ನೋಳ್ಪುದೆ ನೋಟದೊಳ್ ನೋಟವೆ ನೋಟಕನೊಳ್ ನೋಟಕನೆ ಸಾಕ್ಷಿ ಸಾಕ್ಷಿಯೆ ಲಿಂಗ. ಲಿಂಗದಿಂದೆಲ್ಲವು ಆ ಲಿಂಗಕ್ಕೆ ಕುರುಪಿಲ್ಲ. ಲಿಂಗಕ್ಕೆ ಲಿಂಗವೇ ಲಿಂಗವಿದು ಬಹು ಗುಹ್ಯ ಗುರುಲಿಂಗದೆರಕದಿಂ ಸಚ್ಛಿಷ್ಯನೆ ಬಲ್ಲ. ಭವಿಗಳದನೆತ್ತ ಬಲ್ಲರು ? ಕಣ್ಣುಗೆಟ್ಟವರು ನೋಡಾ ಗುಹೇಶ್ವರಾ