ನೋಟವೆ ಕೂಟ ಕೂಟವೆ ಪ್ರಾಣ ಪ್ರಾಣವೆ ಏಕ ಏಕವೆ ಸಮರಸ ಸಮರಸವೆ ಲಿಂಗ ಲಿಂಗವೆ ಪರಿಪೂರ್ಣ ಪರಿಪೂರ್ಣವೆ ಪರಬ್ರಹ್ಮ ಪರಬ್ರಹ್ಮವೆ ತಾನು !_ ಇಂತೀ ನಿಜವ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳು ಎತ್ತ ಬಲ್ಲರು ನೋಡಯ್ಯಾ.