ನೆನಹಿಲ್ಲದ ಘನವಸ್ತು ಜಗತ್ ಸೃಷ್ಟ ್ಯರ್ಥಕಾರಣ
ನೆನೆದ ನೆನಹೇ ಸಾರಯವಾಯಿತ್ತಯ್ಯ. ಆ ನೆನಹು ಅಧೋಮುಖ ಊಧ್ರ್ವಮುಖವೆಂದು ಎರಡು ತೆರನಾಗಿಪ್ಪುದಯ್ಯ. ಅಧೋಮುಖದ ಪ್ರಕೃತಿಸೃಷ್ಟಿಯಿಂದ ಹರಿ ವಿರಿಂಚಿ ಮೊದಲಾದ ಸಮಸ್ತ ಜಗತ್ತೆಲ್ಲಾ ಹುಟ್ಟಿತ್ತು ನೋಡಾ. ಊಧ್ರ್ವಮುಖವಪ್ಪ ನಿಜ ಚಿನ್ಮಯದ ಮಹಾಜ್ಞಾನಪ್ರಭೆಯ ಸಾಮಥ್ರ್ಯದಲ್ಲಿ ಪ್ರಮಥರು ರುದ್ರರು ಮೊದಲಾದ ಮಹಾಗಣಂಗಳುತ್ಪತ್ತಿಯಾದರಯ್ಯ. ಹೀಂಗೆ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಸೃಷ್ಟಿ ಎರಡು ಪರಿಯಾಯವಾಗಿಪ್ಪುದು ಕಾಣಿರೋ.