Pages   (key to Page Status)   

ನೇಹದ ಸುಖವ ನೋಟ ನುಂಗಿತ್ತು
ನೋಟದ ಸುಖವ ಕೂಟ ನುಂಗಿತ್ತು
ಕೂಟದ ಸುಖವ ಆಲಿಂಗನ ನುಂಗಿತ್ತು
ಆಲಿಂಗದ ಸುಖವ ಸಂಗ ನುಂಗಿತ್ತು
ಸಂಗದ ಸುಖವ ಪರವಶ ನುಂಗಿತ್ತು
ಪರವಶದ ಸುಖವ ಕೂಡಲಸಂಗಯ್ಯ ತಾನೆ ಬಲ್ಲ.