ಪಕ್ಕವಿಲ್ಲದ ಹಕ್ಕಿ ಮಿಕ್ಕು ಮೀರಿ ಹಾರಿಯಾಡುತ್ತಿರಲು
ಹಿಡಿದವರ ಹಿಡಿಯನೊಡೆದು
ಹರಿಯ ಹೃದಯವನೊಡೆದು
ಬ್ರಹ್ಮನ ಬ್ರಹ್ಮಾಂಡವನೊಡೆದು
ರುದ್ರನ gõ್ಞದ್ರವ ಭಸ್ಮವ ಮಾಡಿ
ದ್ವೈತಾದ್ವೈತವೆಂಬ ಮೇಹಕೊಂಡು
ಘನಕ್ಕೆ ಘನವೆಂಬ ಘುಟಿಕೆಯನೆ ನುಂಗಿ
ಇದ್ದುದೆಲ್ಲವಂ ನಿರ್ದೋಷವಂ ಮಾಡಿ ಮಿಕ್ಕಿನ ಘನವ ಹೇಳಲೊಲ್ಲದೆ ಇದಕ್ಕಿನ್ನಾರೆಂದಡೆ: ಕೂಡಲಚೆನ್ನಸಂಗಯ್ಯನ ಶರಣರಲ್ಲದೆ ಮತ್ತಾರು ಮತ್ತಾರು ಇಲ್ಲವೆಂದು ಘೂ ಘೂ ಘೂಕೆಂದಿತ್ತು !