ಪಂಚಬ್ರಹ್ಮ ಮಂತ್ರವೆ ಶಿವನ ದೇಹವೆಂದರಿವುದಯ್ಯಾ. ಶಿರವೆ ಈಶಾನ್ಯ ಮುಖವೆ ತತ್ಪುರುಷ ಹೃದಯವೆ ಅಘೋರ ಗುಹ್ಯವೆ ವಾಮದೇವ ಪಾದವೆ ಸದ್ಯೋಜಾತಮಂತ್ರವಯ್ಯಾ ! ಇಂತೀ ಪಂಚಮಂತ್ರತನುರೂಪಾದವ ನೀನೆ ಕೂಡಲ[ಚೆನ್ನ]ಸಂಗಮದೇವಾ.