ಪರಿಪಾಕವಾದ ಸಕಲಪದಾರ್ಥಂಗಳ ಹಸ್ತಪರುಷದಿಂದೆ ಶುದ್ಧಸಂಸ್ಕಾರವ ಮಾಡಿದಲ್ಲದೆ ಲಿಂಗಕ್ಕೆ ಅರ್ಪಿಸಲಾಗದು. ಅದೇನು ಕಾರಣವೆಂದಡೆ : ಹಸ್ತಪರುಷವಿಲ್ಲದ ಪದಾರ್ಥ ಉಚ್ಛಿಷ್ಟವೆನಿಸಿತ್ತು. ಹಸ್ತಪರುಷವಿಲ್ಲದ ಪದಾರ್ಥ ಪಂಚಭೂತ ಪ್ರಕೃತ ಜೀವಮಯವೆನಿಸಿತ್ತು. ಹಸ್ತಪರುಷವಿಲ್ಲದ ಪದಾರ್ಥ ಜೀರ್ಣಗೋಮಾಂಸವೆನಿಸಿತ್ತು. ಹಸ್ತಪರುಷವಿಲ್ಲದ ಪದಾರ್ಥ ಅಶುದ್ಧ ಕಿಲ್ಬಿಷವೆನಿಸಿತ್ತು. ಅದೆಂತೆಂದೊಡೆ : ``ಜಂಗಮಸ್ಯ ಕರಸ್ಪರ್ಶಾತ್ ಸರ್ವದ್ರವ್ಯಂ ಚ ಶುದ್ಧ್ಯತೇ