ನೋಡಲಿಲ್ಲದ ನಾಮವಿಲ್ಲದ ಬಯಲು,



Pages   (key to Page Status)   


ನೋಡಲಿಲ್ಲದ ಬಯಲು
ಸೂಡಲಿಲ್ಲದ ಬಯಲು
ಕೂಡಲಿಲ್ಲದ ಬಯಲು
ನಾಮವಿಲ್ಲದ ಬಯಲು
ಸೀಮೆಯಿಲ್ಲದ ಬಯಲು
ಕಾರ್ಯವಿಲ್ಲದ ಬಯಲು
ಕಾರಣವಿಲ್ಲದ ಬಯಲು
ಅಖಂಡೇಶ್ವರನೆಂಬ ಬಯಲಿನ ಬಯಲು ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.