ಚಿತ್ರ: ನೆನಪಿರಲಿ
ಹಾಡಿದವರು: ಸೌಮ್ಯ ರಾವ್, ಅನೂಪ್, ಅನುಪಮ
ಸಂಗೀತ: ಹಂಸಲೇಖ
ಗಾಯಕ: ದ್ರೌಪದಿ ದ್ರೌಪದಿ ಎಂದಿನದೆ ಈ ಕದನ
ಷಟ್ಪದಿ ಚೌಪದಿ ಯಾವುದರಲೀ ಈ ಕವನ
ಗಾಯಕಿ: ಮನಸೆ ಮಹಾ ಮರ್ಕಟ
ಆಯ್ಕೆ ಮಹಾ ಸಂಕಟ
ಚಿತ್ತ ಮಹಾ ಚಂಚಲ
ಆಸೆ ತಿಮಿಂಗಿಲ....
ಗಾಯಕ: ಮಳೆಗೆ ಮನೆ ಮಣ್ಣಿನೊಳಗೆ
ಮಳೆ ಮನಸು ಇದೆ ಗಾಳಿಯೊಳಗೆ
ಗಾಯಕಿ: ಸುಖದ ಬಹುಮಾನ ಉಚಿತ ಕೊಡುವಂತ
ಪಂಚ ಭೂತಗಳ ಜರಿವುದೆಂತೋ...
ಪೂಜೆಗೆ ಹೂಗಳನು ಕಟ್ಟೋ ಕೈಗಳಿಗೆ
ಗಂಧ ಸೋಕಿದರೆ ಜರಿವುದೆಂತೋ..
ಮನಸೆ ಮಹಾ ಮರ್ಕಟ..
ಸನಿಹ ಮಹಾ ಪ್ರೇರಕ..
ಚಿತ್ತ ಮಹಾ ಚಂಚಲ..
ಮನ್ಮಥ ಸಮಯ ಸಾಧಕ..
ಗಾಯಕ: ಇಂದು ಗೆಲ್ಲು ಇಂದ್ರಿಯಗಳ...
ಕೊಲ್ಲು ಅರಿಷಡ್ವರ್ಗಗಳ...
ಗಾಯಕಿ: ಎಳೆಯ ಬಿಸಿಲೊಳಗೆ ಕುಣಿವ ತನುವೊಳಗೆ..
ಕಹಿಯ ವಿಷಘಳಿಗೆ ತರುವುದೆಂತೋ...
ಕಣ್ಣು ಮುಚ್ಚಿದರು ಕಾಣೋ ಸ್ವರ್ಗವನು
ಸವಿಯೋ ಹೆಣ್ಣೆದೆಯ ಜರಿವುದೆಂತೋ...
ಗಾಯಕ: ದ್ರೌಪದಿ ದ್ರೌಪದಿ ಎಂದಿನದೆ ಈ ಕದನ...ಹಾ ಹಾ
ಷಟ್ಪದಿ... ಚೌಪದಿ....
ಯಾವುದರಲೀ ಈ ಕವನ....ಆ
ಗಾಯಕ: ಬಯಕೆ ಬೆಂಕಿ ಬಲೆಯಾಗಿದೆ
ಭ್ರಮರ ನಿನ್ನ ನೋಡಬೇಕಿದೆ...
ಗಾಯಕಿ: ಹೂವು ಹಾರಲಾರದು ಹಾಡಿ ಕೂಗಲಾರದು...
ಅರಳದಿರಲಾರದು ಬೆರೆವುದೆಂತೋ...
ಪ್ರಥಮ ಅನುಭವದ ಮಧುರ ನೆನಪುಗಳ...
ಸುರಿದು ಹೋದವನ ಮರೆವುದೆಂತೋ...
ಮನಸೆ ಮಹಾ ಮರ್ಕಟ
ವಿರಹ ಮಹಾ ದುಶ್ಚಟ
ಚಿತ್ತ ಮಹಾ ಚಂಚಲ
ತಿಳಿಯೋ ಹೆಣ್ಣ ಹಂಬಲ
ಗಾಯಕ: ದ್ರೌಪದಿ ದ್ರೌಪದಿ ಎಂದಿನದೆ ಈ ಕದನ...
ಷಟ್ಪದಿ... ಚೌಪದಿ... ಯಾವುದರಲೀ ಈ ಕವನ....