಂತ.ಮಾತ್ರ ఆల్ల-ನಿಮ್ಮ ಬಟೆ ಮಗ್ಗ ಎಲ್ಲಾ ಹಾಗೇಂತ ಲಸ್ರಾದೋ ಟೊಪಿ ತೆಗೆದು ತಲೆಯ ಉಜುವನು.... ಇಳಿವಯಸ್ಸು) ಬಟ್ಟೆ ತಯಾರಿ ನಿಂತ್ರೆ ಈ ಕಷ್ಟಕಾಲದಲ್ಲಿ ಜನರಿಗೆ ಬಟೆ ಎಲ್ಲಿಂದ ಸಿಗಬೇಕು?ಜನರಿಗಾಗಿ ಹೆಚ್ಚು ತಯಾರು ಮಾಡಬೇಕು? ಜನರಿಗಾಗಿ ಹೆಚ್ಚು ತಯಾರು ಮಾಡಬೆಕಪ್ಪ!ಕಮ್ಮಿಯಂತೊ ಮಾಡಲೇಬಾರದು! (ಕೆಮ್ಮವನು)
೧೦ / ನಾವೂ ಮನುಷ್ಯರು! ಹಾಳು ಕೆಮ್ಮೊಂದು ತಿನ್ತದೆ ನನ್ನನ್ನು. ಲಸ್ರಾದೋ:(ಗಂಟಲು ಸರಿಮಾಡಿಕೊಂಡು)
ನೀವು ಹೇಳಿದ್ದು ಸರಿ....ಆದ್ರೆ ನೋಡಿ...ನಾನು ಕೆಲ್ಸಕ್ಕೆ ಹೋಗದ ಕಾರಣವೇ ಬೇರೆ. ಬಾಯಿಗೆ ತಿಂಗಳಾಯಿತು.... ನೋವೂಂತ ಹೇಳ್ತಾಳೆ....ಏಳನೆ ಹೆರಿಗೆ...
(ರಾಮಣ್ಣ 'ಮೊದಲು ಸಂತೋಷ ಸೂಚಿಸುವನು.. ಮಾತು ಮುಂದುವರಿದಂತೆ, ತುಟಿಮುಚ್ಚಿ ತಲೆಬಾಗಿಸಿ ನಿಟ್ಟುಸಿರು ಬಿಡುವನು.) ಕಳೆದ ಸಲವೇ ಕಷ್ಟವಾಗಿತ್ತು. ಈಗ ಯುದ್ಧಕ್ಕೆ ಹೋದ ಜೂನಿಯ ಸುದ್ದಿಯೂ ಇಲ್ಲ....ಅಳಿಯನ ಮನೆಯಿಂದ ಮಗಳ ವಿಚಾರ ಕಾಗದವೂ ಇಲ್ಲ. ಕಳೆದ ವರ್ಷ ಮಗು ತೀರಿಕೊಂಡದ್ದು ద్చే ಬೇರೆ.ಒಟ್ಟು ದುಃಖ. ಏನೂ ಇಲ್ಲಾಂತೇಳ್ತ್ನೆನೆ ಜೀವದಲ್ಲಿ. ಯೇಸು ದೇವರು ಕಾಪಾಡ ಬೇಕು ನಮ್ಮನ್ನು....ಹೂ೦– ರಾಮಣ್ಣ:ಏನು ಮಾಡುವುದು ಹೇಳಿ? ಸ್ವಂತ ಬೆವರಿಳಿಸಿ, ಬೇಡಿ- ಕಾಡಿ ಕೂಲಿ ಸಂಪಾದಿಸಿ ಬದುಕುವವರಲ್ಲವೊ ನಾವು? ಇದೇನು ನಮ್ಮ ರಾಜ್ಯವೊ?
ಲಾಸ್ರಾದೋ:ಏನೋ ರಮಣ್ಣ....ಈಗೀಗ ನೀವು ಮಾತಾಡುವುದೆಲ್ಲ ಹೊಸ್ಥಗಿ ಕಾಣೀದೆ. ಕೆಟ್ಟದೂಂತ ಅಲ್ಲ.ನನಗೇನೋ ಬಾಳ ವ್ಯಥೆ ಆಗ್ತ.ದೆ-ಸಂತೋಷವೂ ಆಗ್ರದೆ....ಬಾಯಿ ರುಕ್ಮಕ್ಕನನ್ನು ಕೇಳೀದ್ಲು....
ರಾಮಣ್ಣ: ಹೇಳ್ತೀನೆ, ಹೇಳ್ತೀನೆ....ರುಕು ಹೆತ್ತದು ಒಂದೇ
ಒಂದಾದ್ರೂ ಬೇರೆಯವರನ್ನು ಹೆರಿಸಲಿಕ್ಕೆ ಅವಳು
ಯಾವಾಗ್ಲೂ ತಯಾರೇ.ಖಂಡಿತ ಬಂದು ಹೋಗ್ತ್ಳಳೆ.
