ಪಂಚೇಂದ್ರಿಯದ ಉರವಣೆಯ ಉದುಮದದ ಭರದ ಜವ್ವನದೊಡಲು ವೃಥಾ ಹೋಯಿತ್ತಲ್ಲಾ ? ತುಂಬಿ ಪರಿಮಳವ ಕೊಂಡು ಲಂಬಿಸುವ ತೆರನಂತೆ ಇನ್ನೆಂದಿಂಗೆ ಒಳಕೊಂಬೆಯೊ ಅಯ್ಯಾ ಚೆನ್ನಮಲ್ಲಿಕಾರ್ಜುನಾ ?