ನೋಟವುಳ್ಳನ್ನಕ್ಕರ ಕೂಟವುಂಟು ಭಾವವುಳ್ಳನ್ನಕ್ಕರ ಭ್ರಮೆಯುಂಟು. ನೋಟಗೆಟ್ಟು ಭಾವನಷ್ಟವಾಗಿ ಮನ ಲಯವಾದ ಬಳಿಕ ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಒಳಗೂ ನೋಡ ಹೊರಗೂ ನೋಡ