ನಾವೂ ಮನುಷ್ಯರು! / ೧೧ (“ಏಯ್! ಇದ್ಯೇನೋ?” ಎಂದು ಗದರಿಸುತ್ತ ಕಮಿ ಯವರು- ಧನಕಾಮತ್-ಬೆತ್ತ... ಬೀಸುತ್ತ ಒಳಬರುವರು. ನಾಲ್ವತ್ತರ ವಯಸ್ಸು. ಲಸ್ರಾದೋ ಎದ್ದು ನಿಲ್ಲುವನು.... ರಾಮಣ್ಣ ಏಳುವುದಿಲ್ಲ. ಅವನ ಮುಖಭಾವ ದೃಢ ವಾಗುವುದು.) ಧನ:ಏನು ಕೊಡೀಯೊ?....ಇವತ್ತು ತಾರೀಕು ಇಪ್ಪತ್ತಂಟು. ಒಂದನೇ ತಾರೀಕಿಗೆ ಮನೆ ಬಾಡಿಗೆ ಸಿಕ್ಕಲೇಬೇಕು. (ಲಸ್ರಾದೋ ನಮಸ್ಕರಿಸುವನು. ಕಮಿಥಿ ತಲೆಯಾಡಿಸಿ ರಾಮಣ್ಣ ನನ್ನು ದುರದುರನೆ ನೋಡೆುವನು) ಏನೋ?ಎದ್ದು ನಿಲ್ಲೋದಕ್ಕೂ ಆಗೋದಿಲ್ವ?....ಬಗ್ಗಿ ನಮಸ್ಕಾರ ಮಾಡ್ಲಿಕ್ಕೂ ಸಾ ಧ್ಯಬ ಇಲೊ? ಅಬಾ! (ಬೆತ್ತದಿಂದ ನೆಲಕ್ಕೆ ಕುಟ್ಟವನು).... ನಿಮ್ಮ ಯೂನಿಯನಿಗೆ ಸೇರೀದ ಫಲವೊ ಇದು?ನಾನು ಈ ಮನೆಯ ಧಣಿಯರ ಕಡೆಯಿಂದ ಬಂದವನು ಎಂಬುದೂ ಮರಿಯೊ? ನಾಳೆ ನಾನು ನಿನ್ನ ಮಡಿಕೆ-ಕುಡಿಕೆ ಎಲ್ಲಾ ತೆಗ್ದ್ದು ಹೊರಗೆ ಹಾಕ್ಥೆನೆ ನೋಡು....
ರಾಮಣ್ಣ:(ನಂಜಿನಿಂದ)
ನಮಸ್ಕರ ಸ್ವಮಿ....ಈ ನೆಲದ ಮೇಲೆ ಕೂತುಕೊಳ್ಳೂವ
ಕ್ರುಪೆ ತಾವು ತೋರಿಸದೆ ಇರುವಾಗ ನಾನು ಬಡವ
ಯಾಕೆ ಏಳ್ಳೀ? ನಿಮ್ಗ ಬಾಡಿಗೆ ಕೊಟ್ಟು ಕೊಟ್ಟು ಈ
ಸ್ಥಿತಿಗೆ ಬಂದಿದ್ದೇನೆ.ಆದ್ರೆ,ನಮಸ್ಕರ ಮಾಡ್ಲಿಕ್ಕ)
ಇನ್ನೂ ಶಕ್ತಿ ಉಂಟು. ಮತ್ತೆ ಬಾಡಿಗೆ ವಿಚಾರ.ಈ
ತಿಂಗಳಿಂದು ಆಗ್ಲೆಯ ಸಂದಾಯ ಮಾಡಿದ್ದೇನೆ.ಮುಂದಿನ
ತಿಂಗಳಿಂದಕ್ಕೆ ಆಗ ಬನ್ನಿ....ಮತ್ತೆ ಯೂನಿಯನ್ ಸಂಗ್ತಿ
....ಸ್ವಲ್ಪ ಸುಮ್ಮಗಿದ್ರೆ ಒಳ್ಳೇದು.
ಧನ :(ಸಿಟ್ಟುಗೊಂಡು ಹುಬ್ಬು ಹಾರಿಸುವನು) ೧೨ / ನಾವೂ ಮನುಷ್ಯರು!
