ನೆಲನಿಲ್ಲದಠಾವಿನಲ್ಲಿ ಬೀಜವಿಲ್ಲದ ಮರ ಹುಟ್ಟಿತ್ತು. ಅದು ಹೂವಿಲ್ಲದೆ ಕಾಯಾಯಿತ್ತು ಕಾಯಿಲ್ಲದೆ ಹಣ್ಣಾಯಿತ್ತು ಹಣ್ಣಿಲ್ಲದ ಸವಿರುಚಿಯ ಅಲ್ಲಮನುಂಡು ತೃಪ್ತಿಯಾದ ಗುಹೇಶ್ವರನಲ್ಲಿ !