ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೭೨

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೦೧

ದೊದಗಿತು, ಬಾದಶಹನ ಪಂಕ್ತಿಯಲ್ಲಿ ಭೋಜನಮಾಡಿದರೆ ಜಾತಿಭ್ರಷ್ಟತೆ ಯುಂಟಾಗಿ ಜನರಲ್ಲಿ ಹ್ಯಾಗೆ ಮೋರೆತೋರಿಸಲಿ ಎಂಬ ಅನೇಕ ಪ್ರಕಾರದ ಚಿಂತಾತರಂಗಗಳು ಉದ್ಭವಿಸಹತ್ತಿದ್ದರಿಂದ ಬುದ್ಧಿಯ ನಷ್ಟವಾಗಿ ಹೋ ಯಿತು. ಉಳಿದ ಕೆಲಸಗಳ ಕಡೆಗೆ ಮನವು ಹೋಗದಾಯಿತು. ಮನೆಗೆ ಹೊರಟು ಬಂದನು. ಚಿತ್ತವು ಶಾಂತವಾಗಲಿಲ್ಲ. ಊಟಉಡಿಗೆಗಳ ಕಡೆಗೆ ಲಕ್ಷ್ಯವೇ ಹೋಗಲಿಲ್ಲ. ರಾತ್ರಿಯಲ್ಲಿ ನಿದ್ರೆಯು ಬರಲಿಲ್ಲ ಹೀಗಾಗಿ ಆ ದಿವಸವನ್ನೆಲ್ಲಾ ಚಿಂತೆಯಲ್ಲಿಯೇ ಕಳೆದನು.

ಮರುದಿವಸ ಬಾದಶಹನು ಅನೇಕ ಪ್ರಕಾರದ ಭೋಜನ ಪದಾರ್ಥಗ ಳನ್ನು ಸಿದ್ಧಪಡಿಸಿದನು. ಆಮಂತ್ರಿತ ಜನರೆಲ್ಲರೂ ಬಂದುಕೂಡಿದರು. ಆಮೇಲೆ ಬೀರಬಿಲನನ್ನು ಕರೆಯ ಕಳುಹಿದನು. ಸೇವಕನು ಬೀರಬಲನನ್ನು ಕರೆ ಯಲು ಆ ಕೂಡಲೆ ಬಟ್ಟೆಗಳನ್ನು ಧರಿಸಿಕೊಂಡು ಸೇವಕನ ಬೆನ್ನು ಹತ್ತಿದನು. ಇನ್ನು ತನ್ನ ವಚನವನ್ನು ಹ್ಯಾಗೆ ಕಾಯ್ದು ಕೊಳ್ಳಬೇಕೆಂಬ ಚಿಂತೆಯಲ್ಲಿ ಮಗ್ನನಾಗಿ ಒಂದೊಂದೇ ಹೆಜ್ಜೆಯನ್ನಿ ಕ್ಕುತ್ತ ನಾಲ್ಕೂಕಡೆಗೆ ನೋಡುತ್ತ ನಡೆದಿರಲು, ಈಶ್ವರನ ಪ್ರೇರಣೆಯಿಂದ ಒಂದು ಹಂಚಿಕೆಯು ತೋರಿತು. ಒಬ್ಬ ಸ್ವರ್ಣಕಾರನು ವರಾಹಕೇಶದ ಕುಂಚ [ಬ್ರಶ್] ದಿಂದ ಬೆಳ್ಳಿಭಂಗಾರದ ಆಭೂಷಣಗಳನ್ನು ತೊಳೆಯಹತ್ತಿದ್ದನು ಅವನ ಮೇಲೆ ಬೀರಬಲನ ದೃ ಷ್ಠಿಯು ಹೋಯಿತು, ಕೂಡಲೆ ಅವನಬಳಿಯಲ್ಲಿ ಹೋಗಿ ಆ ಕುಂಚವನ್ನು ಸ್ವೀಕರಿಸಿಕೊಂಡು ಮಾರ್ಗವನ್ನು ಹಿಡಿದನು ಬಾದಶಹನ ಅರಮನೆಯು ಸ ಮೀಪಿಸಿತು. ಆಮಂತ್ರಿತ ಜನರೆಲ್ಲರೂ ಇವನ ಮಾರ್ಗಪ್ರತಿಜ್ಞೆಯನ್ನು ಮಾ ಡುತ್ತ ಕುಳಿತುಕೊಂಡಿದ್ದರು ಬೀರಬಲನನ್ನು ಕಂಡಕೂಡಲೆ ಎಲ್ಲರೂ ಆನಂ ದಿತರಾದರು ಬಾದಶಹನು ಪ್ರತಿದಿವಸಕ್ಕಿಂತಲೂ, ಅಧಿಕವಾಗಿ ಉಪಚಾರ ಮಾಡಿ, ತನ್ನ ಸಮೀಪದಲ್ಲಿಯೇ ಕುಳಿತುಕೊಳ್ಳಬೇಕೆಂದು ಆಜ್ಞೆ ಮಾಡಿದನು ಆಗ ಬೀರಬಲನು - - ಪೃಥ್ವಿನಾಥ ! ನಾನು ಭೋಜನಕ್ಕೆ ಬಂದಿರುವೆನು ಆದರೆ ನಾನು ಪ್ರತಿದಿವಸದಲ್ಲಿ ಆಚರಿಸತಕ್ಕ ಕೆಲವು ನಿಯಮಗಳುಂಟು ಅ ವುಗಳನ್ನು ತೀರಿಸಿಕೊಳ್ಳುವದಕ್ಕೆ ಆಜ್ಞೆ ಯಾಗಬೇಕು! ” ಎಂದನು ಅದಕ್ಕೆ ಬಾದಶಹನು - "ಏನೂಚಿಂತೆಯಿಲ್ಲ ! ನಿನ್ನ ಇಚ್ಛೆಯಂತೆಯೇ ಆಗಲಿ!", ಎಂದನು. ಅದಕ್ಕೆ ಬೀರಬಲನು ಪ್ರಾರ್ಥಿಸಿಕೊಂಡದ್ದೇನಂದರೇ, - "ಈ ಎಲ್ಲ ಭೋಜನ ಪಾತ್ರಗಳ ಮೇಲೆ ನಾನು ಜಲವನ್ನು ಪ್ರೋಕ್ಷಿಸುತ್ತೇನೆ ಅದ ರಿಂದ ಯಾರೂ ಅಪ್ರಸನ್ನರಾಗಕೂಡದು ಯಾಕಂದರೆ ನನ್ನ ನಿಯಮವೇ ಈ ಪ್ರಕಾರವಿರುವದು,, ಎಂದನು ಈ ಮಾತಿಗೆ ಬಾದಶಹನು - ನಿನ್ನ ಸಾಂ