ನಾ ದೇವನಲ್ಲದೆ ನೀ ದೇವನೆ ? ನೀ ದೇವನಾದಡೆ ಎನ್ನನೇಕೆ ಸಲಹೆ ? ಆರೈದು ಒಂದು ಕುಡಿತೆ ಉದಕವನೆರೆವೆ ಹಸಿದಾಗ ಒಂದು ತುತ್ತು ಓಗರವನಿಕ್ಕುವೆ._ ನಾ ದೇವ ಕಾಣಾ ಗುಹೇಶ್ವರಾ !