ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೭

ಈ ಪುಟವನ್ನು ಪ್ರಕಟಿಸಲಾಗಿದೆ
೨೫೬
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.

ನಾಥ ? ನಿನ್ನೆ ಹಾಸಿಗೆಯನ್ನು ತೆಗೆಯಲಿಕ್ಕೆ ಬಂದಾಗ, ಕತ್ತರಿಸಲ್ಪಟ್ಟ ಭಾಗವು ನನ್ನ ದೃಷ್ಟಿಗೆ ಬಿತ್ತು. ಅದನ್ನು ಉಳಿದ ಪರಿಚಾರಕರಿಗೆ ತೋರಿಸಿದೆನು. ನಾನು ಗಾಬರಿಯಾಗಿರುವದನ್ನು ನೋಡಿ ಒಬ್ಬ ವೃದ್ಧ ಮನುಷ್ಯನು ರಪು ಮಾಡಿಸಿಬಿಡೆಂದು ಹೇಳಿದ್ದರಿಂದ ನಾನು ರಪುಗಾರನನ್ನು ಕರೆಯಿಸಿ ಮೇಲು ಹಾಸಿಗೆಯನ್ನು ಮೊದಲಿನಂತೆ ಮಾಡಿಸಿ ಬಿಟ್ಟೆನು. ಆಗ ಬಾದಶಹನು ರಪುಗಾರನನ್ನು ಕರೆಯಿಸಿ "ನೀನು ಈಗ ಕೆಲವು ದಿವಸಗಳ ಹಿಂದೆ ಒಂದು ಹಣದ ಚೀಲವನ್ನು ರಪು ಮಾಡಿದ್ದಿಯಾ? ಸತ್ಯವಾದ ಸಂಗತಿಯನ್ನು ತಿಳಿಸು"?

ರಪುಗಾರ- "ಅಹುದು; ಈಗ ನಾಲ್ಕೈದು ತಿಂಗಳುಗಳ ಹಿಂದೆ ಒಬ್ಬ ಕಾಜಿಗೆ ಒಂದು ಚೀಲವನ್ನು ರಪುಮಾಡಿ ಕೊಟ್ಟಿದ್ದೆನು".

ಬಾದಶಹ- "ಆ ಚೀಲದಲ್ಲಿ ಏನು ಯಿತ್ತು ? ಎಂಬದು ನಿನಗೆ ಗೊತ್ತು, ಅದೆಯೋ ?"

ರಪುಗಾರ- ಅದರಲ್ಲಿ ತಾಮ್ರದ ನಾಣ್ಯಗಳು ಇದ್ದವು.

ಬಾದಶಹ- ಆಕಾರ್ಯಕ್ಕೆ ನಿನಗೆ ಕಾಜಿಯು ಏನು ಕೊಟ್ಟನು.

ರಪುಗಾರ- ಎರಡು ರೂಪಾಯಿಗಳನ್ನೂ ಕೊಟ್ಟಿದ್ದನು.

ಬಾದಶಹ- ಅವುಗಳನ್ನು ನೀನು ವ್ಯಯಮಾಡಬಿಟ್ಟರುವಿಯೋ ! ಅಥವಾ ಇಟ್ಟುಕೊಂಡಿರುವಿಯೋ?

ರಪುಗಾರ- ಒಂದು ರೂಪಾಯಿಯನ್ನು ವ್ಯಯಮಾಡಿದ್ದೇನೆ, ಒಂದು ಹಾಗೇ ಅದೆ.

ಬಾದಶಹ- ಹಾಗಾದರೆ ; ಆ ರೂಪಾಯಿಯನ್ನು ಶೀಘ್ರವಾಗಿ ತೆಗೆದುಕೊಂಡು ಬಾ.

ರಪುಗಾರನು ರೂಪಾಯಿಯನ್ನು ತರಲಿಕ್ಕೆ ಹೋಗಲು, ಕಾಜಿಯನ್ನೂ ಆ ಸ್ತ್ರೀಯಳನ್ನೂ ಕರೆಯಿಸಿಕೊಂಡನು. ಸ್ವಲ್ಪ ಅವಧಿಯೊಳಗಾಗಿ ರಪುಗಾರನು ಬಂದನು. ಅವನನ್ನು ನೋಡಿದ ಕೂಡಲೆ ಕಾಜಿಯ ಮೋರೆಯು ಇಳಿಯಿತು. ಅವನ ಬಾಡಿದ ಮುಖವು ದೃಷ್ಟಿಗೆ ಬಿದ್ದ ಕೂಡಲೆ ಬಾದಶಹನಿಗೆ ಕಾಜಿಯು ಅಪರಾಧಿಯಾಗಿರುವನೆಂದು ನಿಶ್ಚಯವಾಗಿ ಹೋಯಿತು. ಬಾದಶಹನು ಆ ರೂಪಾಯಿಯನ್ನು ಆ ಸ್ತ್ರೀಯಳ ಕೈಯಲ್ಲಿ ಕೊಟ್ಟು "ಇದರಮೇಲೆ ನೀನು ಮಾಡಿರುವ ಚಿನ್ನವು ಅದೆಯೋ ಹ್ಯಾಗೆ!ಎಂಬದನ್ನು ಪರೀಕ್ಷಿಸಿ ಹೇಳು" ಎಂದು ಹೇಳಿದನು. ಅವಳು ಒಳ್ಳೇ ತೀಕ್ಷ್ಣ ದೃಷ್ಟಿಯಿಂದ ನೋಡಿ ಆ ಚಿನ್ನವನ್ನು ಬಾದಶಹನಿಗೆ ತೋರಿಸಿದಳು. ಆಮೇಲೆ ಆ ಚೀಲವನ್ನು ರಪ್ತುಗಾರನಿಗೆ ತೋರಿಸಿ,-"ನೀನು ರಪುಮಾಡಿದ ಚೀಲವು ಇದೆಯೋ?