ಪಿಂಡಬ್ರಹ್ಮಾಂಡದೊಳಗೆ ತಂಡ ತಂಡದ ಲೋಕ. ಗಂಡ ಗಂಡರನಿರಿಸಿ ಬಡವರೊಡೆಯರ ನುಂಗಿ ನಾಡೊಳಗೆ ನಿಡು ನಡೆದು ಮಡುವನೆಲ್ಲವ ತೊಡೆದು ನಡುರಂಗದಲ್ಲಿ ಕೊಡನೊಡೆಯಲೀಯದೆ; ಮಡದಿಯೊಡಗೂಡಿ ಗಗನವನಡಿಗೆಯ ಮಾಡಿ ಉಂಡು ಸುಖಿಯಾದೆ ಗುಹೇಶ್ವರಾ.