ಳದ ಬುಡದಲ್ಲಿ ಬಂದು ಬಾದಶಹನಿಗೆ ಸಲಾಮುಮಾಡಿ ಪೃಥ್ವಿನಾಥ ? ದರಿದ್ರನಾದ ನಾನು ತಮ್ಮ ಸಮ್ಮುಖದಲ್ಲಿಯೇ ಕಳ್ಳರಿಂದ ಸುಲಿಗೆ ಮಾಡಿಸಿಕೊಳ್ಳಲ್ಪಟ್ಟೆನು
” ಎಂದು ನಿವೇದಿಸಿದನು. ಆಮಾತು ಬಾದಶಹನ ಕಿವಿಗೆ ಬಿದ್ದ
ಕೂಡಲೆ ಸಿಟ್ಟಿಗೆದ್ದು ಬೀರಬಲನಕಡೆಗೆ ನೋಡುತ್ತ . " ಬೀರಬಲ ! ನೀನು
ರಾಜ್ಯದಲ್ಲಿ ಮಾಡಿದ್ದ ಯೋಗ್ಯವ್ಯವಸ್ಥೆಯು ಇದೇ ಪ್ರಕಾರದ್ದಿರುವಂತೆ ಕಂಡುಬರುತ್ತಡೆ. ನಮ್ಮ ಸಮ್ಮುಖದಲ್ಲಿಯೇ ಈ ಬಡವನನ್ನು ಕಳ್ಳರು ಸುಲಿದು
ಕೊಂಡುಬಿಟ್ಟರು, ಅಂದಮೇಲೆ ನಮ್ಮ ಅಪರೋಕ್ಷದಲ್ಲಿ ಪ್ರಜೆಗಳ ದುರವಸ್ಥೆಯು ಏನಾಗುತ್ತಿರಬಹುದು ?” ಎಂದು ಪ್ರಶ್ನೆ ಮಾಡಿದನು, ಆಗ ಬೀರಬಲನು
ದೈರ್ಯದಿಂದ “ ಪೃಥ್ವಿಪತಿಯೆ ? ದೀಪದ ಬುಡದಲ್ಲಿ ಕತ್ತಲೆಯು ಇದ್ದೇಯಿರುವದು ” ಎಂದು ಉತ್ತರಕೊಟ್ಟನು. ಈ ಉತ್ತರದಿಂದ ಬಾದಶಹನಿಗೆ
ಆನಂದವಾಯಿತು.
-[೪೩. ಯಾವಕಾಲವು ಹಿತಕರವಾದದ್ದು ! ]
ಒಂದುದಿವಸ ಬಾದಶಹನು ರಾಜಕಾರ್ಯದಿಂದ ನಿವೃತ್ತನಾಗಿ ಸಭಾಸದರೊಡನೆ ವಿನೋದದಿಂದ ಮಾತಾಡುತ್ತ ಕುಳಿತುಕೊಂಡಿದ್ದನು, ಆಗ ಎಲ್ಲ ಸಭಾಸದರನ್ನು ಕುರಿತು. ( ಪ್ರಜೆಗಳಿಗೆ ಯಾವಕಾಲವು ಹಿತಕರವಾದದು ಎಂದು ಪ್ರಶ್ನೆ ಮಾಡಿದನು. ಆಗ ಅಲ್ಲಿ ಕುಳಿತುಕೊಂಡಿದ್ದ ಕೆಲವರು ಹಿಮಕಾಲವು ಹಿತವಾದದ್ದೆಂದೂ, ಕೆಲವರು ಉಷ್ಣಕಾಲವು ಹಿತವಾದದ್ದೆಂತಲೂ ಕೆಲವರು ವರ್ಪಾಕಾಲವು ಹಿತಕರವಾದದ್ದೆಂದೂ ತಮ್ಮ ತಮ್ಮ ಮನಸ್ಸಿಗೆ ತಿಳಿದಹಾಗೆ ಹೇಳಿದರು. ಈ ಉತ್ತರದಿಂದ ಬಾದಶಹನಿಗೆ ಸಂತೋಷವಾಗಲಿಲ್ಲ ಆಗ ಅವನು ಬೀರಬಲನಿಗೆ ಕೇಳಿದನು ಆಗ ಬೀರಬಲನು. " ಸ್ವಾಮಿ ಹೊಟ್ಟೆತುಂಬಿದ ಮೇಲೆ ಎಲ್ಲಕಾಲಗಳೂ ಹಿತಕರಗಳಾಗಿಯೇ ಪರಿಣಮಿಸುವವು ಬುಭುಕ್ಷಿತನಾದವನಿಗೆ ಯಾವ ಕಾಲದಲ್ಲಿಯಾದರೂ ಸುಖವು ದೊರೆಯಲಾರದು” ಎಂದು ಹೇಳಿದನು, ಇದರಿಂದ ಬಾದಶಹನಿಗೆ ಸಂತೋಷವಾಯಿತು.
-[೪೪, ಲೋಟಾ ನಥಾ.]-
ಒಂದುದಿವಸ ಬಾದಶಹನು ಬೀರಬಲನನ್ನು ಕುರಿತು "ಬ್ರಾಹ್ಮಣನು ನೀರಡಿಸಿದ್ದು ಯಾಕೆ ? ಮತ್ತು ಕತ್ತೆಯು ಉದಾಸೀನತೆಯನ್ನು ಯಾಕೆ ಧರಿಸಿದೆ ! ” ಎಂದು ಎರಡು ಪ್ರಶ್ನೆಗಳನ್ನು ಮಾಡಿದನು. ಆ ಕೂಡಲೆ ಬೀರಬಲನು " ಲೋಟಾನಥಾ ” ಎಂದು ಉತ್ತರಕೊಟ್ಟನು. ಅದುಹ್ಯಾಗೆ ವಿವರಿಸಿಹೇಳು ? ಎಂದು ಬಾದಶಹನು ಕೇಳಿದನು, ಅದಕ್ಕೆ ಬೀರಬಲನು ಬ್ರಾ)