ನೋಡುವ, ನೋಡುವ-ನಿಮ್ಮ ಪಿತ್ವ ಎಲ್ಲಿವರೆಗೆ ಏರ್ರ್ತ್ ದೇಂತ!....ಲಸ್ರಾದೋ! (ಕೊಂಕಣಿ ಭಾಷೆಯಲ್ಲಿ) ನೆನಪುಂಟಲ್ಲ್ವೊ? ಒಂದನೆ ತಾರೀಕಿಗೆ ಇಡಬೇಕು ಬಾಡಿಗೆ! ನಿನ್ನ ಮನೆಯಿಂದ ಈಗ ಬಂದದ್ದಷ್ಟೇ ನಾನು. ಬಾಯಿ ಒಬ್ಳೇ ಇದ್ಲು.... (ಕಣ್ಣು ಕೆರಳಿಸಿ ಹಿಂದಿರುಗುವನು)
ರಾಮಣ್ಣ : (ರಾಮಣ್ಣನನ್ನೂ ಕಯನ್ನೂ ನೋಡುತ್ತ ಬೆಪ್ಪನಂತೆ
ನಿಂತಿದ್ದ ಲಾಸ್ರಾದೋನನ್ನು ಕುರಿತು)
ಬಾಯಿ ಎಕ್ಲೀ ಅಸ್ಲ್ಲಿ - ಒಬ್ಲೆ ಇದ್ದಂತೆ. ಏನು ಪೊರ್ಬು
ಗಳೇ....ನಾವು ಮನುಷ್ಯರು ಹೌದೋ ಅಲ್ಲವೋ....ಯಾವ
ತಪ್ಪಿಗೆ ಈ ಅವಮಾನದ ಮಾತು ಕೇಳ್ಳೇಕು?
(ಲಸ್ಸಾದೋ ಕುಳಿತುಕೊಳ್ಳುವನು.)
ಬಂದಾಗ ಎದ್ದು ನಿಲ್ಬೇಕಂತೆ....ಎದ್ದು ನಿಲ್ಲುವುದು-
( ಹೊಟ್ಟೆಯನ್ನು ತೋರಿಸಿ)
-ಈ ಉರಿ!
(ರುಕ್ಕು ಲಗುಬಗೆಯಿಂದ ಹೊರಗಿಂದ ಒಳಬರುವಳು)
ರುಕ್ಕು : ಬಂದಿತ್ತಲ್ಲ ಬಾಡಿಗೆ ಯಜಮಾನರ ಸವಾರಿ?ಏನಂತೆ?
ರಮಣ್ಣ : ಏನು? ಸಿಕ್ಥೊ ಹಾದಿಯಲ್ಲಿ?
ರುಕ್ಕು:ಹೊಂ.ಹೀಗೆ-
(ಅಣಕಿಸಿ) . . . .
ನೋಡಿತು.ಮುಂದಿನ ತಿಂಗಳ ಬಾಡಿಗೆ ಕೇಳ್ಳಿಕ್ಕೆ
ಬಂದದ್ದೂ?
ನಾವೂ ಮನುಷ್ಯರು! / ೧೩
ರಾಮಣ್ಣ : ಹಾಂ....
(ಹೆಂಡತಿಯ ಕೈಕೆಡೆಗೆ ದೃಷ್ಟಿ ಹರಿಸಿ) ನೀನು ಹಾಗೇ ಬಂದಿಯಲ್ಲ. ಎಲ್ಲಿ ಉಂಟೇ ಕಟ್ಟಿಗೆ?
ರುಕ್ಕು : ಸಿಕ್ಕಲಿಲ್ಲ....ಕತ್ತಲಾಗ್ತ బంತಲ್ಲ....ಶೆಟ್ಟರ ಡಿಪೋದಲ್ಲಿ
ಬಾಗಿಲು.
ರಾಮಣ್ಣ : ಮತ್ತೆ - ರುಕು : ಮತ್ತೆ, ಕಾಂತಪ್ಪಣ್ಣ ಇವತ್ತು ಮಿಟಿಂಗಿನಲ್ಲಿ ಹೇಳಿದ
ಹಾಗೆ....ಬಂಗುಡೆ ತಂದು, ಸುಟ್ಟು ತಿನ್ನದೆ ಮಣ್ಣಲ್ಲಿ ಹೂಳಿಡೋದು! ರಾಮಣ್ಣ :(ಆ ಮಾತನ್ನು ಮೆಚ್ಚಿದವನಂತೆ) ನೋಡಿ ಪೊರ್ಬುಗಳೆ ಎಂಥ ಮಾತು! ಬಂಗುಡೆ ತಂದು, ಸುಡಲಿಕ್ಕೆ ಬೆಂಕಿ ಇಲ್ಲಾಂತ ಮಣ್ಣಲ್ಲಿ ಹೂಳಬೇಕೆ? ಹೂಳ ಬೇಕೊ ಪೊರ್ಬುಗಳೆ? (ಲಸ್ರಾದೋ ಕೂಡ ಮೆಚ್ಚುಗೆಯಿಂದ ತಲೆಯಾಡಿಸುವನು.) (ಮಗ ಕಿಟ್ಟು ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು "ఇಂಕ್ವಿಲಾಬ್ ಜಿಂದಾಬಾದ್" ಎನ್ನುತ್ತ ಒಳಬರುವನು. ಕೈಯಲ್ಲೊಂದು ಬುಟ್ಟಿ....)
