ಹಾಕಿ ಹೋಗುತ್ತಿದ್ದನು, ಯಾವನಾದರೂ ಸೂಕ್ಷ್ಮ ಬುದ್ಧಿಯವನು ಹೌದಿನಹತ್ತಿರ ಬಂದು ಪರೀಕ್ಷಿಸಿನೋಡಿದರೂ ಸಹ ಮೇಲೆ ಹೊಂದಿಸಲ್ಪಟ್ಟ ಶುಭ್ರವಾದ ವಸ್ತ್ರದಿಂದ ನೀರು ಸಹಾ ಹಾಲಿನಂತೆ ಶುಭ್ರವಾಗಿಯೇ ತೋರುತಿತ್ತು. ಮರುದಿವಸ ಪ್ರಾತಃಕಾಲದಲ್ಲಿ ಬೀರಬಲನು ಬಾದಶಹನನ್ನು ಕರಕೊಂಡು ಹೌದಿನಹತ್ತರ ಬಂದನು, ಹೌದಿನಮೇಲೆ ಆಚ್ಚಾದಿಸಲ್ಪಟ್ಟಿದ್ದ
ವಸ್ತ್ರವನ್ನು ತೆಗೆದನು ಆ ಹೌದು ಹಾಲಿನಿಂದ ತುಂಬುವದರ ಬದಲು ನೀರಿ
ನಿಂದಲೇ ತುಂಬಿಹೋಗಿತ್ತು, ಅದರಲ್ಲಿ ಹಾಲಿನ ಹೆಸರೇ ಇದ್ದಿಲ್ಲ ಅದನ್ನು ಕಂಡು ಬಾದಶಹನಿಗೆ ಬಹು ಸೋಜಿಗವಾಯಿತು ಯೋಚನೆಯಲ್ಲಿ ಬಿದ್ದನು.
ಅದನ್ನು ಕಂಡು ಬೀರಬಲನು- “ ಪೃಥ್ವಿನಾಥ ? ಸೌನಯಾನೋಕಾ ಏಕಮತ ” ನಾನು ಹೇಳಿದಸಾಮತಿಯು ಸತ್ಯವಾಯಿತೋ ಇಲ್ಲವೋ
ಎಂದು ಕೇಳಿದನು.
ಬಾದಶಹ-ಪ್ರತ್ಯಕ್ಷವಾಗಿದ್ದ ಮಾತಿನಲ್ಲಿ ಸಂದೇಹವೇನು ! ಆದರೂ ಈ
ವಿಷಯವನ್ನು ಇನ್ನೂ ಸ್ವಲ್ಪ ಹೆಚ್ಚು ಪರೀಕ್ಷಿಸಿನೋಡಬೇಕೆಂದು
ಅಭಿಲಾಷೆಯದೆ.
ಬೀರಬಲ-ಒಳ್ಳೇದು ಹಾಗೇ ಆಗಲಿ,
ಆಗ ಬಾದಶಹನು ಪ್ರಚ್ಛನ್ನ ವೇಷಧಾರಿಯಾಗಿ ಸಾಯಂಕಾಲದಲ್ಲಿ
ನಗರದ ಸಂಚಾರಾರ್ಥವಾಗಿ ಹೊರಟನು. ಸಂಚರಿಸುತ್ತಾ ಸಂಚರಿಸುತ್ತಾ
ಕತ್ತಲೆಯಾಗಲು ಒಂದುಮನೆಯ ಸಮೀಪಕ್ಕೆ ಬಂದನು. ಆ ಗೃಹವು ಬಹಳ
ಎತ್ತರವಾಗಿದ್ದರೂ ಸುಂದರವಾಗಿತ್ತು, ಈ ಮನೆಯಲ್ಲಿ ಪರೀಕ್ಷಿಸಿ ನೋಡ
ಬೇಕೆಂದು ಯೋಚಿಸಿ ಮುಂದೆಮಾಡಿದ ಬಾಗಿಲವನ್ನು ಅಂಗುಲಿಯಿಂದ ಟಕ
ಟಕ ಬಾರಿಸಿದನು. ಆಗ ಒಳಗಿನಿಂದ ಯಾರವರು ? ಎಂಬ ಧ್ವನಿಯು ಕೇಳ
ಬಂತು; ಆಗ ಬಾದಶಹನು. " ಯಜಮಾನರೇ ! ನಾನು ಪ್ರವಾಸಿಯು ಈ
ಪಟ್ಟಣಕ್ಕೆ ಬಂದು ಎರಡು ದಿವಸಗಳಾದವು ಈ ದಿವಸ ಸಾಯಂಕಾಲದ
ಮುಂದೆ ನಗರವನ್ನು ನೋಡಬೇಕೆಂದು ಇಚ್ಛಿಸಿ ಸಂಚಾರಮಾಡುತ್ತ ಮಾಡುತ್ತ ಬರಲು ನಾನು ಇಳಿದುಕೊಂಡಿದ್ದ ಸ್ಥಳವು ಗೊತ್ತಾಗದೆ ಹೋಯಿತು
ಮತ್ತು ನಡೆದುನಡೆದು ಬೇಸತ್ತುಹೋಗಿದ್ದೇನೆ, ಆದ್ದರಿಂದ ನನಗೆ ವಿಶ್ರಾಂತಿ
ಗೋಸುಗ ಕಿಂಚಿತ್‌ಸ್ಥಳವನ್ನು ಕೊಟ್ಟರೆ ತಮಗೆ ಬಹಳೇಪುಣ್ಯವು ಬರು
ವದು ” ಎಂದನು. ಆಗ ಮನೆಯ ಯಜಮಾನನು ಬಂದು ಬಾಗಿಲತೆರೆದು
ಬಾದಶಹನನ್ನು ಒಳಗೆ ಕರೆದುಕೊಂಡು ಭೋಜನದ ವಿಷಯದಲ್ಲಿ ವಿಚಾರಿ
ಸಿದನು, ಬಾದಶಹನು ಧನ್ಯವಾದಸಹಿತ ಅಸ್ವೀಕಾರಮಾಡಿದನು. ಮುಂದೆ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೪೪
ಈ ಪುಟವನ್ನು ಪ್ರಕಟಿಸಲಾಗಿದೆ
೩೫
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೭೩