ನೋಡಲಿಲ್ಲದ ಶೃಂಗಾರ ಮಾತಾಡಲಿಲ್ಲದ ಶಬ್ದ ಬೇಡಲಿಲ್ಲದ ವರ_ನೋಡಿರೆ ನಿರಾಳವ ! ಬಾಡಲಿಲ್ಲದ ಸಸಿಯ ಬೆಳಸು ಕೂಡದೆ ಕೂಡಿತ್ತೊಂದು ಸುಖವ ಕಂಡೆ ನಾನು. ಇಲ್ಲದ ಉಪಕಾರ ಮೆಲ್ಲದ ಸವಿಯಿಂದ ಸುಖಿಯಾದೆ ಗುಹೇಶ್ವರಾ.