ರಾಮಣ್ಣ :(ಕುಳಿತಿದ್ದಲ್ಲಿಂದಲೇ)
ಏ-ಏನೋ ಇದು? (ರುಕ್ಕು ಹೆಮ್ಮೆಯಿಂದ ಮಗನನ್ನು ನೋಡುವಳು)
ಕಿಟ್ಟು : ಶ್!! ಇದು ಮೆರವಣಿಗೆ! ಮಜೂರ ಸಂಘಕ್ಕೆ ಜಯ
ವಾಗಲಿ!
(ಪೊರ್ಬು ಟೊಪ್ಪಿ ಇಡುವನು. ತೆಗೆಯುವನು. ಕಿಟ್ಟು ಬುಟ್ಟಿ
ಯನ್ನು ಮುಂದೆಮಾಡಿ.)
ನೋಡಮ್ಮ ಒಣಗಿದ ಕಟ್ಟಿಗೆ ಚೂರು....ಮಧ್ಯಾಹ್ನ
ಬುತ್ತಿ ಊಟ ಆದಮೇಲೆ ಇವನ್ನು ಒಟ್ಟುಮಾಡಿಟ್ಟೆ....
೧೪ | ನಾವೂ ಮನುಷ್ಯರು! ಸಾಯಂಕಾಲ ಮರತೇ ಹೋಯಿತು.ಮೆರವಣಿಗೆ ಒಟ್ಟಿಗೆ ಓಡಿದ್ದೇ. ಪುನಃ ತಂದುಬಿಟ್ಟೆ . (ರುಕ್ಕು ಬುಟ್ಟಿಯನ್ನು ಎತ್ತಿಟ್ಟು, ಮಗನನ್ನು ತಬ್ಬಿಕೊಳ್ಳು ವಳು.)
ರಾಮಣ್ಣ : ನಮ್ಮ ಹಸಿ ಬಂಗುಡೆ ಈ ದಿನ ಬಿಸಿಯಾದೀತು....
ಕಿಟ್ಟು : (ತಾಯಿಯಿಂದ ಬಿಡಿಸಿಕೊಂಡು)
ಹೇಯ್! ನನಗೊಂದು ಪದ್ಯ ಗೊತ್ತುಂಟು: ಕಾಸಿಗೆ ಎರಡು ಬೆಳ್ಳುಳ್ಳಿ ಬಂಗುಡೆಮಿನಿಗೆ ಸಂಗಡವಾದ ಅಂಗಡಿಯೊಳಗಿನ ಬೆಳ್ಳುಳ್ಳಿ
ರುಕ್ಕು : ಕಾಸಿಗೆ ಎರಡು ಬೆಳ್ಳುಳ್ಳಿ ಇಲ್ಲವೆ ಇಲ್ಲ. ಈಗ ಅದರ
ಅಗತ್ಯವೂ ಇಲ್ಲ.
ಈ ಪದ್ಯ ಹೇಳು ಕಿಟ್ಟ-ಮಿಟಿಂಗ್ನಲ್ಲಿ ಹೇಳಿದ್ರಲ್ಲ ಅದು....
(ತಾಯಿ ಮೊದಲು,ಮತ್ತೆ ತಾಯಿ ಮಗ ಜತೆಯಾಗಿ)
ಊರಿನಲ್ಲಿ ದುಡಿವ ನಮಗೆ ಹೊಟ್ಟೆಗಿಲ್ಲದಾಗಿದೆ
ಊರಹಂಚು ಮಾಡುವೆಮಗೆ ಮನೆಯೆ ಇಲ್ಲವಾಗಿದೆ ೧
ದುಡಿವುದೊಂದೆ ಗೊತ್ತು ನಮಗೆ, ನಮ್ಮ ಬೆವರ
ಫಲವನು
ದುಡಿಯದೆಯೇ ಕುಡಿದು ತಿಂಬ ಜಡಧನಿಕನು ಸುಲಿವನು ೨
ನಮ್ಮದು ಹೊಲ ನಮ್ಮದು ನೆಲ ನಮ್ಮದಿಡೀ ರಾಜ್ಯವು
ನಮ್ಮದನ್ನು ನಾವು ಪಡೆಯೆ ನಮಗೆ ಯಾರ ವ್ಯಾಜ್ಯವು? ೩
ಊರ ಸುಲಿವ ಚೋರತನದ ಪಾರುಪತ್ಯ ಈಗಿದೆ
ಊರಿಗಿಲ್ಲ ಸುಖವು ಇದನ್ನು ವೀರತನದಿ ನೀಗದೆ ೪ ನಾವೂ ಮನುಷ್ಯರು!| ೧೫
ಬನ್ನಿರಣ್ಣಗಳಿರ ದುಡಿವ ಜನಗಳೆಲ್ಲ ಈಗಲೇ ..
