ಪರುಷದ ಅರಸಿಂಗೆ ಕಬ್ಬುನದ ಪರಿವಾರದಂತೆ ಮುನಿದೊಮ್ಮೆ ಮುಟ್ಟಿದರೂ ಸುವರ್ಣವಾಗುವುದು ತಪ್ಪದು ಸ್ನೇಹದಿಂದ ಮುಟ್ಟಿದರೂ ಸುವರ್ಣವಾಗುವುದು ತಪ್ಪದು. ಪರುಷ ಲೋಹದ ಸಂಗದಂತೆ ಕೂಡಲಚೆನ್ನಸಂಗನ ಶರಣರ ಸನ್ನಿಧಿ.