ಪಂಚಭೂತ ತ್ರಿಗುಣವನು ಸಂಚರಿಸಿ ರವಿಶಶಿಯ ಅಂತು ಕೂಡದ ರಜಬೀಜ ಬದ್ಧ ಬಂಧವಾಯಿತ್ತೊ ! ಸಂಗತಿಯಿಲ್ಲದವನಲ್ಲ ಪವನಗತಿಯ ನಡೆವವನಲ್ಲ. ಭೇದಿಸುತ್ತಿದ್ದಿತು ಲೋಕವೆಲ್ಲ ಆತನ ! ರಜಬೀಜವಿಲ್ಲದ ಬಯಲು ಬದ್ಧವಾಯಿತ್ತೆ ? ಇನ್ನೇನೆಂದು ಉಪಮಿಸುವೆ ಗುಹೇಶ್ವರಾ ಸಿದ್ಧರಾಮನ ನಾಮವನು ?