ಬನ್ನಿರೆಮ್ಮ ರಾಜ್ಯಭಾರ ಸ್ಥಾಪಿಸಲ್ಕೆ ಬೇಗನೆ ೫
(ಪದ್ಯ ಮುಗಿಯುತ್ತಿದ್ದಂತೆ ಯೂನಿಯನಿನ ಕಾರ್ಯ ದರ್ಶಿಯೂ ಆದಂ ಸಾಹೇಬರೂ ಬರುವರು.ರಾಮಣ್ಣ ಕಷ್ಟ ಪಟ್ಟಿದ್ದು “ನಮಸ್ಕಾರ”, “ಸಲಾಂ” ಎನ್ನುವನು.)
(ಬಂದ ఇಬ್ಬರು "ಲಾಲ್ ಸಲಾಂ", ಎನ್ನುವರು. ಪೊರ್ಬು, ರುಕ್ಷು ಎಲ್ಲರಿಗೂ ಸಂತೋಷ. ಕಿಟ್ಟು ಕಾರ್ಯದರ್ಶಿಯ ಬಳಿಗೆ ಬರುವನು. ಕಾರ್ಯದರ್ಶಿಯು ಅವನ ಕೈಹಿಡಿದು ಕೊಳ್ಳುವನು.)
ಕಾರ್ಯದರ್ಶಿ: ಏನು? ಹೇಗಿದ್ದೀರಿ ಎಲ್ಲ? ರಾಮಣ್ಣ, ಗುಣವಾಗ್ತಾ ಬಂತೊ? ರುಕು : ಹಾ೦. ಈಗ ನೆನಪಾಯ್ತು....ಸಭೆ ಮುಗಿದ ನಂತ್ರ ಅಧ್ಯಕ್ಷರೂ ನನ್ಹತ್ರ ಕೇಳಿದ್ರು "ರಾಮಣ್ಣನಿಗೆ ಹ್ಯಾಗುಂಟು?" ಅಂತ.
ರಾಮಣ್ಣ: ಹಾ೦. ನನಗೆ ಗೊತ್ತಿತ್ತು.ಕೇಳ್ದೆ ಇರೋದಿಲ್ಲಾಂತ ನನಗೆ ಗೊತ್ತಿತ್ತು (ಪೊರ್ಬು ಸಹಿತ ಎಲ್ಲರೂ ನಗುವರು.)
ಕಾರ್ಯದರ್ಶಿ : ನೋಡಿ ರಾಮ್ಮಣ. ಈಗಲೇ ಕತ್ತಲೆ ಆಯ್ತು. ನಮ
ಗಿನ್ನು ನೂರುಮನೆಗೆ ಹೋಗ್ಬೇಕು. ಈ ತಿಂಗಳ ಚಂದಾ ವಸೂಲಿಗೆ ಬಂದದ್ದು, ಇಬ್ಬರದೂ ನಾಲ್ಕಾಣೆ. (ರುಕ್ಕು ಒಳಹೋಗುತ್ತಾಳೆ.)
ರಾಮಣ್ಣ : ರುಕ್ಕೂ....ಹೇಳಿದ್ದು ಕೇಳಿಸಿತೊ?....ಎಲ್ಲಿದ್ದಿ?
ರುಕ್ಕು :(ಬರುತ್ತೆ)
ಓ-ಕರೆದಿರೊ? ಹಣ ತರಲಿಕ್ಕೆ ಹೋಗಿದ್ದೆ. ೧೬ / ನಾವೂ ಮನುಷ್ಯರು!
