ಪಂಚೀಕೃತವೆಂಬ ಪಟ್ಟಣದೊಳಗೆ; ಈರೈದು ಕೇರಿ ನಾಲ್ಕೈದು ವೀಥಿ ಅಲ್ಲಿ ಹಾವ ಕಂಡೆ. ಹಿಂಡುಗಟ್ಟಿ ಆಡುವ ಮದಗಜವ ಕಂಡೆ! ಕೇಸರಿಯ ಕಂಡು ಮನ ಬೆದರಿತ್ತು ನೋಡಾ. ಮೂವರರಸಿಂಗೆ ಇಪ್ಪತ್ತೈದು ಪರಿವಾರ ಅಂಜಲಂಜ ಬೆಳಗಾಯಿತ್ತು ಗುಹೇಶ್ವರಾ