ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೫೭

ಈ ಪುಟವನ್ನು ಪ್ರಕಟಿಸಲಾಗಿದೆ
೨೮೬
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.


ಮಗ್ನವಾಗಿತ್ತು ಆಗ ಬಾದಶಹನ ಮನಸ್ಸಿನಲ್ಲಿ ಅಕಸ್ಮಾತ್ತಾಗಿ, ಒಂದು ಪ್ರಶ್ನೆಯು ಉದ್ಭವಿಸಿತು " ಈ ಸಂಸಾರದಲ್ಲಿ ಉತ್ಪನ್ನವಾಗಿರುವ ಮನು ವ್ಯ, ಪಶು , ಪಕ್ಷಿ, ಕೀಡಕಾದಿಗಳಿಗೆ, ಅತ್ಯಂತ ಪ್ರಿಯವಾದ ವಸ್ತುವು ಯಾ ವದು ? ” ಎಂದು ಆಲೋಚಿಸುತ್ತಿರಲು, ಸೇಲೀಮನ ತೊದಲ್ನುಡಿಗಳು ಶ್ರ ವಣಪಥವನ್ನು ಸೇರಲು, ಅತಿ ಆನಂದವಾಯಿತು. ಆ ಆನಂದದ ಭರದಲ್ಲಿ ತ ನ್ನ ಸಭಾಸದರನ್ನು ಕುರಿತು. ಈ ಸಂಸಾರದಲ್ಲಿ ಎಲ್ಲಕ್ಕಿಂತಲೂ ಅಧಿಕ ವಾಗಿ ಪ್ರಿಯವಾಗಿರುವ ವಸ್ತುವು ಯಾವದು? ” ಎಂದು ಪ್ರಶ್ನೆ ಮಾಡಿದನು. ಆ ಸಮಯದಲ್ಲಿ ಅಲ್ಲಿ ಬೀರಬಲ ನಿದ್ದಿಲ್ಲ; ಅವನಿದ್ದರೆ ಆಕೂಡಲೆ ಪ್ರಶ್ನೆಗೆ ಉ ತರವು ಸಿಕ್ಕೇ ಹೋಗುತ್ತಿತ್ತು ಅವನು ಇಲ್ಲದ್ದರಿಂದ ತಮ್ಮ ಚಾತುರ್ಯ ವನ್ನು ಪ್ರಕಟೀಕರಿಸಲಿಕ್ಕೆ ಯೋಗ್ಯಸಮಯವು ದೊರಿಯಿತೆಂದು ಹಿಗ್ಗಿದ ರು ಯಾಕಂದರೆ ಬೀರಬಲನ ಉತ್ತರದ ಹೊರತು ಬಾದಶಹನಿಗೆ ಸಮಾಧಾ ನವೇ ಆಗುತ್ತಿದ್ದಿಲ್ಲ;
ಆದರೆ ಏನೆಂದು ಉತ್ತರವನ್ನು ಕೊಡಬೇಕು? ” ಎಂಬಬಗ್ಗೆ ಸಹ ಸ್ರಾವಧಿ ತರ್ಕ ವಿತರ್ಕಗಳು ನಡೆದವು ಒಂದಾದರೂ ಸಮರ್ಪಕ ವಾದಂತೆ ತಮಗೇ ಕಂಡು ಬರಲಿಲ್ಲ, ಕಡೆಯಲ್ಲಿ ಬಾದಶಹನ ಮಗ್ಗುಲಲ್ಲಿ ಕುಳಿತಿದ್ದ ಸೆ ಲೀಮನ ಮೇಲೆ ದೃಷ್ಟಿಬಿದ್ದು, ಬಹಳ ಮಾಡಿ ಬಾದಶಹನ ಮನಸ್ಸಿನಲ್ಲಿ ಪು ತ್ರಪ್ರೇಮವೇ ಅಧಿಕ ವಾದದ್ದೆಂದು ಇರಬಹುದು ಎಂದು ಕಲ್ಪನೆ ಮಾಡಿ ಕೊಂಡು ಅದೇರೀತಿಯಾಗಿ ಹೇಳಿಬಿಟ್ಟರು ಬಾದಶಹನು ಅದನ್ನು ಸ್ವೀಕರಿ ಸಿದನು.
ಕಿಂಚಿತ್‌ಕಾಲದ ಮೇಲೆ ಬೀರಬಲನು ಸಭಾಸ್ಥಾನವನ್ನು ಪ್ರವೇಶಿ ಸಿದನು. ಬಾದಕಹನು ಅವನಿಗೂ ಅದೇ ಪ್ರಶ್ನೆಯನ್ನು ಮಾಡಿದನು ಕೂಡ ಲೆ ಬೀರಬಲನು- ಪೃಥ್ವೀಶ ! ಎಲ್ಲ ವಸ್ತುಗಳಿಗಿಂತ ಸ್ವಂತ ಜೀವವು ಅತ್ಯಂ ತ ಪ್ರಿಯವಾದದ್ದು, ಇದಕ್ಕಿಂತಲೂ ಹೆಚ್ಚಾದ ಒಡವೆಯು ಬೇರೊಂದು ಇ ಲ್ಲ ,” ಎಂದು ಉತ್ತರಕೊಟ್ಟನು ಈ ಮಾತಿಗೆ ಬಾದಶಹನು ಪುನಃ ವಾಹ ವ್ವಾ ! ಅಧಿಕಪ್ರಿಯವಾದದ್ದು ಪುತ್ರಪ್ರೇಮವು ನೀನು ಜೀವವು ಪ್ರಿಯವಾ ದದ್ದೆಂದು ಹೇಳುತ್ತೀ ? ಅದನ್ನು ಸಿದ್ಧ ಮಾಡಿ ತೋರಿಸು! ” ಎಂದನು ಆ ಕೂಡಲೆ ಬೀರಬಲನು ಈ ಮಾತಿನ ಸತ್ಯತೆಯನ್ನು ಈ ಗಲೇ ತೋರಿಸು ವೆನು, ತಮ್ಮ ಉಪವನದಲ್ಲಿಯ ನೀರುತುಂಬಿದ ಹೌಜನ್ನು ತೆರವು ಮಾಡಿಸ ಬೇಕು, ಮತ್ತು ಮರಿಯಿದ್ದ ಒಂದು ಕಪಿಯನ್ನು ತರುವಂತೆ ಸೇವಕರಿಗೆ ಆ ಜ್ಞಾಪಿಸಬೇಕು,” ಎಂದು ಹೇಳಿದನು ಬಾದಶಹನ ಆಜ್ಞೆಯಮೇರೆಗೆ ಎಲ್ಲ