ರಾಮಣ್ಣ : ನೋಡಿ-ನೋಡಿ. ವೆಂಕಟರಮಣನ ಮುಡಿಪಿಗಿಂತಲೂ ಹೆಚ್ಚು ಪವಿತ್ರ ಈ ಎರಡೆರಡಾಣೆ. ಕಿಟ್ಟು: ಅಪ್ಪಾ, ನನ್ನದೂ ಎರಡಾಣೆ ಕೊಡು, ನಾನೂ ಮೆಂಬ ರಾಗ್ಬೇಕು. (ಎಲ್ಲರೂ ನಗುವರು.) ಕಾರ್ಯದರ್ಶಿ: ಈಗ ನೀನು ಕೆಲಸಕ್ಕೆ ಹೋಗುವುದಿಲ್ಲವಲ್ಲ. ಕೆಲಸಕ್ಕೆ ಹೋಗಲಿಕ್ಕೆ ಶುರುಮಾಡಿದ ಮೇಲೆ ನೀನೂ ಮೆಂಬರು. ಈ ವರ್ಷ ಶಾಲೆಗೆ ಬಾ. ಯುನೂನಿಯನ್ ಶಾಲೆಗೆ ಕಲೀಲಿಕ್ಕೆ, ಬರ್ತೀಯೊ? ಕಿಟ್ಟು: ಓ! (ರಾಮಣ್ಣ-ರುಕ್ಕು ಸಂತೋಷದಿಂದ ಪರಸ್ಪರ ದೃಷ್ಟಿ ವಿನಿಮಯ ಮಾಡಿಕೊಳ್ಳುವರು)
ಕಾರ್ಯದರ್ಶಿ: ಇನ್ನು ನಾನು ಚಂದಾ ವಸೂಲಿಗೆ ಬರಲಿಕ್ಕಿಲ್ಲ. ನೀವೇ ತಂದುಕೊಡಬೇಕು. (ರಶೀದಿ ಬರೆಯುತ್ತ) ಈ ಸಲದ ರಶೀದಿ ಇಲ್ಲಿಯೇ ಕೊಡ್ತೇನೆ.
ರಾಮಣ್ಣ : ಇನ್ನೇನು-ಇನ್ನೊಂದು ವಾರ ಬಿಟ್ಟು ನಾನೂ ಕೆಲಸಲಕ್ಕೆ ಬರುವವನೇ!
ಆದಂ : ನಾಡ್ದು ಮಿಟಿಂಗಿಂದೂ ಹೇಳಿಬಿಡಿ.
ಕಾರ್ಯದರ್ಶಿ: ಹಾಂ..ಮಂಗಳವಾರ ಸಾಯಂಕಾಲ ದೊಡ್ಡ ಮೈದಾನಿ
ನಲ್ಲಿ ಭಾರಿ ದೊಡ್ಡ ಸಭೆ ಉಂಟು....ರಷ್ಯಾದ ಕ್ರಾಂತಿ
ದಿನದ ಆಚರಣೆ.
(ರಾಮಣ್ಣನತ್ತ ನೋಡಿ)
ನಾವೂ ಮನುಷ್ಯರು!| ೧೭ ಅವತ್ತು ಸೌಖ್ಯ ಇದ್ರೆ ನೀವೂ ಬನ್ನಿ....ರುಕ್ಮಕ್ಕ ಕಿಟ್ಟು ಬರಲೆಬೇಕು. ಹತ್ತಿರದ ಎಲ್ರನ್ನೂ ಸೇರಿಸಿ ಮೆರವಣಿಗೆ ಯಲ್ಲಿ ಬನ್ನಿ. ಅವತ್ತು ಯಕ್ಷಗಾನ ಉಂಟು-ನಾಟಕ ವುಂಟು-ಭಾಷಣ ಉಂಟು.
ಕಿಟ್ಟು : ಇಂಕ್ವಿಲಾಬ್ ಜಿಂದಾಬಾದ್ ಉಂಟು.
ಕಾರ್ಯದರ್ಶಿ : (ನಗುತ್ತ)
ಹಾ೦ ಹಾ೦-ಅದೂ ಉಂಟು.
(ಲಸ್ರಾದೋ ಕಡೆತಿರುಗಿ)
ಪೊರ್ಬುಗಳೆ, ಹ್ಯಾಗೆ ನಡೀತಿದೆ ನಿಮ್ಮ ಕಂಕನಾಡಿಯ ಮಗ್ಗದ ಯೂನಿಯನು? ಸದಸ್ಯ ಚಂದಾ ಎಲ್ಲ ಕೊಟ್ಟಿದ್ದೀರೊ?
(ಲಸ್ರಾದೋ ಮಾತನಾಡಲೆಂದು ಬಾಯಿ ತೆರೆಯುವಷ್ಟರಲ್ಲೆ)
ರಾನುಣ್ಣ : ಓಹೋ! ಪೊರ್ಬುಗಳು ಬಹಳ ಉಮೇದಿನಿಂದ ಕೆಲಸ
ಮಾಡ್ತಾ ಇದ್ದಾರೆ....
ಕಾರ್ಯದರ್ಶಿ : ಸಂತೋಷ. ಬರ್ತಿವೆ ಹಾಗಾದರೆ, ಲಾಲ್ ಸಲಾಂ!
