ನೆನಹು ನೆನೆವ ಮನದಲ್ಲಿಲ್ಲ ತನುವಿನಾಶೆ ಮುನ್ನವಿಲ್ಲ. ಮನ ಮನವನೊಳಕೊಂಡ ಘನಘನವನೇನೆಂಬೆ ! ತನ್ನಲ್ಲಿ ತಾನೆಯಾಯಿತ್ತು ! ನೆನೆಯಲಿಲ್ಲದ ನಿಂದ ನಿರಾಳ ಅನಾಗತವಾದುದ ಕಂಡು ನಾನು ಬೆರಗಾದೆನು. ಅಂತು ಇಂತು ಎನಲಿಲ್ಲ ಚಿಂತೆಯಿಲ್ಲದ ಮಹಾಘನವ. ಗುಹೇಶ್ವರಲಿಂಗವ ಬೇರೆ ಅರಸಲಿಲ್ಲ.