ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೫

ಈ ಪುಟವನ್ನು ಪ್ರಕಟಿಸಲಾಗಿದೆ
೨೫೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.


ಸ್ತ್ರೀಯು ತನ್ನ ಚೀಲವು ಮೊದಲಿನಂತೆ ಇದ್ದದ್ದನ್ನು ಕಂಡು ಪ್ರಸನ್ನಳಾದಳು ಮನೆಗೆ ಹೋಗಿ ಚೀಲವನ್ನು ಬಿಚ್ಚಿ ನೋಡಲು ರೂಪಾಯಿಗಳು ಇದ್ದಿಲ್ಲ ತಾಮ್ರದ ನಾಣ್ಯಗಳೇ ಇದ್ದವು ಅದನ್ನು ನೋಡಿ ಅವಳು ಗಾಬರಿಯಾಗಿ ಕಾಜಿಯ ಬಳಿಗೆ ಬಂದು ಎಲ್ಲ ವೃತ್ತಾಂತವನ್ನು ತಿಳಸಿದಳು ಆಗ ಕಾಜಿಯು- ನೀನು ಚೀಲದಲ್ಲಿ ರೂಪಾಯಿಗಳನ್ನು ಹಾಕಿದ್ದೀಯೋ ಅಥವಾ ತಾಮ್ರದ ನಾಣ್ಯಗಳನ್ನು ಹಾಕಿದ್ದೀಯೋ ಎಂಬದನ್ನು ನಾನು ಅರಿತವನಲ್ಲ ನೀನು ಇಟ್ಟ ಚೀಲವನ್ನು ಕೈಯಿಂದ ಸಹಾ ಮುಟ್ಟಿಲ್ಲ; ಅದು ಮೊದಲು ಹ್ಯಾಗೆ ಇತ್ತೋ ಹಾಗೆಯೇ ಅದನ್ನು ಜೀವಾನಮಾಡಿ ಕೊಟ್ಟಿದ್ದೇನೆ ಹೆಚ್ಚಿನ ಸಂಗತಿಯನ್ನು ಅರಿತವನಲ್ಲ;” ಎಂದನು.
ಕಾಜಿಯ ಮಾತುಗಳನ್ನು ಕೇಳಿ ಅವಳು ಬಹು ಚಿಂತಾಕ್ರಾಂತಳಾಗಿ" ಕಾಜೀ ಸಾಹೇಬ, ನಾನು ನನ್ನ ಕೈಯಿಂದಲೇ ಎಂಟು ನೂರು ರೂಪಾಯಿಗಳನ್ನು ಆ ಚೀಲದಲ್ಲಿ ಹಾಕಿದ್ದೆನು ನಾನು ಕೇವಲ ದರಿದ್ರಳು ನನ್ನ ಜೀವನವು ಆ ದ್ರವ್ಯದಿಂದಲೇ ಸಾಗುತ್ತಿತ್ತು ಇನ್ನು ನಾನು ಉಪಜೀವಿಸುವ ಬಗೆ ಹ್ಯಾಗೆ ! ಎಲ್ಲಾ ಹಣವನ್ನು ಕೊಡದಿದ್ದರೂ ಚಿಂತೆ ಇಲ್ಲ ಅರ್ಧಹಣವ ನಾದರೂ ದಯಪಾಲಿಸಿರಿ ತಾವು ಕೇವಲ ಪ್ರಾಮಾಣಿಕರೆಂದು ನಂಬಿ ನನ್ನ ಯಾವತ್ತು ಆ ಸ್ತಿಯನ್ನು ಮಾಡಿ ಎಂಟು ನೂರು ರೂಪಾಯಿಗಳನ್ನು ಈ ಚೀಲದಲ್ಲಿ ತುಂಬಿ, ಉಳಿದ ರೂಪಾಯಿಗಳನ್ನು ತೆಗೆದುಕೊಂಡು ಚೀಲವನ್ನು ನಿಮ್ಮ ವಶಕ್ಕೆ ಕೊಟ್ಟು ಯಾತ್ರಿಗೆ ಹೋಗಲಿಲ್ಲವೇ ! ತಮ್ಮಂಥವರು ಈ ಪ್ರಕಾರ ವಿಶ್ವಾಸಘಾತಕ ತನವನ್ನು ಮಾಡಬಾರದು! ” ಅವಳ ಮಾತುಗಳನ್ನು ಕೇಳಿ ಕಾಜಿಯು ಬಹಳೇ ಕುಪಿತನಾಗಿ “ ಸುಮ್ಮನೆ ಆರೋಪವನು ಹೊರಿಸಬೇಡ ಹೊರಟು ಹೋಗು ! ಇಲ್ಲದಿದ್ದರೆ ಸೇವಕರ ಕಡೆಯಿಂದ ದಬ್ಬಿಸಬೇಕಾದೀತು ? ” ಎಂದು ಬೆದರಿಸಿದನು.
{[gap}}"ಆ ಸ್ತ್ರೀಯು ನಿರಾಸೆಯಿಂದ ಬಾದಶಹನ ಬಳಿಗೆ ಹೋಗಿ ತನ್ನ ಆ ದ್ಯೋಪಾಂತ ವೃತ್ತಾಂತವನ್ನು ಕಥನ ಮಾಡಿದಳು ಆಗ ಬಾದಶಹನು ಕಾಜಿಯನ್ನು ಕರೆಯಕಳುಹಿ ಅವನು ಬಂದಮೇಲೆ "ಈ ಸ್ತ್ರೀಯಳು ನಿನ್ನ ಬಳಿಯಲ್ಲಿಟ್ಟ ಹಣದ ಚೀಲದ ವೃತ್ತಾಂತವೇನೂ ” ಎಂದು ಪ್ರಶ್ನೆ ಮಾಡಿದನು ಈ ಮಾತಿಗೆ ಕಾಜಿಯು "ಈಗ ಐದಾರು ವರುಷಗಳ ಹಿಂದೆ ಈ ಸ್ತ್ರೀ ಯು ನನ್ನ ಬಳಿಯಲ್ಲಿ ಒಂದು ಚೀಲವನ್ನು ಇಟ್ಟದ್ದು ನಿಜವು ಅವಳು ಹ್ಯಾಗೆ ಇಟ್ಟಿದ್ದಳೋ ಹಾಗೆಯೇ ಅದನ್ನು ಅವಳು ಮರಳಿಬಂದ ಮೇಲೆ ಒಪ್ಪಿಸಿ ಬಿಟ್ಟಿದ್ದೇನೆ. ಅದರಲ್ಲಿ ಇವಳು ರೂಪಾಯಿಗಳನ್ನು ಇಟ್ಟಿದ್ದಳೋ, ಅಥವಾ