ಪದಾರ್ಥವೆತ್ತ ? ಪ್ರಸಾದವೆತ್ತ ? ಪದಾರ್ಥವೇ ಪ್ರಸಾದ. ಈ ಎರಡರ ಮನಮಥನವಿಲ್ಲದ ಪ್ರಸಾದಿ `ಮಧ್ಯಂ ದೇವದತ್ತಂ ಮಧ್ಯಂ ಭುವನಸಂಗ'ವಿಲ್ಲದ ಪ್ರಸಾದಿ ಪ್ರಸಾದ ಪಾಕವ ವಿವರವನು ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಯೇ ಬಲ್ಲ.