(ಕಾರ್ಯದರ್ಶಿ,ಆದಂ ಸಾಹೇಬ್ ಇಬ್ಬರೂ ಹೊರಡುವರು. ರಾಮಣ್ಣ ಕೂತುಕೊಳ್ಳುವನು. ಪ್ರಸನ್ನತೆ. ಮತ್ತೆ ಹೊಟ್ಟೆ ನೋವು ಕೆಮ್ಮು....)
ರಾಮ್ಮಣ್ಣ : (ಚೇತರಿಸಿಕೊಳ್ಳುತ್ತ)
ಬಂದವರ ವಿದುರಲ್ಲಿ ಕೆಮ್ಮಲಿಲ್ಲವಲ್ಲ....ಅಷ್ಟಸಾಕು.... ಅಮ್ಮ....ಆಯ್ಯೊ....ಪೂರ್ತಿ ಕತ್ತಲಾಯ್ತು....ಚಿಮಿಣಿ ಎಣ್ಣೆ ಏನಾದರೂ ಉಂಟೊ ರುಕ್ಕೂ ?
ರುಕ್ಕು : (ವಿಷಾದದ ನಗೆ ಬೀರುತ್ತೆ) ೧೮ | ನಾವೂ ಮನುಷ್ಯರು!
ಚೂರು ಸಾ ಇಲ್ಲ, ಕಿಟು ತಂದ ಕಟ್ಟಿಗೆ ಚೂರಿಂದ
ಬೆ೦ಕಿಯಾಗಬೇಕು;ಗ೦ಜಿ ಬೇಯಬೇಕು.
ರಾಮಣ್ಣ : ಹೌದೊ ರುಕ್ಕು,ಪೊರ್ಬುಗಳು ನಿನ್ನನ್ನು ಕೇಳಿ ಬಂದದ್ದು.
ಬಾಯಿಯವರಿಗೆ -
ರುಕ್ಕು :ಗೊತ್ತು೦ಟು,ಗೊತ್ತು೦ಟು.ನೀವಿಬ್ಬರೂ ಇಲ್ಲಿರುವಾಗ,
ಕಟ್ಟಿಗೆಗೆ ಹೋದ ನಾನು ಬಾಯಿಯವರನ್ನು ಕಂಡಿದ್ದೆ.
ರಾಮಣ್ಣ : ಹಾ೦. ನೋಡಿ, ನನಗೆ ಗೊತ್ತಿತ್ತು....ಆದರೆ ಕಟ್ಟಿಗೆ
ಕೇಳಾಲಿಲ್ಲವಷ್ಟೆ ಅಲ್ಲಿ?
ಲಸ್ರಾಜೋ:(ಹಲ್ಲು ಗಳನೆಲ್ಲ ತೋರಿಸುತ್ತ)
ಕಟ್ಟಿಗೆ ಅಲ್ಲಿ ಇದ್ದ ರಲ್ಲವೊ?
(ಎಲ್ಲರೂ ನಗುವರು)
ರುಕ್ಕು : ನಾನು ಗಂಜಿ ಕುಡಿದು ರಾತ್ರೆಯೇ ಬರ್ರೇನೆ
ಪೊರ್ಬುಗಳೆ-
. (ಲಸ್ರಾದೋ ಹೊರಡುವನು. ರುಕ್ಕು ಒಳಹೋಗುವಳು...
ರಾಮಣ್ಣ ಎದ್ದುನಿ೦ತು, ಕುಂಟುತ್ತ ಬೀಲಳ್ಕೊಡಲು
ಹೊರಬಾಗಿಲವರೆಗೆ ಬರುವನು.....)
ರಾಮಣ್ಣ : ನೋಡಿ. ಇಲ್ಲವಾದ್ರೆ ಅವರಿಗೇನು ಕಡಿಮೆಯೋ?ಇ೦ಗ್ಲೀಷು
ಗೊತ್ತು೦ಟು,ಎಲ್ಲ ಉ೦ಟು.ಬಿ.ಎ. ಕಲ್ತವರಿಗೆ ಒ೦ದು ಮೂವತ್ತು ರೂಪಾಯಿ ಕೆಲಸ ಎಲ್ಲಿಯೂ ಸಿಕ್ಕ
ಲಿಕ್ಕಿಲ್ಲವೊ? ಈ ಯೂನಿಯನ್ ಗೀನಿಯನ್ ಯಾಕೆ
ನಮ್ಮ ಕಾರ್ಯದರ್ಶಿಗೆ?
ಲಸ್ರಾದೋ : ಹೌದು,ಹೌದು,
ರಾಮಣ್ಣ : ಹಾ೦ - ಅದೇ, ಕಾಲ ಬದಲಾಗಿದೆ...ನಮ್ಮ ಜನಕ್ಕೆ
ಸಹಾಯ ಉ೦ಟು;ನಮ್ಮ ಜನ ಎದ್ದಿದ್ದಾರೆ. ಲಸ್ರಾದೋ:ಹೌದು ಕಾಲ ಬದಲಾಗಿದೆ.
