ನೋಡಿ ನೋಟವ ಮರೆದು ಕೂಡಿ ಕೂಟವ ಮರೆದು ಬಯಲ ಸಮರಸಕ್ಕೆ ಮರುಳಾಯಿತ್ತಲ್ಲಾ ಜೀವಪ್ರಾಣನ ಭೇದವಳಿದು ನಿಜವದಕ್ಕಾಯಿತ್ತಲ್ಲಾ. ಅನ್ಯಚಿಹ್ನವಳಿದು ತನ್ನತಾ ಮರೆಯಿತ್ತು ಕೂಡಲಚೆನ್ನಸಂಗಾ ನೀನೆಂದೆ ನಿಂದಿತಲ್ಲಾ.