Title vachana saahitya
Author Basavanna
Year 1191 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ನಿಮಿಷದ ನಿಮಿಷಂ ಭೋ
ಕ್ಷಣದೊಳಗರ್ಧಂ ಭೋ
ಕಣ್ಣುಮುಚ್ಚಿ ಬಿಚ್ಚುವಿನಿಸು ಬೇಗಂ ಭೋ
ಸಂಸಾರದಾಗುಂ ಭೋ
ಸಂಸಾರದ ಹೋಗುಂ ಭೋ
ಸಂಸಾರಂ ಭೋ : ಕೂಡಲಸಂಗಮದೇವ ಮಾಡಿದ ಮಾಯಂ ಭೋ
ಅಭ್ರಚ್ಛಾಯಂ ಭೋ. 168