ನೋಡಿಹೆನೆಂದಡೆ ದೃಷ್ಟಿ ಕೊಳ್ಳದು. ಪೂಜಿಸಿಹೆನೆಂದಡೆ ಪೂಜೆಗೊಳ್ಳದಿನ್ನೆಂತೊ ! ಅರಿದೆನೆಂದಡೆ ಏನೂ ಇಲ್ಲ ಘನದೃಷ್ಟಿ ಕೂಡಲಚೆನ್ನಸಂಗಾ ಈ ಉಭಯಗೆಟ್ಟ ಲಿಂಗಾರ್ಚನೆ.