ತು ಅವನನ್ನು ನೋಡಿದ ಕೂಡಲೆ ಆ ಬ್ರಾಹ್ಮಣನ ಮನಸ್ಸಿನಲ್ಲಿ
" ಈ ಫಕೀರನ ಬಳಿಯಲ್ಲಿ ನನ್ನ ಹಣವನ್ನಿಟ್ಟರೆ, ಸುರಕ್ಷಿತವಾಗಿ ಇರಬಹುದು, ಎಂಬ ಆಲೋಚನೆಯು ಹುಟ್ಟಿತು ಮರುದಿವಸ ಆ ಬಾ ಬ್ರಾಹ್ಮಣನು ರೂಪಾಯಿಗಳನ್ನು ಕಟ್ಟಿಕೊಂಡು ಫಕೀರನ ಹತ್ತಿರಬಂದು : ಸಾಂ ಈ ಸಾಹೇಬ! ನಾನು ಕಾಶೀಯಾತ್ರೆಗೆ ಹೊರಡಬೇಕೆಂದು ಯೋಚಿಸಿದ್ದೇನೆ ನನ್ನಲ್ಲಿರುವ ಈ ಹಣವನ್ನು ಸಂಗಡ ತೆಗೆದುಕೊಂಡುಹೋದರೆ ಮಾರ್ಗದಲ್ಲಿ ಚೋರೋಪ
ದ್ರದ ಭಯವುಂಟಾಗುವದು ಅದರಿಂದ ಈ ಹಣವನ್ನು ತಮ್ಮ ವಶಕ್ಕೆ ಕೊಟ್ಟು ಹೋಗಬೇಕೆಂದು ಮಾಡಿದ್ದೇನೆ ” ಎಂದು ವಿನಯಪೂರಕವಾಗಿ ಹೇಳಿಕೊಂಡನು. ಅದನ್ನು ಕೇಳಿ ಫಕೀರನು. “ ಛೇ, ಛೇ ಈಕೆಲಸವು ನನ್ನಿಂದ ಅಸಾಧ್ಯವು. ನೀನು ಈ ಹಣವನ್ನು ಬೇರೆಯವರ ವಶಕ್ಕೆ ಕೊಟ್ಟು ಹೋಗು ಎಂದನು. ಈಪ್ರಕಾರ ನಿಸ್ಪೃಹತೆಯ ಮಾತುಗಳನ್ನು ಕೇಳಿ ಆ ಫಕೀರನ ಮೇಲೆ ಹೆಚ್ಚು ವಿಶ್ವಾಸವು ಹುಟ್ಟ, " ಶಾಹಸಾಹೇಬ ? ತಾವೇ ಕೃಪೆಮಾಡಿ
ಈ ಹಣವನ್ನು ಇಟ್ಟುಕೊಳ್ಳಬೇಕು ” ಎಂದು ಹೇಳಿದನು. ಆಗ ಫಕೀರನು ಬ್ರಾಹ್ಮಣನ ಆಗ್ರಹದಿಂದ ಒಪ್ಪಿಕೊಂಡು ಅವನಕಡೆಯಿಂದಲೇ ಒಂದುಕಡೆಯಲ್ಲಿ ಭೂಗತಮಾಡಿಸಿದನು, ಫಕೀರನ ಹೇಳಿಕೆಯಂತೆ ವ್ಯವಸ್ಥೆಯನ್ನು ಮಾಡಿ ಬ್ರಾಹ್ಮಣನು ನಿಶ್ಚಿಂತನಾಗಿ ಯಾತ್ರೆಗೆ ಹೊರಟುಹೋದನು.
ಮುಂದೆ ಎರಡು ವರುಷಗಳ ಮೇಲೆ ಬ್ರಾಹ್ಮಣನು ಯಾತ್ರೆಯಿಂದ ಮರಳಿಬಂದು ತನ್ನ ಹಣವನ್ನು ತೆಗೆದುಕೊಳ್ಳಬೇಕೆಂದು ಫಕೀರನ ಬಳಿಗೆ ಹೋಗಿ ತನ್ನ ಹಣವನ್ನು ಕೊಡಿರೆಂದು ಕೇಳಿದನು. ಆಗ ಫಕೀರನು ನಾನು ನಿನ್ನ ಹಣವನ್ನು ಕಣ್ಣೆತ್ತಿ ಸಹಾ ನೋಡಿಲ್ಲ, ನೀನು ಎಲ್ಲಿ ಭೂಗತ ಮಾಡಿದ್ವಿಯೋ ಅಲ್ಲಿಯೇ ಇರಬಹುದು ತೆಗೆದುಕೊಂಡು ಹೋಗು ? ಎಂದು ಹೇಳಿದನು.ಬ್ರಾಹ್ಮಣನು ಆಸ್ಥಳವನ್ನು ಅಗಿದು ನೋಡಿದನು ಹಣವು ಇದ್ದಿಲ್ಲ;ಬಹಳ ದುಃಖಿತನಾಗಿ ಫಕೀರನ ಬಳಿಗೆ ಬಂದು ಹೇಳಿದನು ಅವನು ಆಮಾತನ್ನು ಕಿವಿಯ ಮೇಲೆಹಾಕಿಕೊಳ್ಳಲಿಲ್ಲ; ನಿರುಪಾಯವಾಗಿ ತನ್ನ ದಡ್ಡತನಕೈ ತಾನೇ ನಿಂದಿಸಿಕೊಳ್ಳುತ್ತ ಪಶ್ಚಾತ್ತಾಪಯುಕ್ತನಾಗಿ ಮನೆಗೆ ಬರುತ್ತಿರಲು, ಈ ಸಂಗತಿಯನ್ನು ಬಾದಶಹನಿಗೆ ತಿಳಿಸಿ ನೋಡಬೇಕೆಂಬ ಯೋಚನೆಯು ಹುಟ್ಟಿತು ಆ ಕೂಡಲೆ ಬಾದಶಹನಸನ್ನಿಧಿಗೆ ಬಂದು ತನ್ನ ವೃತ್ತಾಂತವನ್ನೆಲ್ಲ ನಿವೇದಿಸಿದನು ಬಾದಶಹನಿಗೆ ದೊಡ್ಡ ಯೋಚನೆಯೇ ಬಿತ್ತು ಬೀರಬಲನು ಬಳಿಯಲ್ಲಿಯೇ ಇದ್ದನು. ಅವನು ಬಾದಶಹನನ್ನು ಕುರಿತು ಶ್ರೀನಾಥ ? ತಾವು ಚಿಂತೆ ಮಾಡಬಾರದು ನಾನು ಇವನ ಹಣವನ್ನು ಇವ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೩೪
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೩೬೩