ನೆನಹಿನ ಸುಖವ ನೋಟ ನುಂಗಿತ್ತು ನೋಟದ ಸುಖವ ಕೂಟ ನುಂಗಿತ್ತು. ಕೂಟದ ಸುಖವ ಸಮರಸ ನುಂಗಿತ್ತು ಸಮರಸದ ಸುಖವ ಪರವಶ ನುಂಗಿತ್ತು ಪರವಶದ ಸುಖವ ಕೂಡಲಚೆನ್ನಸಂಗಯ್ಯ ತಾನೇ ಬಲ್ಲ.