ನಿತ್ಯನಿರಂಜನ ಕುಳ್ಳಿರಿಸಿ, ಜಂಗಮವ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನಿತ್ಯನಿರಂಜನ ಜಂಗಮವ ಭಕ್ತಿಯಿಂ ಬಿಜಯಂಗೈಸಿ ಮುಕ್ತಿಸಿಂಹಾಸನದ ಮೇಲೆ ಕುಳ್ಳಿರಿಸಿ
ಸತ್ಯೋದಕದಿಂದೆ ಪಾದಪ್ರಕ್ಷಾಲನವ ಮಾಡಿ ಆ ಜಂಗಮದ ಜ್ಞಾನಕ್ರಿಯಂಗಳೆಂಬ ಶ್ರೀಚರಣಯುಗಳವನು ಸುಚಿತ್ತವೆಂಬ ಹಸ್ತದ ಮಧ್ಯದಲ್ಲಿ ಮೂರ್ತಿಗೊಳಿಸಿ
ಸದ್ಭಾವನೆಂಬ ಹಸ್ತದಿಂದ ಚಿತ್ಪ್ರಕಾಶವೆಂಬ ವಿಭೂತಿಯ ಧರಿಸಿ
ಚಿತ್ಕರಣಂಗಳೆಂಬ ಪುಷ್ಪದ ಮಾಲೆಯ ಶೃಂಗರಿಸಿ ಸ್ವಾನುಭಾವವೆಂಬ ಧೂಪವನರ್ಪಿಸಿ ಸಮ್ಯಕ್‍ಜ್ಞಾನವೆಂಬ ದೀಪವ ಬೆಳಗಿ ನಿಃಶೂನ್ಯವೆಂಬ ಕೊಣದಲ್ಲಿರ್ದ ನಿರವಯ ಉದಕದ ತಂದು
ಆ ನಿರಂಜನಜಂಗಮದ ಪಾದಾಭಿಷೇಕವ ಮಾಡಿ
ನಿರಾಳವೆಂಬ ಬಟ್ಟಲಲ್ಲಿ ಗಡಣಿಸಿಕೊಂಡು ಪೂಜೆಯಂ ಸಂಪೂರ್ಣಂಗೈದು
ಬಳಿಕ ಆ ತೀರ್ಥವನು ಆ ಜಂಗಮವು ತಮ್ಮ ಲಿಂಗಕ್ಕೆ ಅರ್ಪಿಸಿ
ಆ ಲಿಂಗಸಹಿತ ಭೋಗಿಸಿ
ಉಳಿದ ಮಹಾಜ್ಞಾನತೀರ್ಥವನು ಅವಿರಳಭಕ್ತಿಯಿಂದೆ ಕೈಕೊಂಡು ತನ್ನ ಲಿಂಗಸಹಿತ ಸಲಿಸುವಾತನೆ ಅನಾದಿಭಕ್ತನು. ಇಂತಪ್ಪ ಅನಾದಿಭಕ್ತನ ಘನಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.