ರಾಮಣ್ಣ:ನೋಡಿ - ಓಡಿನ ನಾನು, ಮಗ್ಗದ ನೀವು, ಬೀಡಿಯ
ಆದಂ ಸಾಹೇಬ್ರು - ನಾವೆಲ್ಲ ಒಂದೇ ಅಲ್ವೋ- ಒಂದೇ
ಗುರಿ ಅಲ್ವೋ? ನಾವೆಲ್ಲ ಕೇಳೋದೂ ಒ೦ದೇ. ಹೆಚ್ಚು
ಕೂಲಿ, ತುಟ್ಟಿಭತ್ತೆ, ಬೋನಸು, ನಮ್ಮ ರಾಜ್ಯ.
ಅಲ್ವೋ?ಹೌದೂ, ಅಲ್ವೋ?
ಲಸ್ರಾದೋ:ಹೌದು,ನಾವೆಲ್ರೂ ಕೇಳೂವುದು ಒ೦ದೇ.
(ರ೦ಗದ ಖಕ್ಕಕ್ಕೆ ತಲಪಿದ ಮೇಲೆ,ಲಸ್ರಾದೋ ಟೊಪ್ಪಿ ತೆಗೆದು
"ಬರ್ತೇನೆ" ಎ೦ದು ನುಡಿದು,ಪುನಃ ಟೊಫ್ಫಿ ಇಡುವನು.
ರಮಣ್ಣ "ಹೋಗಿಬನ್ನಿ" ಎನ್ನುವನು.
ಕಿಟ್ಟು ತಿಟ್ಟಿಯ ಮೇಲಿದ್ದ ಹೊದಿಕೆಯನ್ನು ತ೦ದು ತ೦ದೆಗೆ
ಹೊದಿಸುನವನು.)
ಕಿಟ್ಟು:ಅಪ್ಪಾ!ಛಳಿ ಉ೦ಟಪ್ಪಾ.......
ರುಕ್ಕು:(ಒಳಗಿ೦ದ)
ಆ ಕತ್ತಲೆಯಲ್ಲಿ ಯಾಕೆ ಈಚೆಗೆ ಬರಬಾರದೆ? ಬೆಳಕು
ಮಾಡಿದ್ದೇನೆ.
(ಮುಂದೆ ನಡೆಯುತ್ತ ಕರೆದೊಯುವನು)
ಹೌದಪ್ಪಾ, ಇಲ್ಲಿ ಕತ್ತಲೆ....ಆಚೆ ಬೆಳಕಿದೆ.....ಮು೦ದೆ
ಹೋಗುವ.
- ↑ ಕಾರಂತರ ಸ್ಮೃತಿಪಟಲದಲ್ಲಿ' ಕೃತಿಯ ಮೊದಲ ಭಾಗದಲ್ಲಿ ನನ್ನ ಪ್ರಸ್ತಾಪವಿದೆಯೆಂದು ಸಾಹಿತ್ಯ ಮಿತ್ರದ್ವಯರು ನಾಲ್ಕು ವರ್ಷ ಹಿಂದೆ ಹೇಳಿದರು. ಆ ಮೊದಲಭಾಗ ಪುಸ್ತಕದಂಗಡಿಯಿಂದ ಖರೀದಿ ಮಾಡಿದ್ದು ಮನೆಯಲ್ಲಿತ್ತು. ಓದಿರಲಿಲ್ಲ. ಮಿತ್ರರ ಎದುರಲ್ಲೇ ಪುಸ್ತಕ ತರಿಸಿದೆ. ತೆರೆದು ಪುಟ ಪತ್ತೆ ಹಚ್ಚಲು ಅವರು ನೆರವಾದರು. ಅಲ್ಲಿತ್ತು ಈ ಕೆಳಗಿನ ವಾಕ್ಯಃ
- "ಸುಳ್ಯ - ಮಕ್ಕಳ ಕೂಟದಲ್ಲಿ ಸೇರಿಕೊಂಡ ಕುಳಕುಂದೆ ಶಿವರಾಯನೆಂಬಾತ ಇಂದು ನಿರಂಜನನಾಗಿ ಕರ್ನಾಟಕದಲ್ಲಿ ಹೆಸರಾಗಿದ್ದಾನೆ.”
- ನಾನೆಂದೆ: “ತಮ್ಮ ಪ್ರತಿಷ್ಟೆ ಮೆರೆಸಲು ನನ್ನ ಹೆಸರನ್ನು ಕಾರಂತರು ಬಳಸಬೇಕಾಗಿರಲಿಲ್ಲ."