ಪಂಚಬ್ರಹ್ಮವ ಕೆಡಿಸಿತ್ತು ಪ್ರಣವಮಂತ್ರವನೀಡಾಡಿತ್ತಲ್ಲಾ. ಕರ್ಮಂಗಳನೆ ಕಳೆಯಿತ್ತು ಕ್ರೀಗಳನೆ ಮೀರಿತ್ತಲ್ಲಾ. ಆಗಮದ ಹಲ್ಲನೆ ಕಳೆಯಿತ್ತು ಕೂಡಲಸಂಗಯ್ಯನ ಭಕ್ತಿಗಜ ಹೋ !