ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೦೭

ಈ ಪುಟವನ್ನು ಪ್ರಕಟಿಸಲಾಗಿದೆ
೯೨
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.



ದನು, ಬೀರಬಲನು ಏನೊಂದುತ್ತರವನ್ನೂ ಕೊಡದೆ ಮುಖತಗ್ಗಿಸಿದನು. ಇದರಂತೆ ಪ್ರತಿದಿವಸ ತಪ್ಪದೆ ಬಾದಶಹನು ಅನ್ನ ಹತ್ತಿದನು; ಕಡೆಗೆ ಬೀರಬಲನು ಕೆಲವು ದಿವಸಗಳವರೆಗೆ ಇಲ್ಲಿಂದ ಹೊರಟು ಹೋಗಬೇಕು; ಎಂದು ನಿಶ್ಚಯಿಸಿದನು.
ಮುಂದೆ ಕೆಲವು ದಿವಸಗಳಾದಮೇಲೆ ಸಮಯವನ್ನು ನೋಡಿಕೊಂಡು “ ಶ್ರೀ ಜಗನ್ನಾಥನ ಯಾತ್ರೆಗೆ " ಹೋಗುವೆನೆಂದು ಹೇಳಿ ಎರಡು ತಿಂಗಳ ಮಟ್ಟಿಗೆ ಬಾದಶಹನ ಅಪ್ಪಣೆಯನ್ನು ಕೇಳಿದನು. ಬಾದಶಹನು ಸಂತೋಷದಿಂದ ಅಪ್ಪಣೆಕೊಟ್ಟನು. ಬೀರಬಲನು ಮನೆಗೆಬಂದು ಯತಿಯ ವೇಷವನ್ನು ಧಾರಣಮಾಡಿಕೊಂಡು ಯಾತ್ರಾರ್ಥವಾಗಿ ಹೊರಟವನಂತೆ ನಟಿಸಿ, ಬಾದಶಹನು ಮೃಗಯಾವಿಹಾರಕ್ಕಾಗಿ ಕಾದುಯಿಟ್ಟದ್ದ ಅಡವಿಯೊಳಗೆ ಹೋಗಿ ಇರಹತ್ತಿದನು.
ಮುಂದೆ ಹತ್ತೆಂಟು ದಿವಸಗಳಾದ ಬಳಿಕ ಬಾದಶಹನು ಸಾಯಂಕಾಲದ ಸಮಯದಲ್ಲಿ ಮೃಗಯಾ ವಿಹಾರಕ್ಕೊಸುಗ ಆ ಅರಣ್ಯಕ್ಕೆ ಹೋದನು ಅಲ್ಲಿ ಅಕಸ್ಮಾತ್ತಾಗಿ ಒಂದು ಹರಿಣವು ( ಚಿಗರೆಯು ) ದೃಷ್ಟಿಗೆ ಬೀಳಲು, ಅದರ ಬೆನ್ನು ಹತ್ತಿ ಕುದುರೆಯನ್ನು ಓಡಿಸಿದನು, ಅಷ್ಟರಲ್ಲಿ ಮಬ್ಬುಗತ್ತಲಾದ್ದರಿಂದ ಚಿಗರೆಯು ಕಾಣದೆಹೋಯಿತು ಬಾದಶಹನಿಗೆ ಮಾರ್ಗವು ತಿಳಿಯದೇ ಹೋಯಿತು ಸೈನ್ಯದವರೆಲ್ಲರು ಹಿಂದುಳಿದುಬಿಟ್ಟರು ಆ ಸಮಯದಲ್ಲಿ ಬಾದಶಹನಿಗೆ ದೀರ್ಘಶಂಕೆ (ಮಲವಿಸರ್ಜನೆ) ಗೆ ಹೋಗಬೇಕಾಗಿ ಬಂತು ಆಗ ಅವನು ಕುದುರೆಯನ್ನು ಒಂದುಗಿಡಕ್ಕೆ ಕಟ್ಟಿ ಹಾಕಿ, ಮತ್ತೊಂದು ಮರದಬುಡಕ್ಕೆ ಮಲವಿಸರ್ಜನೆಗೆ ಕುಳಿತುಕೊಂಡನು. ಇಂಥ ಸಮಯ ನಿರೀಕ್ಷಣ ಮಾಡುತ್ತ ಕುಳಿತುಕೊಂಡಿದ್ದ ಬೀರಬಲನು;-" ದೀರ್ಘದಂತ, ಕಪ್ಪಾದ ಮೋರೆ, ಉದ್ದವಾದ ತುಟಿಗಳುಳ್ಳ ಅಕರಾಳವಿಕರಾಳ ” ಸ್ವರೂಪವನ್ನು ಧಾರಣೆ ಮಾಡಿಕೊಂಡು ಆ ವೃಕ್ಷದ ಹಿಮ್ಮಗ್ಗಲಿನಿಂದ ಒದರುತ್ತ, ಕೂಗುತ್ತ, ಕುಣಿದಾಡುತ್ತ ಬಾದಶಹನನ್ನು ಅಂಜಿಸಬೇಕೆಂದು ಎದುರಿಗೆ ಬಂದು ನಿಂತು ಕೊಂಡನು. ಇಂಥ ಭಯಾನಕ ಸ್ವರೂಪವನ್ನು ನೋಡಿ ಬಾದಶಹನು ಗಡಗಡನೇ ನಡುಗಹತ್ತಿದನು. ಆಗ ವೇವಧಾರಿಯಾಗಿದ್ದ ಬೀರಬಲನು ಚೀತ್ಕಾರ ಮಾಡುತ್ತ. ಎಲೈ ನರಾಧಮನೇ ? ನೀನು ನಿನ್ನ ಪ್ರಜೆಗಳ ಮೇಲೆ ಬಹಳೇ ಬಲಾತ್ಕಾರವನ್ನು ನಡಿಸಿರುತ್ತಿ ! ಅದರಿಂದ ಅನ್ಯಾಯವರ್ತನವುಳ್ಳ ನಿನ್ನನ್ನು ತಿಂದುಬಿಡುತ್ತೇನೆ” ಎಂದು ಹೇಳಿದನು. ಆಗ ಬಾದಶಹನ ಮೈಮೇಲಿನ ಪ್ರಜ್ಞೆಯು ತಪ್ಪಿ ಹೋಯಿತು, ನಾಲಿಗೆಯು ತತ್ತರಿಸಹತ್ತಿತು. ಆಗ